ಬ್ರೇಕಿಂಗ್ ನ್ಯೂಸ್
24-03-23 10:14 pm Mangalore Correspondent ಕರಾವಳಿ
ಮಂಗಳೂರು, ಮಾ.24: ಖಾಸಗಿ ಬಸ್ಸಿನ ಧಾವಂತಕ್ಕೆ ಸ್ಕೂಟರ್ ಮೇಲೆ ಡಿಕ್ಕಿಯಾಗಿ ಹನ್ನೊಂದು ವರ್ಷದ ಹುಡುಗ ಸ್ಥಳದಲ್ಲೇ ದುರಂತ ಮೃತಪಟ್ಟ ಘಟನೆ ನಗರದ ಬೆಂದೂರ್ ವೆಲ್ ನಲ್ಲಿ ನಡೆದಿದೆ.
ಸ್ವಾತಿ - ಪ್ರಮೋದ್ ದಂಪತಿಯ ಮಗ ಹಾರ್ದಿಕ್ (11) ಮೃತ ಬಾಲಕ. ತಾಯಿ ಸ್ವಾತಿ ಮಗನ ಜೊತೆಗೆ ಪಂಪ್ವೆಲ್ ಕಪಿತಾನಿಯೋ ಕಡೆಯಿಂದ ಸ್ಕೂಟರಿನಲ್ಲಿ ಬಲ್ಮಠದತ್ತ ತೆರಳುತ್ತಿದ್ದರು. ಬೆಂದೂರುವೆಲ್ ನಲ್ಲಿ ನಿಂತಿದ್ದ ಬಸ್ಸನ್ನು ಓವರ್ ಟೇಕ್ ಮಾಡಿ ಮುಂದೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಶಾರದಾ ಹೆಸರಿನ ಖಾಸಗಿ ಬಸ್ಸಿನ ಚಾಲಕ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ.

ಬಸ್ಸಿನ ಧಾವಂತಕ್ಕೆ ಸ್ಕೂಟರ್ ಗೆ ಡಿಕ್ಕಿಯಾಗಿದ್ದು ಹಿಂದೆ ಕುಳಿತಿದ್ದ ಹುಡುಗ ಬಸ್ಸಿನ ಹಿಂದಿನ ಚಕ್ರದಡಿಗೆ ಬಿದ್ದಿದ್ದಾನೆ. ಸ್ಕೂಟರ್ ಚಲಾಯಿಸುತ್ತಿದ್ದ ತಾಯಿ ಸ್ವಾತಿ ಇನ್ನೊಂದು ಬದಿಗೆ ಬಿದ್ದಿದ್ದು, ತಲೆಗೆ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸ್ಥಳೀಯರು ಒಯ್ದಿದ್ದರು. ಆದರೆ ಹುಡುಗ ಅಷ್ಟರಲ್ಲಿ ಸಾವು ಕಂಡಿದ್ದಾನೆ. ಸ್ವಾತಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ವಾತಿ ಅವರು ಖಾಸಗಿ ಕೋಚಿಂಗ್ ಸೆಂಟರಿನಲ್ಲಿ ಉಪನ್ಯಾಸಕಿಯಾಗಿದ್ದು ನಂತೂರಿನಲ್ಲಿ ಮನೆ ಹೊಂದಿದ್ದಾರೆ. ಹುಡುಗನ ತಂದೆ ಪ್ರಮೋದ್, ಬಂಟ್ಸ್ ಹಾಸ್ಟೆಲ್ ನಲ್ಲಿ ಆಟೊಮೊಬೈಲ್ ಸಂಸ್ಥೆಯನ್ನು ಹೊಂದಿದ್ದಾರೆ. ಮೃತ ಹಾರ್ದಿಕ್ ನಗರದ ಶಾರದಾ ವಿದ್ಯಾಸಂಸ್ಥೆಯಲ್ಲಿ 5ನೇ ಕ್ಲಾಸ್ ಓದುತ್ತಿದ್ದ. ಅಪಘಾತ ಪಡಿಸಿದ ಬಸ್ ಮುಡಿಪು ಕಡೆಯಿಂದ ಸ್ಟೇಟ್ ಬ್ಯಾಂಕಿನತ್ತ ತೆರಳುತ್ತಿತ್ತು.

ಘಟನೆ ಬಗ್ಗೆ ಕದ್ರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ಸನ್ನು ಮತ್ತು ಚಾಲಕ ಪ್ರಶಾಂತ್ ಮಾರ್ಲ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತ ಪ್ರಕರಣ ದಾಖಲಿಸಿ, ಪೊಲೀಸರು ಚಾಲಕನನ್ನು ಬಿಟ್ಟು ಕಳುಹಿಸಿದ್ದಾರೆ. ಖಾಸಗಿ ಬಸ್ಸುಗಳ ಧಾವಂತಕ್ಕೆ ಟೈಮ್ ಕೀಪಿಂಗ್ ಮಾಡುವ ವ್ಯವಸ್ಥೆ, ಅದರ ನಡುವೆ ಜನರನ್ನು ಹತ್ತಿಸಿಕೊಂಡು ಹೋಗುವ ದುರವಸ್ಥೆ, ಸೀಮಿತ ಅವಧಿಯಲ್ಲಿ ಹಣ ಮಾಡುವುದಕ್ಕಾಗಿ ಧಾವಂತದಿಂದ ಬಸ್ ಓಡಿಸಬೇಕಾದ ಅನಿವಾರ್ಯತೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟು ಟೈಟ್ ಟೈಮಿಂಗ್ ಮಾಡುವ ಬದಲು ಸರಾಗವಾಗಿ ಬಸ್ ಚಲಾಯಿಸಲು ವ್ಯವಸ್ಥೆ ಮಾಡಿದರೆ, ಈ ರೀತಿಯ ಧಾವಂತಕ್ಕೆ ಕಡಿವಾಣ ಬೀಳಬಹುದು. ನಗರ ಭಾಗದಲ್ಲಿಯೂ ಬಸ್ ಚಾಲಕರು ಧಾವಂತದಿಂದ ಚಲಾಯಿಸುವುದು, ಅದರಿಂದ ಪದೇ ಪದೇ ಅಪಘಾತ ಆಗುತ್ತಿದ್ದರೂ, ಈ ಬಗ್ಗೆ ಪೊಲೀಸರು ಕಡಿವಾಣ ಹಾಕಿಲ್ಲ.
Mangalore accident in Bendoorwell, bus rams scooty 11 year old boy killed on spot, mother injured. The deceased has been identified as Hardik son of Pramod and Swathi. Hardik was the son of Pramod Automobiles in the city.
11-02-26 11:02 pm
HK News Desk
Breast Cancer Awareness Drive Goes Nationwide...
11-02-26 01:34 pm
ಸ್ತನ ಕ್ಯಾನ್ಸರ್ ಬಗ್ಗೆ ದೇಶವ್ಯಾಪಿ ಜಾಗೃತಿ ; ಕಲಬರಗ...
11-02-26 01:09 pm
ಛೆ… ಇವಳೆಂಥ ಮಗಳು! ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬ...
09-02-26 07:20 pm
ಶಿವಮೊಗ್ಗದ ಕಾರು ಚಾಲಕನಲ್ಲಿ 19 ಬಾಡಿಗೆ ಬ್ಯಾಂಕ್ ಖಾ...
09-02-26 01:30 pm
11-02-26 06:47 pm
HK News Desk
ಹಗಲಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್, ರಾತ್ರಿ ವೇಳೆ...
11-02-26 04:22 pm
ಮಥುರಾದಲ್ಲಿ ಮೂವರು ಮಕ್ಕಳಿಗೆ ವಿಷವುಣಿಸಿ ದಂಪತಿ ಸಾವ...
10-02-26 07:31 pm
ಅಡೂರು ಮೂಲದ ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು...
10-02-26 02:15 pm
ರಾಮ ಮಂದಿರ ಸ್ಫೋಟಕ್ಕೆ ಸಂಚು ರೂಪಿಸಿದ್ದ ಕೈದಿ ಫರೀದಾ...
10-02-26 11:44 am
11-02-26 06:00 pm
Mangalore Correspondent
ಎಡಪದವು ಬಳಿ ಹೊಸ ಹೆದ್ದಾರಿಗೆ ಅಗೆತ - ಹಳೆ ರಸ್ತೆ ಕು...
11-02-26 03:45 pm
Love Jihad, Mangalore: ಬಿಎಸ್ಸಿ ಕ್ರಿಮಿನಾಲಜಿ ಓದ...
10-02-26 11:03 pm
Mangaore, Marriage Fraud: ಹಲವಾರು ಹೆಂಡಿರ ಮುದ್ದ...
10-02-26 08:27 pm
Oman Accident: ಒಮಾನ್ ನಲ್ಲಿ ಭೀಕರ ಅಪಘಾತ ; ಕಾಪು...
09-02-26 11:20 pm
11-02-26 10:54 pm
Udupi Correspondent
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ಬೆಲೆಯ ಜಮೀನು ಗುಳು...
11-02-26 09:10 pm
ಸಚಿವ ಬೈರತಿ ಸುರೇಶ್ ಕಚೇರಿಯಲ್ಲೇ 300 ಗ್ರಾಂ ಚಿನ್ನಾ...
10-02-26 09:05 pm
Peter Caddy, Arrest: ಉದ್ಯಮಿಗಳಿಗೆ ಸಾಲ ಕೊಡಿಸುವು...
10-02-26 04:38 pm
Belthangady Fake Kidnap: ಕಾಲೇಜು ವಿದ್ಯಾರ್ಥಿನಿ...
10-02-26 10:59 am