ಬ್ರೇಕಿಂಗ್ ನ್ಯೂಸ್
13-04-23 10:05 pm Udupi Correspondent ಕರಾವಳಿ
ಉಡುಪಿ, ಎ.13: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಈ ಬಾರಿ ಅಚ್ಚರಿಯ ಬದಲಾವಣೆ ಆಗಲಿದೆ ಅನ್ನೋದನ್ನು ಹೆಚ್ಚಿನ ಮಾಧ್ಯಮಗಳು ಹೇಳುತ್ತ ಬಂದಿದ್ದವು. ಆದರೆ, ‘’ಹೆಡ್ಲೈನ್ ಕರ್ನಾಟಕ’’ ಉಡುಪಿ ಜಿಲ್ಲೆ ಒಂದರಲ್ಲೇ ನಾಲ್ವರು ಹಾಲಿ ಶಾಸಕರನ್ನು ಬದಲಿಸಲಾಗುತ್ತದೆ ಎಂಬ ಖಚಿತ ಮಾಹಿತಿಯುಳ್ಳ ವರದಿಯನ್ನು ಎಪ್ರಿಲ್ 4ರಂದೇ ಪ್ರಕಟಿಸಿತ್ತು. ಅಷ್ಟೇ ಅಲ್ಲ, ಯಾರು ಹೊಸ ಅಭ್ಯರ್ಥಿ ಆಗಲಿದ್ದಾರೆ ಎನ್ನುವ ಬಗ್ಗೆಯೂ ಅಂದಾಜು ಮಾಹಿತಿ ಆಧರಿಸಿ ಭವಿಷ್ಯ ಹೇಳಿತ್ತು.
ವಾರದ ನಂತರ, ಅಂದರೆ ಎಪ್ರಿಲ್ 11ರಂದು ಬಿಜೆಪಿ ಮೊದಲ ಪಟ್ಟಿ ಅಂತೂ ಪ್ರಕಟ ಆಗಿತ್ತು. ಉಡುಪಿಯಲ್ಲಿ ಮೂವರು ಹಾಲಿ ಶಾಸಕರನ್ನು ತೆಗೆದು ಹೊಸಬರಿಗೆ ಮಣೆ ಹಾಕಲಾಗಿತ್ತು. ಅದರಲ್ಲಿ ಪ್ರಮುಖವಾಗಿದ್ದುದು ಉಡುಪಿಯಲ್ಲಿ ಮೂರು ಬಾರಿಯ ಶಾಸಕ ಮತ್ತು ಅತ್ಯಂತ ಏಕ್ಟಿವ್ ಆಗಿದ್ದ ರಘುಪತಿ ಭಟ್ ಅವರನ್ನು ಬದಲಾಯಿಸಿದ್ದು. ಹೆಡ್ಲೈನ್ ಕರ್ನಾಟಕ ವಾರದ ಹಿಂದಿನ ವರದಿಯಲ್ಲಿ ಈ ಬಗ್ಗೆ ಖಚಿತ ಮಾಹಿತಿಗಳನ್ನು ನೀಡಿತ್ತು ಅನ್ನುವುದು ವಿಶೇಷ.
ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿವೃತ್ತಿ ಘೋಷಿಸಿದ್ದಲ್ಲದೆ, ತನ್ನ ಗುರು ಎಜಿ ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ಹೆಸರನ್ನು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಿರಣ್ ಕೊಡ್ಗಿ ಟಿಕೆಟ್ ಪಡೆದಲ್ಲಿ ರಘುಪತಿ ಭಟ್ ಸ್ಥಾನ ಕಳಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಮೊಟ್ಟಮೊದಲು ಹೆಡ್ಲೈನ್ ಕರ್ನಾಟಕ ವರದಿ ಮಾಡಿತ್ತು. ಅಷ್ಟೇ ಅಲ್ಲ, ಉಡುಪಿ ಕ್ಷೇತ್ರದಲ್ಲಿ ಯಶಪಾಲ್ ಸುವರ್ಣ ಅವರಿಗೇ ಟಿಕೆಟ್ ಸಿಗುತ್ತದೆ ಅನ್ನುವುದನ್ನೂ ಹೇಳಿತ್ತು. ಇದಲ್ಲದೆ, ಕಾಪು ಕ್ಷೇತ್ರದಲ್ಲಿ ಶಾಸಕ ಲಾಲಾಜಿ ಮೆಂಡನ್ ಬದಲು ಗುರ್ಮೆ ಸುರೇಶ್ ಶೆಟ್ಟಿ ಟಿಕೆಟ್ ಪಡೆಯುತ್ತಾರೆಂದೂ ಹೇಳಿತ್ತು.
ಇವೆಲ್ಲದಕ್ಕಿಂತಲೂ ಬೈಂದೂರಿನಲ್ಲಿ ಸಾಮಾನ್ಯ ಬಡ ಕುಟುಂಬದ ಕಾರ್ಯಕರ್ತನಿಗೆ ಟಿಕೆಟ್ ಸಿಗುತ್ತೆ ಅನ್ನುವ ಭವಿಷ್ಯವನ್ನೂ ಕರಾರುವಾಕ್ಕಾಗಿ ಹೇಳಿದ್ದು.. ಬಿಜೆಪಿ ಎರಡನೇ ಪಟ್ಟಿಯಲ್ಲಿ ಬೈಂದೂರಿಗೆ ಗುರುರಾಜ್ ಗಂಟಿಹೊಳೆ ಹೆಸರು ಘೋಷಣೆಯಾಗಿತ್ತು. ಬೇರಾವುದೇ ಮಾಧ್ಯಮಗಳಾಗಲೀ, ಬಿಜೆಪಿ ಮುಖಂಡರಾಗಲೀ ನಿರೀಕ್ಷೆಯನ್ನೇ ಮಾಡದ ಅಚ್ಚರಿ ಮಾಹಿತಿಯನ್ನು ‘’ಹೆಡ್ಲೈನ್ ಕರ್ನಾಟಕ’’ ಎಪ್ರಿಲ್ 4ರಂದೇ ಭವಿಷ್ಯ ನುಡಿದಿತ್ತು. ಆರೆಸ್ಸೆಸ್ ಪೂರ್ಣಾವಧಿ ಕಾರ್ಯಕರ್ತನಾಗಿದ್ದ ಗುರುರಾಜ್ ಗಂಟಿಹೊಳೆ ಬಿಜೆಪಿ ಹೈಕಮಾಂಡಿನ ಅಚ್ಚರಿಯ ಆಯ್ಕೆ ಎನ್ನುವುದನ್ನು ಮಾಧ್ಯಮ ಜಗತ್ತಿನಲ್ಲಿಯೇ ‘’ಹೆಡ್ಲೈನ್ ಕರ್ನಾಟಕ’’ ಮೊಟ್ಟಮೊದಲು ಸುದ್ದಿ ಮಾಡಿತ್ತು.
ನಾಲ್ವರು ಶಾಸಕರ ಬದಲು ಇಂಥವರೇ ಟಿಕೆಟ್ ಗಿಟ್ಟಿಸುತ್ತಾರೆ ಅನ್ನುವುದು ಉಡುಪಿ ಮತ್ತು ಕರಾವಳಿ ಜಿಲ್ಲೆಯ ಮಟ್ಟಿಗೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ ಸುದ್ದಿಯಾಗಿತ್ತು. ಯಾಕಂದ್ರೆ, ಕೋಟಿ ಎಣಿಸುವ ಮಂದಿಯಷ್ಟೇ ಟಿಕೆಟ್ ಗಿಟ್ಟಿಸಬಲ್ಲರು ಅನ್ನುವ ರಾಜಕಾರಣದಲ್ಲಿ ಸಾಮಾನ್ಯ ಕಾರ್ಯಕರ್ತನೊಬ್ಬ, ಅದರಲ್ಲೂ ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದ ವ್ಯಕ್ತಿ ಬಿಜೆಪಿಯಂಥ ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸುತ್ತಾನೆ ಅನ್ನೋದನ್ನು ಯಾರೂ ಊಹಿಸುವಂತಿರಲಿಲ್ಲ. ಗುರುರಾಜ್ ಗಂಟಿಹೊಳೆ ಬಂಟ ಸಮುದಾಯದ ಸಾಮಾನ್ಯ ಕುಟುಂಬದಿಂದ ಬಂದ ಯುವಕನಾಗಿದ್ದು, ಚಪ್ಪಲಿ ಧರಿಸದ ‘ಬರಿಗಾಲ ಯೋಗಿ ಗುರುವಣ್ಣ’ ಎಂದು ಬೈಂದೂರಿನಲ್ಲಿ ಪರಿಚಿತರಾಗಿದ್ದಾರೆ.
ಎಪ್ರಿಲ್ 4ರಂದು ಹೆಡ್ಲೈನ್ ಕರ್ನಾಟಕ ನಾಲ್ವರನ್ನು ಯಾಕೆ ಬದಲಿಸುತ್ತಾರೆ ಮತ್ತು ಯಾರನ್ನು ಅವರ ಬದಲಿಗೆ ಆಯ್ಕೆ ಮಾಡುತ್ತಾರೆ, ಜಿಲ್ಲೆಯ ಜಾತಿ ಸಮೀಕರಣ ಹೇಗಿರುತ್ತೆ ಎನ್ನುವ ಬಗ್ಗೆ ವಿಶ್ಲೇಷಣಾತ್ಮಕ ವರದಿ ಪ್ರಕಟಿಸಿತ್ತು. ಚುನಾವಣೆ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ರಾಜಕೀಯ ವರದಿಗಳ ಪೈಕಿ ಕೆಲವೊಂದಷ್ಟೇ ಅತ್ಯಂತ ಅಪರೂಪದಲ್ಲಿ ಈ ರೀತಿ ನೈಜತೆಗೆ ಹತ್ತಿರವಾಗುತ್ತವೆ ಎನ್ನುವುದಂತೂ ಸತ್ಯ. ಅದಕ್ಕಾಗಿ ನಾವು ಬೆನ್ನು ತಟ್ಟಿಕೊಳ್ಳುವುದಿಲ್ಲ. ಮಾಧ್ಯಮಗಳ ಸಾಲಿನಲ್ಲಿ ನಮ್ಮದೂ ಒಂದು ಪಾಲು ಇದೆ ಅನ್ನುವುದನ್ನು ಓದುಗರಿಗೆ ತೋರಿಸಿಕೊಡುವುದಷ್ಟೇ ನಮ್ಮ ಕಾಳಜಿ.
Headline Karnataka News makes exact prediction on MLA tickets to four in Udupi with exact names. As per predications made by Headline Karnataka the BJP high command has announced exact names of the candidates. Udupi kapu BJP ticket chances to Suresh Shetty Gurme, kiran for Kundapur, Byndoor ticket for Gururaj.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm