ಬ್ರೇಕಿಂಗ್ ನ್ಯೂಸ್
13-04-23 11:05 pm Mangalore Correspondent ಕರಾವಳಿ
ಮಂಗಳೂರು, ಎ.13 : ಉಳ್ಳಾಲ ಕ್ಷೇತ್ರದ ಅಭಿವೃದ್ಧಿಗೆ ಯು.ಟಿ ಖಾದರ್ ಕೊಡುಗೆ ಏನು? ಉಳಿದ ಶಾಸಕರ ಕ್ಷೇತ್ರಗಳಲ್ಲಿ ಸಾವಿರಾರು ಕೋಟಿ ಅನುದಾನ ಬಂದಿದ್ದರೆ, ಇವರು ನಾಲ್ಕು ಬಾರಿ ಮಂತ್ರಿಯಾಗಿದ್ದರೂ ಕ್ಷೇತ್ರ ಯಾವುದೇ ಅಭಿವೃದ್ಧಿ ಆಗಿಲ್ಲ. ವಸತಿ ಸಚಿವರಾಗಿ ಅವರ ಅಪ್ಪನ ಕಾಲದಲ್ಲಿ ಆರಂಭಿಸಿದ್ದ ಪಳೆಯುಳಿಕೆಗಳು ಈಗಲೂ ಉಳಿದುಕೊಂಡಿವೆ. ಇದು ಖಾದರ್ ವೈಫಲ್ಯಕ್ಕೆ ಕನ್ನಡಿ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಬಿಜೆಪಿಯಲ್ಲಿ ನಾವೆಲ್ಲ ಒಟ್ಟಿಗಿದ್ದೀವಿ, ಉಳ್ಳಾಲದಲ್ಲಿ ಈ ಹಿಂದೆ ಸ್ಪರ್ಧಿಸಿದ ಎಲ್ಲರೂ ಜೊತೆಗಿದ್ದಾರೆ. ಈ ಬಾರಿ ಜಿಲ್ಲೆಯಲ್ಲಿ ಏಳು ಅಲ್ಲ, ಎಂಟನ್ನೂ ಗೆಲ್ಲಬೇಕು ಎಂಬ ನಿಶ್ಚಯದ ಮಾಡಿದ್ದೇವೆ. ಮಂಗಳೂರು ಕ್ಷೇತ್ರವನ್ನು ಶತಾಯಗತಾಯ ಗೆಲ್ಲಬೇಕು ಎನ್ನುವುದೇ ನಮ್ಮ ಗುರಿ. ಅದಕ್ಕಾಗಿ ವಿಧಾನ ಪರಿಷತ್ ಸದಸ್ಯನಾಗಿ ಉಳ್ಳಾಲವನ್ನು ಮುಂದಿಟ್ಟು ಕೆಲಸ ಮಾಡಿದ್ದೇನೆ. ಉಳ್ಳಾಲ ಸದ್ಯಕ್ಕೆ ನನ್ನದೇ ಕ್ಷೇತ್ರ ಎಂದರು.
ಈ ಬಾರಿ ಬಿಜೆಪಿಯಿಂದ 60 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ, 224 ಕ್ಷೇತ್ರಗಳಲ್ಲೂ ಹೊಸ ವರ್ಗಕ್ಕೆ ಅವಕಾಶ ಕೊಟ್ಟಿರುವುದು, ಸಾಂಪ್ರದಾಯಿಕ ವಂಶವಾದ ಹೊರತಾಗಿ ಸಮಾಜದಲ್ಲಿ ಬದಲಾವಣೆ ತರಬಲ್ಲ ಸಂದೇಶ ಕೊಟ್ಟಿದೆ. ಸುಳ್ಯದಲ್ಲಿ ಆದಿ ದ್ರಾವಿಡ ಜನಾಂಗದ ಬಡ ಮಹಿಳೆಯನ್ನು ಚುನಾವಣೆಗೆ ನಿಲ್ಲಿಸುವ ಸಾಮರ್ಥ್ಯ ತೋರಿಸಿದೆ. ಬೈಂದೂರಿನಲ್ಲಿ ಬಡ ಕುಟುಂಬದ ವ್ಯಕ್ತಿಗೆ ಅವಕಾಶ ಸಿಕ್ಕಿದೆ. ಜಾತಿ ಹಣ ಮೀರಿ ನಿಂತು ಗುರುತಿಸಿ ಅವಕಾಶ ನೀಡಿದ್ದಾರೆ ಎಂದಾದರೆ, ಸಮಾಜ, ಮಧ್ಯಮ, ಬಡ ವರ್ಗಕ್ಕೆ ಬಿಜೆಪಿ ಹೊಸ ಸಂದೇಶ ನೀಡಿದೆ. ಇದು ಬಿಜೆಪಿಯಿಂದಷ್ಟೇ ಸಾಧ್ಯ, ಬೇರೆ ಪಾರ್ಟಿಗಿಂತ ಹೊಸತನ ನೀಡಿರುವುದನ್ನು ತೋರಿಸಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಬಂಡಾಯ ಕಾಣಿಸಿಕೊಂಡಿದೆ ಎಂಬ ಪ್ರಶ್ನೆಗೆ, ಟಿಕೆಟ್ ಸಿಗದ ಕಾರಣಕ್ಕೆ ಒಮ್ಮೆಗೆ ಅಸಮಾಧಾನ, ಆಕ್ರೋಶ ಸಹಜ. ಅದೆಲ್ಲ ಒಂದು ವಾರದಲ್ಲಿ ಸರಿಯಾಗಲಿದೆ. ಸುಳ್ಯ, ಪುತ್ತೂರಿನಲ್ಲಿ ಹಿಂದಿಗಿಂತ ಹೆಚ್ಚು ಅಂತರದಲ್ಲಿ ಮುನ್ನಡೆ ಪಡೆಯುತ್ತೇವೆ ಎಂದರು. ಸುಳ್ಯಕ್ಕೆ ವಿದ್ಯಾವಂತ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರೇ ಅಭಿಯಾನ ನಡೆಸಿದ್ದರಲ್ಲಾ ಎಂಬ ಪ್ರಶ್ನೆಗೆ, ಪದವಿ, ಸರ್ಟಿಫಿಕೇಟ್ ಮಾತ್ರಕ್ಕೆ ಶಿಕ್ಷಣ ಅಲ್ಲ. ಭಾಗೀರಥಿ ಅವರು ಜಿಪಂ ಸದಸ್ಯರಾಗಿ ಅನುಭವ ಹೊಂದಿದ್ದಾರೆ. ಸಂಘ ಶಿಕ್ಷಣದಲ್ಲಿ ತರಬೇತಿ ಪಡೆದಿದ್ದಾರೆ. ಜನರ ಕಷ್ಟ ಏನು ಅನ್ನುವುದು ಗೊತ್ತಿದೆ. ಆದಿ ದ್ರಾವಿಡ ಸಮಾಜದ ಮಹಿಳೆ ಒಬ್ಬರನ್ನು ಮೇಲೆ ಬರಲು ನಾವು ಅವಕಾಶ ಕೊಟ್ಟಿದ್ದೇವೆ ಎಂದರು.
ಸಂತೋಷ್ ರೈ ಬೋಳ್ಯಾರ್ ಮಾತನಾಡಿ, ನಮಗೆ ಯಾರು ಅಭ್ಯರ್ಥಿ ಅನ್ನುವುದು ಮುಖ್ಯ ಅಲ್ಲ. ಉಳ್ಳಾಲದಲ್ಲಿ ಬಿಜೆಪಿ ಶಾಸಕರಾಗಬೇಕು ಎಂದು ಚಾಲೆಂಜ್ ಮಾಡಿದ್ದೆ. ಆ ಚಿಂತೆಯಲ್ಲಿ 2018 ರಿಂದ ಒಂದು ದಿನವೂ ಸರಿಯಾಗಿ ಮಲಗಿಲ್ಲ. ಇನ್ನೊಂದು ತಿಂಗಳು ಕೂಡ ನಿದ್ದೆ ಮಾಡುವುದಿಲ್ಲ. ನಮ್ಮ ಶಾಸಕರು ಗೆಲ್ಲಬೇಕು ಎನ್ನುವುದು ನಮ್ಮ ಗುರಿ ಎಂದರು.
ಸತೀಶ್ ಕುಂಪಲ ಮಾತನಾಡಿ, ಬಿಜೆಪಿ ನಾಯಕರು ನನ್ನನ್ನು ಗುರುತಿಸಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಉಳ್ಳಾಲದಲ್ಲಿ ಹಿಂದು - ಮುಸ್ಲಿಂ ಸಾಮರಸ್ಯ ಸ್ಥಾಪಿಸುವುದಕ್ಕೆ ಶ್ರಮಿಸುತ್ತೇನೆ ಎಂದರು. ಸುದ್ದಿಗೋಷ್ಟಿಯಲ್ಲಿ ಎಲ್ಲರೂ ಒಟ್ಟಿಗಿದ್ದೇವೆಂದು ತೋರಿಸಲು ಈ ಹಿಂದೆ ಚುನಾವಣೆ ಸ್ಪರ್ಧಿಸಿದ್ದ ಚಂದ್ರಹಾಸ ಉಚ್ಚಿಲ್ ಸೇರಿ ಎಲ್ಲ ಮುಖಂಡರು ಜೊತೆಗಿದ್ದರು.
Whats the achievement by Four time MLA khader in Ullal questions Prathap simaha Nayaka in Mangalore.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm