ಬ್ರೇಕಿಂಗ್ ನ್ಯೂಸ್
12-04-23 11:00 pm Mangalore Correspondent ಕರಾವಳಿ
ಉಳ್ಳಾಲ, ಎ.12 : ನಿನ್ನೆಯವರೆಗೂ ನಾನು ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಈಗ ಪಕ್ಷದ ಹೈಕಮಾಂಡ್ ಸೂಚಿಸಿದ ಅಭ್ಯರ್ಥಿ ಸತೀಶ್ ಕುಂಪಲರನ್ನ ಗೆಲ್ಲಿಸೋದೆ ನನ್ನ ಧ್ಯೇಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ.
ಮುಡಿಪು ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ಧಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಮಂಗಳೂರು (ಉಳ್ಳಾಲ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಕಾಂಗ್ರೆಸನ್ನ ಸೋಲಿಸಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲರನ್ನ ಗೆಲ್ಲಿಸೋದೇ ನಮ್ಮ ಧ್ಯೇಯ. ಉಳ್ಳಾಲ ಕ್ಷೇತ್ರದಲ್ಲಿ ತಾನು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಅಭ್ಯರ್ಥಿ ಘೋಷಣೆಯಾದ ನಂತರ ಸಾವಿರದಷ್ಟು ಕಾರ್ಯಕರ್ತರು ಮನೆಯಂಗಳಕ್ಕೆ ಬಂದು ನನಗೆ ಸೀಟು ಸಿಗದ ನೋವನ್ನು ತೋಡಿಕೊಂಡರು. ಪ್ರತಿಭಟನೆಯ ಸುಳಿವನ್ನು ನೀಡಿದರು.
ಆದರೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರ ತವರಲ್ಲಿ ಯಾವುದೇ ಗೊಂದಲಗಳಾಗಬಾರದು ಅನ್ನುವ ಉದ್ದೇಶದಿಂದ ಕಾರ್ಯಕರ್ತರನ್ನು ಸಮಾಧಾನಿಸಿ ಬಾಕಿ ಕಡೆಯಲ್ಲಿ ಬಂಡಾಯದ ಅಲೆ ಇದ್ದರೂ ಇಲ್ಲಿ ಇಲ್ಲದಂತೆ ಮಾಡುವಲ್ಲಿ ಸಫಲನಾಗಿದ್ದೇನೆ. ಇಡೀ ರಾಜ್ಯಕ್ಕೆ ಉತ್ತಮ ಸಂದೇಶ ತಲುಪಿಸುವ ಉದ್ದೇಶದಿಂದ ಒಗ್ಗಟ್ಟಿನ ಸುದ್ಧಿಗೋಷ್ಠಿಯನ್ನು ಹಮ್ಮಿಕೊಂಡಿದ್ದೇವೆ. ಹಿಂದೆ ಬಿಜೆಪಿ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸಿ 61,000ಕ್ಕಿಂತ ಅಧಿಕ ಮತಗಳನ್ನ ಪಡೆದು ಕಾಂಗ್ರೆಸಿಗೆ ಪ್ರಬಲ ಪೈಪೋಟಿ ನೀಡಿದ್ದೆ. ಅಲ್ಪಸಂಖ್ಯಾತ ಮತಗಳು ಹೆಚ್ಚಿದ್ದ ಹಿನ್ನೆಲೆಯಲ್ಲಿ ನಾವು ಸೋಲು ಕಂಡಿದ್ದೆವು. ಅಂದಿನಿಂದಲೇ ಪಕ್ಷಕ್ಕಾಗಿ ಹಗಲಿರುಳು ದುಡಿದು ಉಳ್ಳಾಲ ಕ್ಷೇತ್ರದಿಂದ ಬಿಜೆಪಿ ಶಾಸಕನನ್ನು ವಿಧಾನಸೌಧಕ್ಕೆ ಕಳುಹಿಸ ಬೇಕೆನ್ನುವ ಛಲವನ್ನು ಬೆಳೆಸಿದ್ದು ಈಗಿನ ಅಭ್ಯರ್ಥಿ ಸತೀಶ್ ಕುಂಪಲ ಜಯ ಗಳಿಸಲು ಹಗಲು ರಾತ್ರಿ ದುಡಿಯುತ್ತೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರು ಕರೆದು ಸೀಟು ಬಿಟ್ಟು ಕೊಡಲು ಕೇಳಿದ್ದಾರೆ. ಮಾತಿಗೆ ಗೌರವ ನೀಡಿ, ಪಕ್ಷದ ಸೈದ್ಧಾಂತಿಕ ಚೌಕಟ್ಟು ಮೀರದೆ ಸೀಟು ಬಿಟ್ಟುಕೊಟ್ಟಿದ್ದೇನೆ. ಸತೀಶ್ ಕುಂಪಲ ಅವರು ಯೋಗ್ಯವಾದ ಅಭ್ಯರ್ಥಿ, ಒಮ್ಮೆಯಾದರೂ ಮಂಗಳೂರು ಕ್ಷೇತ್ರದಿಂದ ಬಿಜೆಪಿ ಶಾಸಕ ವಿಧಾನಸೌಧಕ್ಕೆ ಪ್ರವೇಶಿಸಬೇಕಿದೆ. ಸೀಟಿಗೆ ಅಪೇಕ್ಷೆ ಪಡುವುದರಲ್ಲಿ ತಪ್ಪಿಲ್ಲ , 32 ವರ್ಷ ಪಕ್ಷಕ್ಕಾಗಿ ದುಡಿದವನಿಗೆ 1 ತಿಂಗಳು ದುಡಿಯುವುದು ದೊಡ್ಡದೇನಲ್ಲ .ತಪ್ಪು ಸಂದೇಶಗಳಿಗೆ ಕಿವಿಗೊಡದೆ ರಾತ್ರಿ ಹಗಲು ದುಡಿದು ಸತೀಶ್ ಕುಂಪಲರನ್ನ ಗೆಲ್ಲಿಸಬೇಕೆಂದರು. ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ,ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಮೊದಲಾದವರು ಉಪಸ್ಥಿತರಿದ್ದರು.
Mangalore Ullal Satish Kumpala Victory is my blessing says Santosh Boliyur.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm