ಬ್ರೇಕಿಂಗ್ ನ್ಯೂಸ್
23-03-23 10:00 pm Mangalore Correspondent ಕರಾವಳಿ
ಉಳ್ಳಾಲ, ಮಾ.23: ಉಳ್ಳಾಲ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ಲವ ಕುಶ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಹೊನಲು ಬೆಳಕಿನಲ್ಲಿ ನಡೆಯಲಿದ್ದು ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ತುಳುನಾಡಿನ ಧಾರ್ಮಿಕ ವಿಧಿಗಳೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ಕಂಬಳ ಕರೆಯ ಬಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ.25ರಂದು ಬೆಳಗ್ಗೆ ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ತಂತ್ರಿಗಳಾದ ವರ್ಕಾಡಿ ರಾಜೇಶ್ ತಾಳಿತ್ತಾಯರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ. ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಉದ್ಘಾಟಿಸಲಿದ್ದಾರೆ ಎಂದರು.

ನರಿಂಗಾನ ಕಂಬಳ ಆಯೋಜನೆಯಿಂದ ಇಡೀ ಮಂಗಳೂರು ಕ್ಷೇತ್ರದಾದ್ಯಂತ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ಮನೆಗೆ ಜಾತ್ರೆಯಂತೆ ನೆಂಟರು ಸೇರಲಿದ್ದಾರೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ನನ್ನದೇ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಂಬಳ ಪಕ್ಷ, ಧರ್ಮ, ಜಾತಿ, ಬಡವ ಬಲ್ಲಿದ, ಮೇಲು ಕೀಳೆಂಬ ಭಾವನೆಯೇ ಸೃಷ್ಟಿಯಾಗಲು ಅವಕಾಶ ಕೊಡದ ಕಂಬಳ ಎಂದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಕಂಬಳದಲ್ಲಿ ಕಾನೂನು ಉಲ್ಲಂಘನೆ ಆಗದಂತೆ "ಪೇಟಾದ ನಿಯಮ ಪ್ರಕಾರ"ವೇ ಕಂಬಳ ನಡೆಸುವ ಸಲುವಾಗಿ ದಕ್ಷರನ್ನೊಳಗೊಂಡ ಕಂಬಳ ಪ್ರೇಮಿಗಳೇ ಇರುವ ಕಂಬಳ ಸಮಿತಿ ಹಾಗೂ ಇತರ ಉಪ ಸಮಿತಿ ರಚಿಸಲಾಗಿದೆ. ಕಂಬಳವನ್ನು 24 ಗಂಟೆ ಒಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ, ಹಾಗಿದ್ದರೂ ಯಾವುದಕ್ಕೂ ದೂರದ ಊರಿನಿಂದ ಬಂದು ಸೇರಲಿರುವ ಕೋಣಗಳ ಯಜಮಾನರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.
ತಲಪಾಡಿ ಕಂಬಳ, ಪೈವಳಿಕೆ ಕಂಬಳ ಈಗ ನಡೆಯುತ್ತಿಲ್ಲವಾದ್ದರಿಂದ ಕಾಸರಗೋಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳ ಮಾಲೀಕರು ತಮ್ಮ ಅದೃಷ್ಟ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳನ್ನು ಸ್ಪರ್ಧೆಗೆ ತರಲಿದ್ದಾರೆ. ದ.ಕ, ಉಡುಪಿ ಜಿಲ್ಲೆಗಳಿಂದ ಕೋಣಗಳು ಭಾರೀ ಸಂಖ್ಯೆಯಲ್ಲಿ ಜಮಾವಣೆ ಆಗಲಿದೆ. ಇತ್ತೀಚಿನ ದಿನಗಳಲ್ಲಿ ಕಂಬಳದಲ್ಲಿ ಪ್ರತಿಯೊಂದಕ್ಕೂ ಆಧುನಿಕ ತಂತ್ರಜ್ಞಾನ ಬಳಕೆ ಆಗುತ್ತಿರುವುದರಿಂದ ಫಲಿತಾಂಶದಲ್ಲಿ ಸಮಸ್ಯೆ ಉದ್ಭವವಾಗದಿರುವುದರಿಂದ ಸ್ಪರ್ಧೆಯು ಕಠಿಣವಾಗಿಯೂ ಬಹಳ ನಿಖರವಾದ ಫಲಿತಾಂಶ ಸಿಗುತ್ತಿರುವುದರಿಂದ ಕಂಬಳ ಪ್ರೇಮಿಗಳು ನೇರವಾಗಿ ಕರೆಯ ಬಳಿ ಬಂದು ಕಂಬಳದ ಸವಿ ಅನುಭವಿಸಲಿದ್ದಾರೆ ಎಂದರು.
ಮಹಿಳಾ ವಿಭಾಗ ಅದ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ , ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ ,ಕೋಶಾಧಿಕಾರಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಧ್ಯಮ ಸಂಚಾಲಕ ಸತೀಶ್ ಕುಮಾರ್ ಪುಂಡಿಕಾಯಿ ಮೊದಲಾದವರು ಉಪಸ್ಥಿತರಿದ್ದರು.
Mangalore March 25th Lava Kusha jodukere kambala to be held in Ullal under MLA U T Khader banner.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm