ಬ್ರೇಕಿಂಗ್ ನ್ಯೂಸ್
23-03-23 10:57 pm Mangalore Correspondent ಕರಾವಳಿ
ಮಂಗಳೂರು, ಮಾ.23: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಯತ್ನವಾಗಿ ರಾಜ್ಯ ಸರಕಾರ ಕಳೆದ ಫೆಬ್ರವರಿ ಆರಂಭದಲ್ಲಿ ತಜ್ಞರ ಸಮಿತಿಯನ್ನು ಮಾಡಿತ್ತು. ಆಳ್ವಾಸ್ ವಿದ್ಯಾಸಂಸ್ಥೆಯ ಡಾ.ಮೋಹನ್ ಆಳ್ವಾ ಅಧ್ಯಕ್ಷತೆಯಲ್ಲಿ ಏಳು ಮಂದಿಯ ಸಮಿತಿಯನ್ನು ಮಾಡಲಾಗಿತ್ತು. ಒಂದೇ ವಾರದಲ್ಲಿ ಅಧ್ಯಯನ ವರದಿ ನೀಡುವಂತೆ ರಾಜ್ಯ ಸರಕಾರ ಈ ಕುರಿತ ಆದೇಶದಲ್ಲಿ ಹೇಳಿತ್ತು. ಅಧಿವೇಶನದಲ್ಲಿ ಮಂಡನೆಯಾಗಬೇಕೆಂದು ಮೇಲಿನವರು ತಡವರಿಸಿದ್ದರಿಂದ ತರಾತುರಿಯಲ್ಲಿ ಸಮಿತಿ ಸದಸ್ಯರು ಸಭೆ ಸೇರಿ ಫೆಬ್ರವರಿ 20ರ ವೇಳೆಗೆ ವರದಿಯನ್ನು ಸರಕಾರಕ್ಕೆ ಒಪ್ಪಿಸಿದ್ದರು.
ತಜ್ಞರ ವರದಿ ಸಲ್ಲಿಕೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂತು. ರಾಜ್ಯ ಸರಕಾರ ಈವರೆಗೂ ಅದರ ಬಗ್ಗೆ ನಿರ್ಣಯ ಕೈಗೊಂಡಿಲ್ಲ. ಕಳೆದ ಬಾರಿ ತಜ್ಞರ ಸಮಿತಿ ನೇಮಕ ಆದಾಗ, ಎರಡನೇ ಭಾಷೆ ಆಗಿಯೇ ಬಿಡ್ತು ಎಂದು ಸಂಭ್ರಮಿಸಿದವರು ಈಗ ಮರೆತು ಬಿಟ್ಟಿದ್ದಾರೆ. ಮೊನ್ನೆ ಮಂಗಳೂರಿಗೆ ಬಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದಾಗ, ಅದು ಪರಿಶೀಲನೆಯಲ್ಲಿದೆ ಎಂದಷ್ಟೇ ಒಂದು ಗೆರೆಯ ಉತ್ತರ ಹೇಳಿದ್ದರು. ಜೊತೆಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್, ಅದು ಆಗುತ್ತೆ ಎಂದು ಹಿಂದಿನಿಂದಲೇ ಮೆಲ್ಲಗೆ ಉಸುರಿದ್ದರು. ಈ ಬಗ್ಗೆ ತಜ್ಞರ ಸಮಿತಿಯ ಅಧ್ಯಕ್ಷ ಮೋಹನ್ ಆಳ್ವಾ ದಿನವೂ ಸುನಿಲ್ ಕುಮಾರ್ ಮತ್ತು ಈ ಭಾಗದ ಸಂಸದ ನಳಿನ್ ಕುಮಾರ್ ಗೆ ನೆನಪು ಮಾಡುತ್ತಲೇ ಇದ್ದಾರೆ.
ಕಳೆದ ಗುರುವಾರವೂ ರಾಜ್ಯ ಸರಕಾರದ ಸಂಪುಟ ಸಭೆ ನಡೆದಿತ್ತು, ಅದರಲ್ಲಿ ತುಳು ಭಾಷೆ ಇನ್ನಿತರ ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ ಮಾಡಲಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಅದಕ್ಕೂ ಮೊದಲು ಹೇಳಿದ್ದರಂತೆ. ಈ ಮೊದಲು ಅಧಿವೇಶನದಲ್ಲಿ ಪ್ರಸ್ತಾಪಿಸಿ ನಿರ್ಣಯ ಮಾಡುತ್ತೇವೆ ಎಂದು ಹೇಳಿ ತಜ್ಞರ ಸಮಿತಿಯಲ್ಲಿ ವರದಿ ಕೊಡಲು ಅವಸರ ಮಾಡಿದ್ದರು. ಫೆ.24ರ ವರೆಗೂ ವಿಧಾನಸಭೆ ಅಧಿವೇಶನ ನಡೆದಿದ್ದು, ವರದಿ ಮಂಡನೆ ಮಾಡುವುದಿದ್ದರೆ ಮಾಡಬಹುದಿತ್ತು. ಅದೇ ಅಧಿವೇಶನದಲ್ಲಿ ಮಂಗಳೂರಿನ ಶಾಸಕ ಯುಟಿ ಖಾದರ್, ತುಳು ಭಾಷೆಯ ಬಗ್ಗೆ ಪ್ರಶ್ನೆಯೆತ್ತಿ ಸದನದ ಗಮನ ಸೆಳೆದಿದ್ದರು. ಖಾದರ್ ತುಳು ದೇವ ಭಾಷೆ ಎಂದು ಹೇಳಿದ್ದಕ್ಕೆ, ಕಾನೂನು ಸಚಿವ ಮಾಧುಸ್ವಾಮಿ ಕುಹಕವಾಡಿದ್ದೂ ಆಗಿತ್ತು. ಹಾಗಿದ್ದರೂ, ಕರಾವಳಿಯ ಯಾವುದೇ ಬಿಜೆಪಿ ಶಾಸಕ ತುಳು ಭಾಷೆಯ ಬಗ್ಗೆ ಸದನದಲ್ಲಿ ಮಾತೆತ್ತಿಲ್ಲ.
ರಾಜ್ಯ ಸರಕಾರ ಚುನಾವಣೆ ಹೊತ್ತಿಗಾದರೂ, ತುಳು ಭಾಷೆಯನ್ನು ದ್ವಿತೀಯ ಭಾಷೆಯಾಗಿ ಅಂಗೀಕಾರ ಮಾಡಿ ಕರಾವಳಿಗರ ಮರ್ಯಾದೆ ಉಳಿಸುತ್ತದೆ ಎಂದು ಜನರು ನಂಬಿದ್ದರು. ಬಿಜೆಪಿ ಸರಕಾರದ ಬಗ್ಗೆ ತುಳುವರು ನಿರೀಕ್ಷೆಯನ್ನೂ ಹೊಂದಿದ್ದರು. ಆದರೆ ನಿರೀಕ್ಷೆ ಹುಸಿಯಾಗುತ್ತಾ ಅನ್ನುವ ಶಂಕೆ ಮೂಡಿದೆ. ಮಾ.24ರಂದು ರಾಜ್ಯ ಸರಕಾರದ ಕೊನೆಯ ಕ್ಯಾಬಿನೆಟ್ ಸಭೆ ಇದೆ. ರಾಜ್ಯ ಬಿಜೆಪಿ ಸರಕಾರ ಏನಾದರೂ ಕೊನೆ ಗಳಿಗೆಯಲ್ಲಿ ಘೋಷಣೆ ಮಾಡುವುದಿದ್ದರೆ, ಕ್ಯಾಬಿನೆಟ್ ಸಭೆಯಲ್ಲಿ ನಿರ್ಣಯಿಸಿ ಘೋಷಿಸಲು ಅವಕಾಶ ಇದೆ. ಅಧಿವೇಶನದಲ್ಲಿ ಪ್ರಸ್ತಾಪ ಮಾಡದೆಯೂ ಕಾನೂನು ಇಲಾಖೆಯಲ್ಲಿ ಮಾನ್ಯತೆ ಪಡೆದು ಸಂಪುಟದಲ್ಲಿ ನಿರ್ಣಯಿಸಬಹುದು. ಆ ಬಗ್ಗೆ ಮುಂದಿನ ಅಧಿವೇಶನದಲ್ಲಿ ಒಪ್ಪಿಗೆ ಪಡೆಯುವುದಕ್ಕೂ ಅವಕಾಶ ಇರುತ್ತದೆ.
ತುಳು ಭಾಷೆಗೆ ಮಾನ್ಯತೆ ನೀಡದೇ ಇದ್ದರೆ, ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುತ್ತೇವೆಂದು ತುಳು ಭಾಷೆಯ ಅಭಿಮಾನಿಗಳು ಮಾ.22ರಂದು ಮಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಒಂದಷ್ಟು ಪ್ರಬುದ್ಧರು ಸೇರಿ ಚಿಂತನೆಯನ್ನೂ ನಡೆಸಿದ್ದಾರೆ. ತಡವಾದರೂ, ತುಳು ಭಾಷಿಗರು ಎಚ್ಚತ್ತುಕೊಂಡಿದ್ದಾರೆ ಎನ್ನಬೇಕಷ್ಟೇ. ಈ ಹಿಂದೆ ತುಳು ಭಾಷೆಯ ಬಗ್ಗೆ ಟ್ವೀಟ್ ಅಭಿಯಾನ ಕೈಗೊಂಡಿದ್ದರೂ, ಆಳುವ ಸರಕಾರದ ಪ್ರತಿನಿಧಿಗಳು ಮಾತ್ರ ಕೇರ್ ಮಾಡಿರಲಿಲ್ಲ. ತುಳು ಆಫೀಶಿಯಲ್ ಎಂದಿದ್ದಕ್ಕೆ, ಸಂಸದ ನಳಿನ್ ಕುಮಾರ್ ತನ್ನದೂ ಅಂಕಿತ ಇದೆ ಎಂದು ಟ್ವೀಟರ್ ನಲ್ಲಿ ಉಸುರಿದ್ದು ಬಿಟ್ಟರೆ ಒಂದು ದಿನವೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಉಡುಪಿ ಮತ್ತು ದಕ್ಷಿಣ ಕನ್ನಡದ ಸಂಸದರು ತುಳುವರೇ ಆಗಿದ್ದರೂ, ಸಂಸತ್ತಿನಲ್ಲಿ ತುಳುವರ ಪರವಾಗಿ ಧ್ವನಿ ಮುಟ್ಟಿಸಿಲ್ಲ. ಕರಾವಳಿಯ ಶಾಸಕರು ಕೂಡ ತುಳು ಭಾಷೆಯ ಬಗ್ಗೆ ಸದನದಲ್ಲಿ ಧ್ವನಿ ಎತ್ತು ಧೈರ್ಯ ಮಾಡಿಲ್ಲ. ಇವರಿಗೆ ಭಾಷೆಯ ಬಗ್ಗೆ ಅಸಡ್ಡೆಯೋ, ಜನರು ನಿರ್ಲಕ್ಷ್ಯ ವಹಿಸಿದ್ದಾರೆ ತಮಗ್ಯಾಕೆ ಬೇಕು ಎಂಬ ನಿರ್ಲಕ್ಷ್ಯವೋ ಗೊತ್ತಿಲ್ಲ.
Tuluvas demand that the language be declared as the second official language in Karnataka and be included in Schedule VIII of the Indian Constitution. Recently, the state government formed a committee, headed by Dr M Mohan Alva, chairman of Alva's Education Foundation, to conduct a study to declare Tulu as the second official language of the state. Activists are considering a NOTA campaign to put pressure on political parties to meet their demand.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm