ಬ್ರೇಕಿಂಗ್ ನ್ಯೂಸ್
11-04-23 10:45 pm Mangalore Correspondent ಕರಾವಳಿ
ಮಂಗಳೂರು, ಎ.11: ಕರಾವಳಿಯಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಮೇಜರ್ ಸರ್ಜರಿ ಕಾಣಿಸಿಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನು ಬದಲಿಸಿ ಹೊಸಬರಿಗೆ ಮಣೆ ಹಾಕಲಾಗಿದೆ. ಉಡುಪಿಯಲ್ಲಿ ರಘುಪತಿ ಭಟ್, ಕಾಪು ಲಾಲಾಜಿ ಮೆಂಡನ್, ಕುಂದಾಪುರದಲ್ಲಿ ಶ್ರೀನಿವಾಸ ಶೆಟ್ಟಿ ಹಾಲಾಡಿ ಟಿಕೆಟ್ ಕಳಕೊಂಡಿದ್ದಾರೆ. ಇವರ ಬದಲು ಉಡುಪಿಗೆ ಯಶಪಾಲ್ ಸುವರ್ಣ, ಕಾಪು ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರದಲ್ಲಿ ಕಿರಣ್ ಕೊಡ್ಗಿ ಸ್ಥಾನ ಪಡೆದಿದ್ದಾರೆ.
ಕುಂದಾಪುರದಲ್ಲಿ ಬ್ರಾಹ್ಮಣ ಸಮುದಾಯದ ಕಿರಣ್ ಕೊಡ್ಗಿ ಟಿಕೆಟ್ ಪಡೆದಿರುವುದರಿಂದ ಸಹಜವಾಗಿಯೇ ಬ್ರಾಹ್ಮಣ ಕೋಟಾದ ರಘುಪತಿ ಭಟ್ ಸ್ಥಾನ ಕಳಕೊಂಡಿದ್ದಾರೆ. ಸಹಕಾರಿ ಧುರೀಣ ದಿವಂಗತ ಎ.ಜಿ.ಕೊಡ್ಗಿ ಪುತ್ರನಾಗಿರುವ ಕಿರಣ್ ಕೊಡ್ಗಿ ಹೆಸರನ್ನು ಹಾಲಾಡಿಯವರೇ ಸೂಚಿಸಿದ್ದರಿಂದ ಅದನ್ನು ಪರಿಗಣಿಸಲಾಗಿದೆ. ಕಾರ್ಕಳದಲ್ಲಿ ಹಾಲಿ ಶಾಸಕ ಸುನಿಲ್ ಕುಮಾರ್ ಅವರೇ ಸ್ಪರ್ಧಿಸಲಿದ್ದಾರೆ. ಬೈಂದೂರು ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿಲ್ಲ. ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಅವರನ್ನು ಬದಲಿಸಲಿದ್ದಾರೆ ಎನ್ನಲಾಗುತ್ತಿದ್ದರೂ, ಯಾರು ಅಭ್ಯರ್ಥಿ ಅನ್ನುವ ಬಗ್ಗೆ ಇನ್ನೂ ಅಂತಿಮ ಆಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುತ್ತೂರು ಮತ್ತು ಸುಳ್ಯಕ್ಕೆ ಹೊಸ ಮುಖ ಪರಿಚಯಿಸಲಾಗಿದೆ. ಪುತ್ತೂರಿನಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಮಾಜಿ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸುಳ್ಯಕ್ಕೆ ಭಾಗೀರಥಿ ಮುರುಳ್ಯ ಟಿಕೆಟ್ ಪಡೆದಿದ್ದಾರೆ. ಭಾಗೀರಥಿ ಮುರುಳ್ಯ ಜಿಪಂ ಸದಸ್ಯರಾಗಿದ್ದು, ಸುಳ್ಯದವರೇ ಆಗಿದ್ದಾರೆ. ಸುಳ್ಯದಲ್ಲಿ ಆರು ಬಾರಿಯ ಶಾಸಕ ಎಸ್. ಅಂಗಾರ ಅವರಿಗೆ ನಿವೃತ್ತಿ ನೀಡಲಾಗಿದೆ. ಸುಳ್ಯದಲ್ಲಿ ಅಭ್ಯರ್ಥಿ ಬದಲಾವಣೆ ಆಗಲೇಬೇಕೆಂದು ಅಲ್ಲಿನ ಕಾರ್ಯಕರ್ತರು ಆಗ್ರಹ ಮಾಡಿದ್ದರು. ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದ್ದ ಮಂಗಳೂರು ಉತ್ತರದಲ್ಲಿ ಹಾಲಿ ಶಾಸಕ ಭರತ್ ಶೆಟ್ಟಿ ಅವರೇ ಮತ್ತೆ ಟಿಕೆಟ್ ಪಡೆದಿದ್ದಾರೆ. ಮೂಡುಬಿದ್ರೆ, ಮಂಗಳೂರು ದಕ್ಷಿಣ, ಬಂಟ್ವಾಳ, ಬೆಳ್ತಂಗಡಿಯಲ್ಲಿ ಹಾಲಿ ಶಾಸಕರೇ ಮತ್ತೆ ಕಣಕ್ಕಿಳಿಯಲಿದ್ದಾರೆ.
ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಈ ಬಾರಿ ಸತೀಶ್ ಕುಂಪಲ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಲ್ಲವ ಸಮುದಾಯದ ಸತೀಶ್ ಕುಂಪಲ ಈ ಬಾರಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಲ್ಲಿ ಸಂತೋಷ್ ರೈ ಬೋಳ್ಯಾರ್ ಸ್ಪರ್ಧೆ ಮಾಡಿದ್ದರು. 19 ಸಾವಿರ ಮತಗಳಿಂದ ಯುಟಿ ಖಾದರ್ ವಿರುದ್ಧ ಸೋಲು ಕಂಡಿದ್ದರು. ಸತೀಶ್ ಕುಂಪಲ ಈ ಹಿಂದೆ ಜಿಪಂ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಉಳಿದಂತೆ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಅವರಿಗೆ ಚಾಮರಾಜಪೇಟೆಯಲ್ಲಿ ಟಿಕೆಟ್ ನೀಡಲಾಗಿದೆ. ಮಹದೇವಪುರ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಕಂಡಿದ್ದ ಅರವಿಂದ ಲಿಂಬಾವಳಿಗೆ ಕೊಕ್ ನೀಡಲಾಗಿದೆ. ಮೈಸೂರಿನಲ್ಲಿ ರಾಮದಾಸ್ ಗೆ ಟಿಕೆಟ್ ನೀಡಿಲ್ಲ. ಅಥಣಿ ಕ್ಷೇತ್ರದಲ್ಲಿ ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೇ ಟಿಕೆಟ್ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ರಮೇಶ್ ಜಾರಕಿಹೊಳಿ ಮಾತಿಗೆ ಹೆಚ್ಚು ಮನ್ನಣೆ ನೀಡಲಾಗಿದೆ. ಅಥಣಿಯಲ್ಲಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಲಕ್ಷ್ಮಣ ಸವದಿ ಟಿಕೆಟ್ ಪಡೆದಿಲ್ಲ. ಅಲ್ಲಿ ಬಂಡಾಯ ಎದ್ದು ಪಕ್ಷೇತರ ನಿಲ್ಲುವ ಸೂಚನೆ ನೀಡಿದ್ದಾರೆ.
Mangalore Ullal BJP ticket to Satish Kumpala, Puttur Sanjeeva Matandoor, Udupi Raghupati Bhat out, Angara resigns. The Bharatiya Janata Party (BJP) on Tuesday evening announced its first list of 189 candidates for the Karnataka assembly polls. Before the announcement, Union Home Minister Amit Shah reached BJP national president JP Nadda’s Delhi residence to discuss the same.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm