ಬ್ರೇಕಿಂಗ್ ನ್ಯೂಸ್
13-04-23 01:16 pm Mangalore Correspondent ಕರಾವಳಿ
ಮಂಗಳೂರು, ಎ.13 : ಕಾಂಗ್ರೆಸ್ ನವರಿಗೆ 60-65 ಕ್ಷೇತ್ರಗಳಿಗೆ ಅಭ್ಯರ್ಥಿ ಇಲ್ಲ, ಅದಕ್ಕೆ 160 ಕ್ಷೇತ್ರಕ್ಕೆ ಅಭ್ಯರ್ಥಿ ಮಾಡಿ ನಿಲ್ಲಿಸಿದ್ದಾರೆ. ಅವರದ್ದು ಆರಂಭ ಶೂರತ್ವ ಅಷ್ಟೇ, ಈಗ ಬೇರೆ ಕಡೆಯಿಂದ ಆಮದು ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಾರೆ. ಕಾಂಗ್ರೆಸ್ ಬಳಿ ಸಮರ್ಥ ಅಭ್ಯರ್ಥಿ ಇಲ್ಲ, ಅವರು ಅಧಿಕಾರಕ್ಕೆ ಬರೋದೂ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಆಗಿದೆ, ಇನ್ನು 12 ಕಡೆಯಷ್ಟೇ ಉಳಿದಿದೆ. ಅದು ಶೀಘ್ರದಲ್ಲೇ ಆಗತ್ತೆ. ಕೆಲವು ಕಡೆ ಅಪೇಕ್ಷಿತರು, ಆಕಾಂಕ್ಷಿಗಳು, ಎಂಎಲ್ ಸಿಗಳು ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಇನ್ನೊಂದು ವಾರದಲ್ಲಿ ಬಹುತೇಕ ಕಡೆ ಭಿನ್ನಮತ ಶಮನ ಆಗುತ್ತೆ, ಹಿರಿಯರು ಮಾತನಾಡ್ತಾ ಇದಾರೆ. ಹಿರಿಯರ ಜೊತೆಗೆ ನಾನು ಮತ್ತು ಹೈಕಮಾಂಡ್ ಕಡೆಯ ನಾಯಕರು ಕೂಡ ಮಾತನಾಡ್ತಿದಾರೆ, ಸಮಸ್ಯೆ ಬಗೆಹರಿಯೋ ವಿಶ್ವಾಸ ಇದೆ.
ಸವದಿ ರಾಜಿನಾಮೆ ಕುರಿತ ಪ್ರಶ್ನೆಗೆ, ಸವದಿ ಹಿರಿಯರಿದ್ದಾರೆ, ಅವರಿಗೆ ಭಾವನೆ ಇದೆ, ಸುಧೀರ್ಘ ರಾಜಕೀಯ ಜೀವನದಲ್ಲಿ ಇದ್ದಾರೆ. ಅವರ ಕ್ಷೇತ್ರದ ಜನರ ವಿಶ್ವಾಸ ಅವರು ಉಳಿಸಿಕೊಳ್ಳಬೇಕು. ಆ ಕಡೆಯಿಂದಲೂ ಅವರಿಗೆ ಒತ್ತಡ ಇದೆ, ಸಮಯ ಬೇಕು. ಆದಷ್ಟು ಬೇಗ ಅವರ ಸಮಸ್ಯೆ ಬಗೆ ಹರಿಯುವ ವಿಶ್ವಾಸ ಇದೆ.
ನೆಹರೂ ಒಲೇಕಾರ್ ಆರೋಪದ ಪ್ರಶ್ನೆಗೆ, ಅವರು ಯಾವ ಆರೋಪ ಬೇಕಾದ್ರೂ ಮಾಡಲಿ. 1500 ಕೋಟಿ ಅಲ್ಲ, ಯಾವುದೇ ಆರೋಪ ಇದ್ದರೂ ದಾಖಲೆ ಸಮೇತ ಮಾಡಲಿ. ನಾವು ಎದುರಿಸುತ್ತೇವೆ. ಹೇಳಿಕೆಗಳಿಂದ ಹಗರಣ ಆಗಲ್ಲ, ದಾಖಲೆ ಸಹಿತ ಮಾಡಲಿ, ಸತ್ಯಾಸತ್ಯತೆ ಹೊರಬರಲಿ ಎಂದರು.
ಟಿಕೆಟ್ ಸಿಗದವರು ಪಕ್ಷ ಬಿಟ್ಟು ಹೋಗುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ರಾಜಕಾರಣದಲ್ಲಿ ಪಕ್ಷ ಬದಲಿಸೋದು ಸಾಮಾನ್ಯ, ಅದು ಆಗ್ತಾ ಇರುತ್ತೆ. ಪಕ್ಷದೊಳಗಿನ ಬಂಡಾಯ ಸರಿಪಡಿಸ್ತಾ ಇದೀವಿ, ಕಾರ್ಯಕರ್ತರು ಮತ್ತು ಪಕ್ಷ ಗಟ್ಟಿ ಇರೋದ್ರಿಂದ ಈ ರೀತಿಯ ಬೆಳವಣಿಗೆಯಿಂದ ಡ್ಯಾಮೇಜ್ ಆಗಲ್ಲ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
Congress doesn't have efficient leaders, so trying to catch up BJP MLAS slams Bommai in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 07:09 pm
HK News Desk
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
15-11-25 07:42 pm
Mangalore Correspondent
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm