ಬ್ರೇಕಿಂಗ್ ನ್ಯೂಸ್
10-03-23 03:05 pm Mangaluru Correspondent ಕರಾವಳಿ
ಮಂಗಳೂರು, ಮಾ.10: ವಕ್ಫ್ ಇಲಾಖೆಯ ಕಾಯ್ದೆ ಏನಿದೆಯೋ ಅದನ್ನು ಉಲ್ಲಂಘಿಸಿ ಉಳ್ಳಾಲ ದರ್ಗಾಕ್ಕೆ ಹೊಸ ಆಡಳಿತ ಸಮಿತಿ ರಚನೆ ಮಾಡಲಾಗಿದೆ. ಇದು ಕಾನೂನು ಬಾಹಿರ ಎಂದು ಉಳ್ಳಾಲ ದರ್ಗಾ ಸಮಿತಿಯ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿದ ಅವರು, ಕಾನೂನು ಬಾಹಿರವಾಗಿ ವಕ್ಫ್ ಇಲಾಖೆಯಿಂದ ಚುನಾವಣೆ ನಡೆಸಲಾಗಿದೆ. ಚುನಾವಣೆ ನಡೆಯದಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ವಿವಾದ ಇತ್ಯರ್ಥ ಆಗುವ ಮೊದಲೇ ಚುನಾವಣೆ ನಡೆಸಿರುವುದು ಅಕ್ಷಮ್ಯ. ನಾವು ಇದನ್ನು ಒಪ್ಪುವುದಿಲ್ಲ. ಕೋರ್ಟಿನಲ್ಲಿ ಈಗಾಗಲೇ ಪ್ರಶ್ನೆ ಮಾಡಿದ್ದೇವೆ. ಹೊಸ ಕಮಿಟಿ ಬರ್ಖಾಸ್ತು ಆಗಲಿದೆ ಎಂದು ಹೇಳಿದ್ದಾರೆ.
ಉಳ್ಳಾಲ ದರ್ಗಾ ಕಚೇರಿಯ ಬೀಗ ಮುರಿದು ಒಳಹೊಕ್ಕಿದ್ದಾರೆ. ಅಲ್ಲಿ ಸಭೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ದೂರು ನೀಡಿದರೂ ಎಫ್ಐಆರ್ ದಾಖಲಿಸಿಲ್ಲ. ಎರಡು ಗುಂಪುಗಳ ಮೇಲಾಟದಿಂದ ದರ್ಗಾದಲ್ಲಿ ಆಡಳಿತ ಹಿಡಿದುಕೊಂಡಿದ್ದಾರೆ. ನಮ್ಮ ಆಡಳಿತ ಸಮಿತಿ ಇಂತಹ ಗುಂಪು, ಸಂಘಟನೆಗಳ ಪ್ರಭಾವಕ್ಕೆ ಒಳಗಾಗದೆ ಸೌಹಾರ್ದಯುತವಾಗಿ ಆಡಳಿತ ನಡೆಸುತ್ತಾ ಬಂದಿದೆ. ಈಗಿನ ಬೆಳವಣಿಗೆಗಳಿಂದ ಸಂಘರ್ಷದ ಸ್ಥಿತಿ ಉಂಟಾಗಿದೆ. ಇದರ ಹಿಂದೆ ವಕ್ಫ್ ರಾಜ್ಯಾಧ್ಯಕ್ಷ ಶಾಫಿ ಸ ಅದಿ ಅವರ ಒತ್ತಡ ಮತ್ತು ಕೆಲವು ಪ್ರಭಾವಿ ವ್ಯಕ್ತಿಗಳ ಷಡ್ಯಂತ್ರ ಇದೆ ಎಂದು ಹೇಳಿದರು.
ಹಿಂದಿನ ಸಮಿತಿಯಲ್ಲಿದ್ದ ಯು.ಕೆ.ಇಲ್ಯಾಸ್, ಆಸಿಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಕೆ.ಎನ್. ಮಹಮ್ಮದ್ ಉಪಸ್ಥಿತರಿದ್ದರು.
ಉಳ್ಳಾಲ ದರ್ಗಾದಲ್ಲಿ ಏಳು ವರ್ಷಗಳ ಸರ್ವಾಧಿಕಾರ ಅಂತ್ಯ ; ನೂತನ ಅಧ್ಯಕ್ಷರಾಗಿ ಬಾವಾ ಗುಲಾಮ್ ಹನೀಫ್ ಆಯ್ಕೆ
Mangalore ullal former Dargah president Abdul Rasheed has raised concerns over the formation of a new management committee for the Ullal Dargah, claiming that it was formed in violation of the Waqf Act
05-04-26 10:45 pm
HK News Staffer
ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಮೂರು...
05-04-26 07:24 pm
ಟೋಲ್ ಬೂತ್ಗಳಲ್ಲಿ ಇನ್ಮುಂದೆ ಸಂಚಾರ ಸರಾಗ ; ದೇಶಾದ್...
04-04-26 07:33 pm
ಪಶ್ಚಿಮ ಏಷ್ಯಾ ಸಂಘರ್ಷ; ಭಾರತದ ರಾಜತಾಂತ್ರಿಕ ನಡೆಯನ್...
03-04-26 04:14 pm
ಬಾಗಲಕೋಟ, ದಾವಣಗೆರೆ ಉಪ ಚುನಾವಣೆ; ಗೆಲುವು ಕಷ್ಟ- ಗು...
03-04-26 03:48 pm
05-04-26 12:37 pm
HK News Staffer
ಇರಾನ್ ಗೆ ಅಮೆರಿಕ ಮತ್ತೆ 48 ಗಂಟೆಗಳ ಗಡುವು ; ಒಂದು...
04-04-26 10:53 pm
ಅಣ್ಣಾಮಲೈ ಹೊರಗಿಟ್ಟು ಬಿಜೆಪಿ ಪಟ್ಟಿ ಬಿಡುಗಡೆ; ತಮಿಳ...
03-04-26 07:52 pm
50 ವರ್ಷಗಳ ಬಳಿಕ ಮಾನವ ಸಹಿತ ಚಂದ್ರಯಾನ; ಅಮೆರಿಕ, ಕೆ...
03-04-26 07:35 am
ಚಿಂತಿಸಬೇಡಿ, ನಿಮ್ಮ ಹಡಗು ಸುರಕ್ಷಿತ; ಹಾರ್ಮುಜ್ ಜಲಸ...
02-04-26 10:24 pm
03-04-26 11:43 am
HK News Staffer
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
ದೂರು ನೀಡಲು ಬಂದ ಮಹಿಳೆಯೊಂದಿಗೆ ಸಂಬಂಧ ಬೆಳೆಸುವುದು...
01-04-26 09:04 pm
ಮುಸ್ಲಿಂ ಮದುವೆಯಲ್ಲಿ ಕೊರಗಜ್ಜ ದೈವದ ಅನುಕರಣೆ ; ಮದು...
31-03-26 10:06 pm
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
05-04-26 11:03 am
HK News Staffer
ನಾಸಿಕ್ ಭೀಕರ ದುರಂತ; ನಿಯಂತ್ರಣ ತಪ್ಪಿ ಬಾವಿಗೆ ಬಿದ್...
04-04-26 05:42 pm
ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ಮಹಿಳೆ...
04-04-26 05:39 pm
ಇನ್ಫೋಸಿಸ್ ಸಿಎಸ್ಆರ್ ಫಂಡ್ ತೆಗೆಸಿಕೊಡುವುದಾಗಿ ವಂಚನ...
04-04-26 04:36 pm
ಮಂಗಳೂರಿನಲ್ಲಿ ಎಪ್ರಿಲ್ 19ರಂದು ಸೀ ಬ್ರೀಜ್ ಮ್ಯಾರಥಾ...
04-04-26 11:32 am