ಬ್ರೇಕಿಂಗ್ ನ್ಯೂಸ್
15-04-23 08:38 pm Mangalore Correspondent ಕರಾವಳಿ
ಉಳ್ಳಾಲ, ಎ.15 : ಸೋಮೇಶ್ವರದ ಮುಖ್ಯ ಪಟ್ಟಣ ಕುಂಪಲದ 5,000 ಮಂದಿ ನೀರಿನ ಕೊರತೆಯಿಂದ ಕಂಗೆಟ್ಟಿದ್ದು, ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಶಾಸಕರು ಕುಂಪಲಕ್ಕೆ ಹಲವು ಯೋಜನೆಗಳನ್ನು ಕೈಗೊಂಡರೂ ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಕಾರ್ಯಗತಗೊಳಿಸಲು ಬಿಡದೆ ಇಂದು ಕುಂಪಲದ ಜನ ನೀರಿಗಾಗಿ ಕಷ್ಟಪಡುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಂಪಲ ಆರೋಪಿಸಿದ್ದಾರೆ.
ತೊಕ್ಕೊಟ್ಟುವಿನಲ್ಲಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಬೇಸಿಗೆ ಕಾಲ ಜೋರಾಗಿದ್ದು, ಸೋಮೇಶ್ವರದ ಮುಖ್ಯ ಪಟ್ಟಣ ಕುಂಪಲದಲ್ಲಿ ನೀರಿನ ಅಭಾವ ಹೆಚ್ಚಾಗಿ ತಲೆದೋರಿದೆ. ಹಿಂದೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಎದುರಾದಾಗ ಜಿಲ್ಲಾಡಳಿತ ಟಾಸ್ಕ್ ಪೋರ್ಸ್ ರಚಿಸಿ ಜನಪ್ರತಿನಿಧಿಗಳನ್ನು ಕಳಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿತ್ತು. ಆದರೆ ಆಡಳಿತ ನಡೆಸುತ್ತಿರುವ ರಾಜ್ಯ ಬಿಜೆಪಿ ಸರಕಾರವು ಚುನಾವಣೆಯ ಹಿಂದೆ ಬಿದ್ದಿದೆ. ಸೋಮೇಶ್ವರ ಗ್ರಾ.ಪಂ ಪುರಸಭೆಯಾಗಿ ಮೇಲ್ದರ್ಜೆಗೆ ಏರಿ ಮೂರು ವರ್ಷಗಳಾದರೂ ಆಡಳಿತಕ್ಕೆ ಚುರುಕು ಮುಟ್ಟಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಚುನಾಯಿತ ಪ್ರತಿನಿಧಿಗಳೇ ಇಲ್ಲದೆ ಜನರ ಸಮಸ್ಯೆಗಳನ್ನು ಆಲಿಸುವವರಿಲ್ಲವಾಗಿದೆ.
ಕುಂಪಲದ ಎಲ್ಲಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಬೆರಳೆಣಿಕೆಯಷ್ಟೇ ಟ್ಯಾಂಕರ್ ಗಳು ಬರುತ್ತಿದೆ. ವಿದ್ಯಾನಗರದಲ್ಲಿ ಕಲುಷಿತ ನೀರು ಕುಡಿಯಬೇಕಾದ ಪರಿಸ್ಥಿತಿ ಒದಗಿಬಂದಿದೆ. ಮಡ್ಯಾರ್ ನಲ್ಲಿ ಅನಧಿಕೃತ ಜಲ್ಲಿ ಕ್ರಷರ್ ಇರುವ ಪ್ರದೇಶದಲ್ಲಿ ಇಡೀ ಗ್ರಾಮಕ್ಕೆ ಪೂರೈಸಲು ಸಾಧ್ಯವಾಗುವ ನೀರಿನ ಬಾವಿಯಿದೆ. ಸಂಸ್ಥೆಗಳಿಗೆ ಅಲ್ಲಿಂದ ನೀರು ನೀಡಲಾಗುತ್ತಿದೆ. ಈ ಕುರಿತು ಜಾಗದ ಮಾಲೀಕ ಶಾಂತರಾಮ ಶೆಟ್ಟಿ ಅವರಿಗೆ ಶಾಸಕ ಖಾದರ್ ಅವರು ಮನವಿ ಮಾಡಿದಾಗ ಗ್ರಾಮಕ್ಕೆ ನೀರು ಕೊಡಲು ಒಪ್ಪಿಗೆಯನ್ನು ಸೂಚಿಸಿದ್ದರು. ನಂತರ ಬಿಜೆಪಿಯವರು ಅಲ್ಲಿಯೂ ರಾಜಕೀಯ ಮಾಡಿ ಗ್ರಾಮಕ್ಕೆ ನೀರು ಕೊಡದಂತೆ ಮಾಡಿದ್ದಾರೆ.
ಕುಂಪಲಕ್ಕೆ ಬಸ್ ಅವ್ಯವಸ್ಥೆ
ಕುಂಪಲಕ್ಕೆ ಒಂದು ಕೆಎಸ್ ಆರ್ ಟಿಸಿ ಬಸ್, ಖಾಸಗಿ ಸೇರಿ ಒಟ್ಟು ಆರು ಬಸ್ಸುಗಳು ಕಾರ್ಯಾಚರಿಸುತ್ತಿದೆ. ಖಾಸಗಿ ಬಸ್ಸು ಚಾಲಕರ ಉದ್ಧಟತನದಿಂದ ಒಟ್ಟಿಗೆ ಬರುವುದು, ಒಟ್ಟಿಗೆ ಹೋಗುವುದು ಜನರಿಗೆ ಉಪಯೋಗಕ್ಕಿಲ್ಲದಂತಾಗಿದೆ. ಸಮಯ ಪರಿಪಾಲನೆ ಸರಿಯಾಗಿಲ್ಲ. ಶಾಸಕರು ಸಾರಿಗೆ ಸಚಿವರಲ್ಲಿ ಸರಕಾರಿ ಬಸ್ಸಿಗೆ ಒತ್ತಾಯಿಸಿದಾಗ ಎರಡು ಕೆಎಸ್ ಆರ್ ಟಿಸಿ ಬಸ್ಸುಗಳನ್ನು ಪೂರೈಸಲಾಗಿತ್ತು. ಖಾಸಗಿ ಬಸ್ ಮಾಲೀಕರು ಹೈಕೋರ್ಟಿನಿಂದ ತಡೆಯಾಜ್ಞೆಯನ್ನು ತಂದಿರುವುದರಿಂದ ಸದ್ಯ ಒಂದೇ ಸರಕಾರಿ ಬಸ್ಸು ಬರುವಂತಾಗಿದೆ. ಭಾನುವಾರ ದಿನ ಬಸ್ಸುಗಳನ್ನು ನಿಲ್ಲಿಸುವ ಕುರಿತು ಆರ್ ಟಿ ಓ ಅವರಿಗೆ ದೂರು ನೀಡಲಾಗಿದೆ. ಇದರಿಂದ ಬಡ ಕೂಲಿ ಕಾರ್ಮಿಕರು ಕೆಲಸಕ್ಕೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರಿಗೆ ಶಾಸಕ ಯು.ಟಿ ಖಾದರ್ ಸಾಧನೆಗಳನ್ನು ದೂರುವ ನೈತಿಕತೆಯೇ ಇಲ್ಲ. ಹರೇಕಳ- ಅಡ್ಯಾರ್ ಡ್ಯಾಮ್ ಅನ್ನು ಮೋದಿಯವರ ಜಲಜೀವನ್ ಯೋಜನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
Mangalore Kumpala task force by district administration amid no water, people boycott elections.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm