ಬ್ರೇಕಿಂಗ್ ನ್ಯೂಸ್
05-04-23 04:10 pm Mangalore Correspondent ಕರಾವಳಿ
ಸುಳ್ಯ, ಎ.5: ಕಳೆದ ವರ್ಷ ಭೀಕರವಾಗಿ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರಿಗೆ ಬಿಜೆಪಿ ವತಿಯಿಂದ ನೂತನ ಮನೆ ನಿರ್ಮಿಸಿಕೊಡಲಾಗಿದೆ. ಹೊಸ ಮನೆಯ ಗೃಹ ಪ್ರವೇಶವನ್ನು ಇದೇ ಎಪ್ರಿಲ್ 27ರಂದು ಸರಳವಾಗಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಪ್ರವೀಣ್ ಅವರು ತಮ್ಮ ಹಳೆ ಮನೆಯನ್ನು ಕೆಡವಿ ಅಲ್ಲಿಯೇ ಹಿಂಭಾಗದಲ್ಲಿ ಹೊಸತಾಗಿ ಮನೆ ನಿರ್ಮಿಸಲು ತಯಾರಿ ನಡೆಸಿದ್ದರು. ಆದರೆ ಅಷ್ಟರಲ್ಲೇ ಪ್ರವೀಣ್ ಕೊಲೆಯಾಗಿದ್ದು ಮನೆಯವರನ್ನು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತ್ತು. ಪ್ರವೀಣ್ ಕೊಲೆಯ ಬಳಿಕ ಶವ ಮೆರವಣಿಗೆ ನಡೆಯುತ್ತಿದ್ದಾಗಲೇ ಕಾರ್ಯಕರ್ತರು ಆಕ್ರೋಶಗೊಂಡು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಅವರನ್ನು ಕೂಡಿಹಾಕಿದ್ದಲ್ಲದೆ, ಅವರ ಕಾರುಗಳನ್ನು ಅಲುಗಾಡಿಸಿದ ಘಟನೆಯೂ ನಡೆದಿತ್ತು.
ಕಾರ್ಯಕರ್ತರ ಆಕ್ರೋಶದ ಪರಿಣಾಮ ಸಿಎಂ ಬೊಮ್ಮಾಯಿ ಆದಿಯಾಗಿ ಬಿಜೆಪಿ ನಾಯಕರು ಪ್ರವೀಣ್ ನೆಟ್ಟಾರು ಮನೆಗೆ ಆಗಮಿಸಿದ್ದರು. ಮನಯವರನ್ನು ಸಂತೈಸಿದ್ದೂ ಆಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಮುಖ್ಯಮಂತ್ರಿ ಎದುರಲ್ಲೇ ಭಾರೀ ಆಕ್ರೋಶವನ್ನೂ ಎದುರಿಸಿದ್ದರು. ಮರುದಿನವೇ ಬಿಎಸ್ವೈ ಪುತ್ರ ವಿಜಯೇಂದ್ರ ಪ್ರವೀಣ್ ಮನೆಗೆ ಬಂದು ತಾನೇ ಮನೆ ಕಟ್ಟಿಸಿಕೊಡುವುದಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಳಿನ್ ಕುಮಾರ್, ರಾಜ್ಯ ಬಿಜೆಪಿ ವತಿಯಿಂದಲೇ ಪ್ರವೀಣ್ ಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅಲ್ಲದೆ, ತನ್ನ ಆಪ್ತ ಗುತ್ತಿಗೆದಾರ ಸುಧಾಕರ ಶೆಟ್ಟಿ ಅವರಿಗೆ ವೀಳ್ಯ ಕೊಟ್ಟು ಒಂದು ವರ್ಷದೊಳಗೆ ಮನೆ ಕಟ್ಟಿಕೊಡಬೇಕು ಎಂದು ಸೂಚನೆ ನೀಡಿದ್ದರು.
ಅದಾಗಿ, ಕೇವಲ ಏಳು ತಿಂಗಳಲ್ಲಿ 2500 ಚದರಡಿ ವಿಸ್ತೀರ್ಣದಲ್ಲಿ ಸುಂದರ ಮನೆಯನ್ನು ಗುತ್ತಿಗೆದಾರ ಸುಧಾಕರ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಗೃಹ ಪ್ರವೇಶ ಮಾಡುತ್ತಿರುವುದರಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಗಲ್ಲ. ಇಲ್ಲದೇ ಇರುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷರೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ಸಾಧ್ಯತೆಗಳಿದ್ದವು. ಕುಟುಂಬಕ್ಕೆ ಮನೆ ಅಲ್ಲದೆ, ಪ್ರವೀಣ್ ಅವರ ಪತ್ನಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಟ್ರಾಕ್ಟ್ ಬೇಸಿಸಲ್ಲಿ ಉದ್ಯೋಗವನ್ನೂ ದೊರಕಿಸಿಕೊಡಲಾಗಿತ್ತು.
The newly constructed house for Praveen Nettar is all set for inauguration by BJP on april 27th. The BJP had decided to bear the expenses of the construction of a house for the family of the party's youth wing activist Praveen Nettar.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm