ಬ್ರೇಕಿಂಗ್ ನ್ಯೂಸ್
13-04-23 03:07 pm Udupi Correspondent ಕರಾವಳಿ
ಉಡುಪಿ, ಎ.13: ಮಂಗಳೂರಿನಿಂದ ಕೊಲ್ಲೂರಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿರೂರಿನ ಹೆಲಿಪ್ಯಾಡ್‍ನಲ್ಲಿ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಾಗಲೇ ಪರಿಸರದಲ್ಲಿ ಮುಳಿ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಕರಾವಳಿಯಲ್ಲಿ ಟೆಂಪಲ್ ರನ್ ನಡೆಸುತ್ತಿರುವ ಬಸವರಾಜ ಬೊಮ್ಮಾಯಿ ಅವರು ಕೊಲ್ಲೂರಿಗೆ ತೆರಳಲು ಕಾಪ್ಟರ್ ನಲ್ಲಿ ಅರೆಶಿರೂರು ಹೆಲಿಪ್ಯಾಡ್ ಗೆ ಬಂದಿದ್ದಾರೆ. ಹೆಲಿಕಾಪ್ಟರ್ ಇಳಿಯುವ ಸಂದರ್ಭ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಸಿಎಂ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿದ್ದು ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆದರೆ ವಿಐಪಿ ವ್ಯಕ್ತಿ ಬರುವ ಸಂದರ್ಭದಲ್ಲಿ ಹೆಲಿಪ್ಯಾಡ್ ನಲ್ಲಿ ಬೆಂಕಿ ಹತ್ತಿಕೊಂಡಿದ್ದು ಭದ್ರತಾ ಲೋಪ ಅನ್ನುವಂತಾಗಿದೆ.
ಮುಖ್ಯಮಂತ್ರಿ ಮೊದಲಿಗೆ ಮಂಗಳೂರಿನಿಂದ ವಾಹನದಲ್ಲಿ ಕೊಲ್ಲೂರಿಗೆ ಬರಲಿದ್ದಾರೆ ಎಂಬ ಮಾಹಿತಿ ಉಡುಪಿ ಜಿಲ್ಲಾಡಳಿತಕ್ಕೆ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಎಂ ಹೆಲಿಕಾಪ್ಟರ್‌ನಲ್ಲಿ ಬರುವುದು ಖಾತ್ರಿಯಾಗಿದೆ. ಶಿರೂರಿನ ಹೆಲಿಪ್ಯಾಡ್ ನಲ್ಲಿ ಲ್ಯಾಂಡಿಂಗ್ ಆಗಲು ರೆಡಿ ಮಾಡಲಾಗಿತ್ತು. ತರಾತುರಿಯಲ್ಲಿ ನಿರ್ಧಾರ ಆಗಿದ್ದರಿಂದ ಜಾಗದ ಬಳಿ ಬೆಳೆದಿದ್ದ ಹುಲ್ಲುಗಳನ್ನು ಕತ್ತರಿಸಿರಲಿಲ್ಲ. ಪರಿಣಾಮ ಹೆಲಿಕಾಪ್ಟರ್ ರೆಕ್ಕೆಯ ಗಾಳಿಯಿಂದಾಗಿ ಬಿಸಿಲಿಗೆ ಕಾದಿದ್ದ ಮುಳಿ ಹುಲ್ಲಿಗೆ ಬೆಂಕಿ ಹರಡಿದೆ. ಹೊಗೆಯೊಂದಿಗೆ ಬೆಂಕಿ ಹೊತ್ತಿಕೊಂಡಿದ್ದು ಒಂದು ಕ್ಷಣ ಅಲ್ಲಿದ್ದ ಭದ್ರತಾ ಸಿಬಂದಿ ಅಚ್ಚರಿಗೊಳ್ಳುವಂತಾಯ್ತು. ಆದರೆ ಬೆಂಕಿ ಕಾಣಿಸಿಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಅಲ್ಲಿಂದ ಇಳಿದು ವಾಹನದಲ್ಲಿ ಹೋಗಿಯಾಗಿತ್ತು. ಎಸ್ಕಾರ್ಟ್ ವಾಹನವೂ ಹೋದ ನಂತರ ಬೆಂಕಿ ಕಾಣಿಸಿದ್ದು ಸಿಬಂದಿ ಕೂಡಲೇ ನಂದಿಸಿದ್ದಾರೆ.
A minor fire was noticed close to Are Shiroor helipad, near Baindoor in Udupi district, before Karnataka Chief Minister Basavaraj Bommai’s helicopter was to land, on April 13. Fire and Emergency Services personnel put off the fire immediately.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm