ಬ್ರೇಕಿಂಗ್ ನ್ಯೂಸ್
05-03-23 10:09 pm Mangalore Correspondent ಕರಾವಳಿ
ಮಂಗಳೂರು, ಮಾ.5 : ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಕೃತ್ಯ ತಾನೆ ಮಾಡಿದ್ದು ಎಂದು ಐಸಿಸ್ ಹೇಳಿಕೊಂಡಿದೆ. ಇಸ್ಲಾಮಿಕ್ ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಈ ಬ್ಲಾಸ್ಟ್ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಸರಕಾರ ಇಂತಹ ಪ್ರಯತ್ನಗಳನ್ನು ಸಮರ್ಥವಾಗಿ ಹತ್ತಿಕ್ಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ. ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಮೋದಿ ಪ್ರಧಾನಿ ಆದ ಬಳಿಕ ಈ ಷಡ್ಯಂತ್ರಗಳನ್ನು ಹತ್ತಿಕ್ಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಿ ಎಫ್ ಐ ನಿಷೇಧ ಮಾಡಲಾಗಿದೆ. ಈ ಹಿಂದೆ ಸಿಮಿಯನ್ನು ನಿಷೇಧಿಸಲಾಗಿತ್ತು.
ಆದರೆ ಕಾಂಗ್ರೆಸ್ ಪಕ್ಷ ಇಂತಹ ಘಟನೆಗಳಾದಾಗ ಅವರ ಪರವಾಗಿ ನಿಲ್ಲುತ್ತದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕಾಂಗ್ರೆಸ್ ಬೆಂಬಲಿಸುವ ಪಾರ್ಟಿ. ಘಟನೆ ನಡೆದಾಗ ಗಾಯಗೊಂಡ ಪುರುಷೋತ್ತಮ ಅವರನ್ನು ಅಮಾಯಕ ಅನ್ನಬೇಕಾಗಿತ್ತು. ಆದರೆ ಕಾಂಗ್ರೆಸ್, NIA ಅಧಿಕಾರಿಗಳು ಬಂಧಿಸಿದವರನ್ನು ಅಮಾಯಕರು ಎಂದು ಹೇಳಿತ್ತು. ಇಂದು NIA ಕಾಂಗ್ರೆಸ್ ಗೆ ಉತ್ತರ ನೀಡಿದೆ. ಇದಕ್ಕೆ ಡಿ ಕೆ ಶಿ ಮತ್ತು ಸಿದ್ದರಾಮಯ್ಯ ಏನು ಹೇಳುತ್ತಾರೆ.
ಉಡುಪಿಯಿಂದ NIA ಇತ್ತೀಚೆಗೆ ಒಬ್ಬನನ್ನು ಬಂಧಿಸಿತ್ತು. ಆತ ಕಾಂಗ್ರೆಸ್ ನಾಯಕನೊಂದಿಗೆ ಸಂಬಂಧ ಇರುವುದು ಸಾಬೀತಾಗಿದೆ. ಆದರೆ ಈವರೆಗೂ ಕಾಂಗ್ರೆಸ್ ಆತನನ್ನು ಉಚ್ಚಾಟಿಸಿಲ್ಲ. ಅಂದರೆ ಭಯೋತ್ಪಾದಕರು ಕಾಂಗ್ರೆಸ್ ನಲ್ಲಿ ಇರುವುದು ಸ್ಪಷ್ಟವಾಗಿದೆ. ಹಿಂದೆ ತುಷ್ಟಿಕರಣ ನೀತಿಯಿಂದಾಗಿ ಇಂತಹ ಘಟನೆಗಳು ಹೆಚ್ಚಾಗಿದ್ದವು ಎಂದರು.
ಡಿಕೆ ಶಿವಕುಮಾರ್ ರಾಜ್ಯ ಬಂದ್ ಗೆ ಕೆರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಮೊದಲು ಕಾಂಗ್ರೆಸ್ ಪಾರ್ಟಿ ಕಚೇರಿಗೆ ಬೀಗ ಹಾಕಬೇಕು. ಕಾಂಗ್ರೆಸ್ ನ ಮೇಡಮ್ ಯಾಕೆ ಬೇಲ್ ತಕೊಂಡಿದ್ದಾರೆ? ರಾಹುಲ್ ಗಾಂಧಿ ಯಾವ ವಿಚಾರದಲ್ಲಿ ಬೇಲ್ ತಕೊಂಡಿದ್ದಾರೆ? ವಾದ್ರಾ ಯಾವ ವಿಷಯ ದಲ್ಲಿ ಬೇಲ್ ನಲ್ಲಿ ಹೊರಗಿದ್ದಾರೆ. ಬಂದ್ ಕರೆ ನೀಡಿದವರು ಯಾಕೆ ತಿಹಾರ್ ಜೈಲ್ ಗೆ ಹೋಗಿದ್ದರು. ಪ್ರಾರಂಭದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಇವರ ಕಾಂಗ್ರೆಸ್ ಕಚೇರಿಯಿಂದ ಮಾಡಲಿ. ಕಚೇರಿಗೆ ಬೀಗ ಹಾಕಿ ರಸ್ತೆಗಿಳಿಯಲಿ ಎಂದು ಟಾಂಗ್ ನೀಡಿದರು.
Mangalore cooker blast, ISIS claims responsible, its a pre plan to make india Islamic state slams Naleen Kateel. Four months after the Coimbatore blast and approximately three months after Mangaluru blast, the Islamic State in Khorasan Province (ISKP), through its mouthpiece, "Voice of Khurasan" magazine, has admitted that its terrorists are present in South India and were involved in those two blasts that happened last year.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm