ಬ್ರೇಕಿಂಗ್ ನ್ಯೂಸ್
31-03-23 09:21 pm Mangalore Correspondent ಕರಾವಳಿ
ಮಂಗಳೂರು, ಮಾ.31 : ಕಾಂಗ್ರೆಸಿನ 29 ಮಂದಿ ಶಾಸಕರು ಮಾಧ್ಯಮ ಒಂದರ ಸ್ಟಿಂಗ್ ಆಪರೇಶನಲ್ಲಿ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದಿದ್ದಾರೆ. ಇದರ ವಿಡಿಯೋ ಇದ್ದು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಏನಂತಾರೆ. ರೆಡ್ ಹ್ಯಾಂಡ್ ಹಣ ತೆಗೆದುಕೊಳ್ತಿರುವ ವಿಡಿಯೋ ಇದ್ದರೂ, 13 ಜನರಿಗೆ ಟಿಕೆಟ್ ಕೊಟ್ಟಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಆಗ್ರಹ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಈ ಪೈಕಿ ಹನ್ನೊಂದು ಜನ ಬೆಂಗಳೂರಿನ ಶಾಸಕರ ಭವನದಲ್ಲಿಯೇ ಹಣ ಸ್ವೀಕರಿಸಿದ್ದಾರೆ, ಖಾಸಗಿ ಹೊಟೇಲ್ ನಲ್ಲಿ ನಾಲ್ಕು ಜನ, ಒಂದಷ್ಟು ಮಂದಿ ರೆಸಾರ್ಟಲ್ಲಿ ಹಣ ಪಡೆದಿದ್ದಾರೆ. ಒಟ್ಟು 29 ಜನ ಶಾಸಕರು ರೆಡ್ ಹ್ಯಾಂಡ್ ಆಗಿ ಹಣ ತೆಗೊಂಡಿದ್ದು ಸ್ಟಿಂಗಲ್ಲಿ ಪತ್ತೆಯಾಗಿದೆ. ಕಾಂಗ್ರೆಸ್ ಶಾಸಕರು ಬೇರೆ ಬೇರೆ ವಾಮಮಾರ್ಗದಲ್ಲಿ ಹಣ ತೆಗೆದುಕೊಂಡಿರುವುದು ರೆಕಾರ್ಡ್ ಆಗಿದೆ.

ಹೀಗಿದ್ದರೂ ಕಾಂಗ್ರೆಸ್ ನಾಯಕರು ಯಾವ ನೈತಿಕತೆ ಇಟ್ಟು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಈಗ ಸಿದ್ದರಾಮಯ್ಯ ಅವರಲ್ಲಿ ಕೇಳ್ತೀನಿ, ಪ್ರತಿ ಮಾತಿಗೂ ನಲ್ವತ್ತು ಪರ್ಸೆಂಟ್ ಅಂತೀರಲ್ಲಾ.. ನಲ್ವತ್ತು ಪರ್ಸೆಂಟ್ ಕಮಿಷನ್ ಹೇಳಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಗೆ ವರ್ಕ್ ಆರ್ಡರ್ ಕೊಟ್ಟಿದ್ದು ಯಾರು ? ಸಂತೋಷ್ ಪಾಟೀಲ್ ಗೆ ನಿಮ್ಮದೇ ಶಾಸಕಿಯೊಬ್ಬರು ವರ್ಕ್ ಆರ್ಡರ್ ಇಲ್ಲದೆ ಕಾಮಗಾರಿ ಕೊಟ್ಡಿದ್ದು ಹೇಗೆ ?
ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಅಂತ ಹೇಳುವುದು ಇದಕ್ಕಾಗಿ. ನಿಮ್ಮ ಕೈಲಿ ಸಾಮರ್ಥ್ಯ ಇದ್ದರೆ ದುಡ್ಡು ತೆಗೆದುಕೊಂಡು ಸಿಕ್ಕಿಬಿದ್ದ 13 ಮಂದಿಗೆ ಟಿಕೆಟ್ ಕೊಡುತ್ತಿರುವ ವಿಚಾರದ ಬಗ್ಗೆ ಸ್ಪಷ್ಟನೆ ಕೊಡಿ, ಇವರು ದುಡ್ಡು ತೆಗೆದುಕೊಂಡಿದ್ದು ಸತ್ಯವೋ, ಸುಳ್ಳಾ ಹೇಳಿ.. ನಿಮ್ಮ ಶಾಸಕರು ದುಡ್ಡು ತೆಗೆದುಕೊಳ್ಳುತ್ತಿರುವ ವಿಡಿಯೋ ಬಗ್ಗೆ ಏನು ಹೇಳುತ್ತೀರಿ.
ನಿಮ್ಮ ರಾಷ್ಟ್ರೀಯ ನಾಯಕರಿಂದ ಹಿಡಿದು ರಾಜ್ಯ ಅಧ್ಯಕ್ಷರೆಲ್ಲ ಬೇಲ್ ನಲ್ಲಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ನಾಯಕರ ಬಗ್ಗೆ ನೈತಿಕತೆ ಇದೆಯೇ.. ಯಾವೆಲ್ಲ ಶಾಸಕರು ಹಣ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ನಮ್ಮಲ್ಲಿ ದಾಖಲೆ ಇದೆ. ಇದನ್ನು ನಾವು ಸಾಂವಿಧಾನಿಕ ಸಂಸ್ಥೆಯ ಮುಂದಿಟ್ಟು ಕಾನೂನು ಕ್ರಮಕ್ಕೆ ಒತ್ತಾಯಿಸುತ್ತೇವೆ.
ಕಾಂಗ್ರೆಸಿನದ್ದು ಪೂರ್ತಿ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ, ತುಷ್ಟೀಕರಣ ರಾಜಕೀಯ ಮಾತ್ರ. ಇವರ ಭ್ರಷ್ಟಾಚಾರದ ಬಗ್ಗೆ ದೇಶದಾದ್ಯಂತ ಜನರಿಗೆ ಗೊತ್ತಿದೆ. ಈ ಸಲದ ಚುನಾವಣೆಯಲ್ಲಿ ಜನರು ಕಾಂಗ್ರೆಸನ್ನು ತಿರಸ್ಕರಿಸಲಿದ್ದಾರೆ ಎಂದು ಎಂಜಿ ಮಹೇಶ್ ಹೇಳಿದ್ದಾರೆ.
29 Congress MLA have been caught red handed in sting operation what has Congress has to say slams MG kumar.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm