ಬ್ರೇಕಿಂಗ್ ನ್ಯೂಸ್
12-04-23 08:22 pm Mangalore Correspondent ಕರಾವಳಿ
ಬೆಳ್ತಂಗಡಿ, ಎ.12 : ಟಿಕೆಟ್ ವಂಚಿತರೆಲ್ಲರ ಜೊತೆ ಮಾತನಾಡಿದ್ದೇನೆ. ಅವರನ್ನು ಶಾಸಕರಾಗಿ ಮಾಡಿರೋದು ಕೂಡ ಪಕ್ಷವೇ. ಪಕ್ಷ ಅವರನ್ನು ಗೌರವಪೂರ್ವಕ ನಡೆಸಿಕೊಂಡಿದೆ. ನಡೆಸಿಕೊಳ್ಳುತ್ತದೆ. ಅಸಮಾಧಾನ ಇದ್ದವರ ಜೊತೆಗೆ ಮಾತನಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿಯಿತ್ತು ದೇವರ ದರ್ಶನ ಪಡೆದ ಸಿಎಂ ಬೊಮ್ಮಾಯಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಸೋಮೇಶ್ವರ ದೇವಸ್ಥಾನ ಭೇಟಿ ನೀಡಲಿದ್ದೇನೆ. ಪ್ರತಿ ಚುನಾವಣೆಗೆ ಮುಂಚೆ ಭೇಟಿ ಕೊಡುತ್ತಿದ್ದೆ. ಈ ಬಾರಿಯೂ ಭೇಟಿ ನೀಡಿದ್ದೇನೆ. ಕನ್ನಡ ನಾಡಿನ ಸುಭಿಕ್ಷೆಗಾಗಿ, ಸತ್ಯಕ್ಕೆ ಜಯ ಸಿಗುವಂತೆ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಟಿಕೆಟ್ ವಂಚಿತರು ರಾಜಕೀಯ ಭವಿಷ್ಯ ಮಸುಕಾಯ್ತು ಅಂತ ಅನ್ಕೊಳ್ಳುವುದು ಬೇಡ. ಅವರ ಭವಿಷ್ಯವೂ ಸುರಕ್ಷಿತವಾಗಿ ಇರಲಿದೆ. ಟಿಕೆಟ್ ಸಿಗದಾಗ ಸಹಜವಾಗಿ ಅಸಮಾಧಾನ ಆಗುತ್ತದೆ ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಸವದಿಯವರ ರಾಜಿನಾಮೆ ಪ್ರಸ್ತಾಪ ವಿಚಾರ ಕೇಳಿದ್ದಕ್ಕೆ, ಬೇಸರದಿಂದ ಆ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಸವದಿ ಅವರಿಗೆ ಪಕ್ಷದ ಜೊತೆ ಸಂಬಂಧ ಇದೆ. ನನ್ನ ಜೊತೆಗೂ ಬಹಳ ಹತ್ತಿರದ ಸಂಬಂಧ ಇದೆ. ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ. ನಾಳೆ, ನಾಡಿದ್ದರಲ್ಲಿ ಬಿಜೆಪಿ ಎರಡನೇ ಪಟ್ಟಿಯೂ ಬಿಡುಗಡೆಯಾಗಲಿದೆ ಎಂದರು.
ವಿನಯ ಕುಲಕರ್ಣಿ ನಿಮ್ಮ ಎದುರಾಳಿಯಾಗಿ ಸ್ಪರ್ಧಿಸುತ್ತಾರೆಂಬ ಪ್ರಶ್ನೆಗೆ, ಬಿಜೆಪಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನನ್ನ ಎದುರಾಳಿ ಯಾರೆಂಬುವುದು ನನಗೆ ಮುಖ್ಯ ಅಲ್ಲ. ನನಗೆ ನನ್ನ ಕ್ಷೇತ್ರದ ಜನ ಮುಖ್ಯ. ಯಾರೇ ಆದರೂ ಎದುರಿಸುತ್ತೇನೆ. ಜನರು ನನಗೆ ಮತ ನೀಡಲಿದ್ದಾರೆ ಎಂದರು.
ಹಲವು ಟಿಕೆಟ್ ವಂಚಿತರು ರಾಜಕೀಯ ನಿವೃತ್ತಿ ಹೇಳಿಕೆ ನೀಡಿರುವ ಕುರಿತ ಪ್ರಶ್ನೆಗೆ, ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳಿದ್ದಾರೆ. ಪೂರ್ತಿ ರಾಜಕೀಯದಿಂದ ನಿವೃತ್ತಿಯಾಗೋದಾಗಿ ಹೇಳಿಲ್ಲ. ಈಶ್ವರಪ್ಪ ಜೊತೆ ವರಿಷ್ಠರು ಮಾತನಾಡುತ್ತಾರೆ. ಇನ್ನು ಸುಳ್ಯದ ಅಂಗಾರ ಜಂಟಲ್‌ಮ್ಯಾನ್. ಅವರ ಜೊತೆಗೂ ಮಾತನಾಡುತ್ತೇನೆ ಎಂದು ಹೇಳಿದರು.
#Mangalore #CMBommai visits #Dharmasthala temple, says will talk to disappointed #MLAs who are resigning pic.twitter.com/HCMMJvfU9u
— Headline Karnataka (@hknewsonline) April 12, 2023
Mangalore CM Basavaraj Bommai visits Dharmasthala, says will talk to disappointed MLAs who are resigning.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm