ಬ್ರೇಕಿಂಗ್ ನ್ಯೂಸ್
07-04-23 10:33 pm Mangaluru Correspondent ಕರಾವಳಿ
ಮಂಗಳೂರು, ಎ.7: ಹಿಂದುತ್ವದ ಆಧಾರದಲ್ಲಿ ಬಿಲ್ಲವರಿಗೆ ಸೀಟು ಕೊಡಬೇಕೆಂಬ ಅಹವಾಲು, ಮತ್ತೊಂದೆಡೆ ಕ್ರಿಸ್ತಿಯನ್ ಕೋಟಾದ ಪಾಲು. ಇವರೆಡು ಜಿದ್ದಾಜಿದ್ದಿನ ಬಳಿಕ ಕಾಗ್ರೆಸ್ ಕೇಂದ್ರ ನಾಯಕರು ಐಡಿಯಾಲಜಿ ಪ್ರಶ್ನೆಯನ್ನೇ ಮುಂದಿಟ್ಟಿದ್ದಾರೆ. ಐಡಿಯಾಲಜಿ ಪ್ರಶ್ನೆಯಲ್ಲಿ ರಾಜ್ಯ ಚುನಾವಣಾ ಸಮಿತಿ ಕಳಿಸಿಕೊಟ್ಟಿದ್ದ ಪದ್ಮರಾಜ್ ರಾಮಯ್ಯ ಮತ್ತು ಜೆ.ಆರ್ ಲೋಬೊ ಎಂಬ ಎರಡು ಹೆಸರುಗಳ ಪೈಕಿ ಕ್ರಿಸ್ತಿಯನ್ ಕೋಟಾದ ಅಭ್ಯರ್ಥಿಯನ್ನೇ ಹೈಕಮಾಂಡ್ ಫೈನಲ್ ಮಾಡಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಕಡೆಯಿಂದ 1970ರ ದಶಕದಿಂದಲೂ ಮಂಗಳೂರು ಕ್ಷೇತ್ರವನ್ನು ಕ್ರಿಸ್ತಿಯನ್ ಕೋಟಾದಡಿ ನೀಡುತ್ತಾ ಬರಲಾಗಿತ್ತು. ಆನಂತರ, ರಾಜ್ಯದಲ್ಲಿ ಎರಡು ಸೀಟು ಕ್ರಿಸ್ತಿಯನ್ನರಿಗೆ ಕೊಡುವುದನ್ನು ವಾಡಿಕೆ ಮಾಡಲಾಗಿತ್ತು. ಆದರೆ ಕಳೆದ ಬಾರಿ ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಕಾಂಗ್ರೆಸ್ ಕರಾವಳಿಯಲ್ಲಿ ಕೊಚ್ಚಿ ಹೋಗಿದ್ದು ಪಕ್ಷದ ಕೆಲವು ನಾಯಕರನ್ನು ಮತ್ತೆ ಚಿಂತಿಸುವಂತೆ ಮಾಡಿತ್ತು. ಹೀಗಾಗಿ ಈ ಬಾರಿಯ ಚುನಾವಣೆಗೂ ಮೊದಲೇ ಸದ್ದು ಮಾಡಿದ್ದ ಬಿಲ್ಲವ ಕೋಟಾದ ಹೋರಾಟ ಮಂಗಳೂರಿನಲ್ಲಿ ಕ್ರಿಸ್ತಿಯನ್ ಕೋಟಾಕ್ಕೆ ಟಾಂಗ್ ಕೊಡುವಷ್ಟರ ಮಟ್ಟಿಗೆ ಬೆಳೆದಿತ್ತು. ಮಂಗಳೂರು ದಕ್ಷಿಣ ಅಥವಾ ಉತ್ತರ ಕ್ಷೇತ್ರದಲ್ಲಿ ಪದ್ಮರಾಜ್ ಹೆಸರು ಮುನ್ನೆಲೆಗೆ ಬಂದಿತ್ತು.
ಇದೇ ವೇಳೆಗೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಹೆಸರು ಚಾಲ್ತಿಗೆ ಬಂದಿತ್ತು. ಕುಮಟಾದಲ್ಲಿ ನಿವೇದಿತ್ ಆಳ್ವಾ ಸೀಟು ಪಡೆದಲ್ಲಿ ಮಂಗಳೂರು ದಕ್ಷಿಣದಲ್ಲಿ ಕೊಡಲಾಗುತ್ತಿದ್ದ ಕ್ರಿಸ್ತಿಯನ್ ಕೋಟಾದ ಸೀಟನ್ನು ಬದಲಾವಣೆ ಮಾಡಬಹುದೆಂಬ ಚಿಂತನೆ ರಾಜ್ಯ ಮಟ್ಟದಲ್ಲಿ ನಡೆದಿತ್ತು. ಇದೇ ಲೆಕ್ಕಾಚಾರದಲ್ಲಿ ಪದ್ಮರಾಜ್ ಸೀಟು ಪಡೆಯುವುದು ಈ ಬಾರಿ ಖಚಿತ ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಆದರೆ ಮಂಗಳೂರು ಮೂಲದ ಜಾತ್ಯತೀತ ಕಲ್ಪನೆಯ ಕೆಲವು ಕಾಂಗ್ರೆಸ್ ನಾಯಕರು ಹೈಕಮಾಂಡಿಗೆ ದೂರು ಒಯ್ದಿದ್ದರು. ಹಿಂದುತ್ವದ ಅಡಿಯಲ್ಲಿ ಸೀಟು ನೀಡಿದಲ್ಲಿ ನೀವು ಆರೆಸ್ಸೆಸ್ ಚಿಂತನೆಯನ್ನು ಅಳವಡಿಸಿಕೊಂಡಂತೆ ಆಗುತ್ತದೆ ಎನ್ನುವ ದೂರು. ಹಿಂದುತ್ವದ ನೆಪದಲ್ಲಿ ಮುಸ್ಲಿಂ, ಕ್ರಿಸ್ತಿಯನ್ನರನ್ನು ಚುನಾವಣೆ ಸ್ಪರ್ಧೆಯಿಂದ ದೂರ ಇಟ್ಟರೆ, ಜಾತ್ಯತೀತ ತತ್ವಗಳಿಗೆ ಕೊಡಲಿ ಏಟು ಕೊಟ್ಟಂತೆ ಆಗುತ್ತದೆ. ಜೊತೆಗೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗಿರುವ ಅಲ್ಪಸಂಖ್ಯಾತ ಕೋಟಾದ ಮತಗಳನ್ನು ಕಳೆದುಕೊಳ್ಳುವ ಅಪಾಯ ಇದೆಯೆಂದು ಕಿವಿಯೂದಿದ್ದರು.
ಇದೇ ನೆಲೆಯಲ್ಲಿ ಎರಡು ವಾರಗಳ ಹಿಂದೆ ಅಂತಿಮಗೊಂಡಿದ್ದ ಪದ್ಮರಾಜ್ ಹೆಸರು ಹೈಕಮಾಂಡ್ ಮಟ್ಟದಲ್ಲಿ ಹೊರಗೆ ದೂಡಲ್ಪಟ್ಟಿದೆ ಎನ್ನುವ ಮಾಹಿತಿಗಳಿವೆ. ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಬ್ಬರು ಈ ವಿಚಾರದಲ್ಲಿ ಗಟ್ಟಿ ನಿಂತಿದ್ದು, ಮಂಗಳೂರಿನ ಕ್ರಿಸ್ತಿಯನ್ ಕೋಟಾ ಬದಲಾವಣೆ ಮಾಡಲಾಗದು. ಕುಮಟಾದಲ್ಲಿ ಕ್ರಿಸ್ತಿಯನ್ನರ ಮತಗಳೇ ಇಲ್ಲ. ಅಲ್ಲಿಗೆ ಸ್ಥಾನಾಂತರ ಮಾಡೋದು ಸದ್ಯಕ್ಕೆ ಸಾಧ್ಯವಿಲ್ಲ ಎನ್ನುವ ಮಾತು ಹೇಳಿದ್ದು ಹೈಕಮಾಂಡ್ ಮಟ್ಟದಲ್ಲಿ ನಿಲುವು ಗಟ್ಟಿಗೊಳ್ಳುವಂತಾಗಿತ್ತು. ಈ ಬಾರಿ ಗೆಲುವೇ ಮಾನದಂಡ ಆಗಿರುವುದರಿಂದ, ಯಾವುದೇ ಸೀಟನ್ನು ಜಾತಿ ಕೋಟಾದಡಿ ನೀಡುವಂತಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದ ಹೈಕಮಾಂಡ್ ಮಟ್ಟದ ನಾಯಕರು ಕೊನೆಕ್ಷಣದಲ್ಲಿ ತಮ್ಮ ಚಿಂತನೆ ಬದಲು ಮಾಡಿಕೊಂಡಿದ್ದಾರೆ. ಜಾತ್ಯತೀತ ತತ್ವದಡಿ ಇಂತಿಷ್ಟು ಅಲ್ಪಸಂಖ್ಯಾತ, ದಲಿತ ಸೀಟುಗಳನ್ನು ನಾವು ಕೊಟ್ಟೇ ಕೊಡುತ್ತೇವೆ, ಬಿಜೆಪಿ ಸಿದ್ಧಾಂತವನ್ನು ಅಳವಡಿಸಿಕೊಳ್ಳುವುದಿಲ್ಲ ಎಂಬ ಹಳೆ ಸಿದ್ಧಾಂತಕ್ಕೆ ಅಂಟಿಕೊಂಡಿದ್ದಾರೆ. ಇದರಿಂದ ಮಾಜಿ ಶಾಸಕ ಜೆಆರ್ ಲೋಬೊ ಕೈಮೇಲಾಗಿದೆ. ಅಲ್ಲಿ ವರೆಗೂ ಪೈಪೋಟಿ ಕೊಟ್ಟಿದ್ದ ಪದ್ಮರಾಜ್ ಮತ್ತು ಐವಾನ್ ಡಿಸೋಜ ಹೆಸರು ಬಲ ಕಳಕೊಂಡಿದೆ.
Tt has been gathered that former MLA J R Lobo is all likely to get the ticket for Mangaluru South constituency which he had represented once in the past. It is learnt former MLC Ivan D’Souza and Billawa leader Padmaraj Karkera too are keen to contest from this constituency. Despite Congress releasing its two lists of official candidates for the upcoming Assembly elections, it is yet to announce candidates for Mangaluru South, North and Puttur.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
04-07-25 10:54 pm
Mangalore Correspondent
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
Mangalore Police, Drugs, Sudheer Kumar Reddy:...
03-07-25 10:50 pm
04-07-25 08:56 pm
Bangalore Correspondent
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm
ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ; ಸಿಸಿಬಿ ಪೊಲೀಸರ...
03-07-25 08:38 pm