ಬ್ರೇಕಿಂಗ್ ನ್ಯೂಸ್
16-02-23 06:47 pm Mangalore Correspondent ಕರಾವಳಿ
ಪುತ್ತೂರು, ಫೆ.16 : ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರಕಾರ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಮಾತನಾಡದ ಕೇಂದ್ರ ಸಹಕಾರಿ ಸಚಿವ ಅಮಿತ್ ಷಾ, ಕ್ಯಾಂಸ್ಕೋ ಸುವರ್ಣ ಮಹೋತ್ಸವದ ವೇದಿಕೆಯನ್ನು ಬಿಜೆಪಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಕೇಂದ್ರ ಗೃಹ ಸಚಿವರ ಭೇಟಿಯಿಂದ ಪುತ್ತೂರಿಗೆ ಯಾವುದೇ ಉಪಯೋಗವಾಗಿಲ್ಲ. ರೈತ ಸದಸ್ಯರ ಹಣವನ್ನು ಪಕ್ಷದ ಪ್ರಚಾರಕ್ಕೆ ಬಳಸಲು ಕ್ಯಾಂಪ್ಕೋ ಸಂಸ್ಥೆಯನ್ನು ಬಳಸಿಕೊಂಡಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಡಿಕೆಗೆ ಪ್ರಯೋಜನ ಆಗಬಲ್ಲ ಒಂದೂ ಮಾತನ್ನು ಆಡಿಲ್ಲ. ಗುಜರಾತ್ ಹಾಗೂ ಅಡಿಕೆಗಿರುವ ನಂಟಿಗಷ್ಟೆ ಅಡಿಕೆಯ ಉಲ್ಲೇಖ ಮಾಡಿದರು. ಎಲೆ ಚುಕ್ಕಿ ಹಾಗೂ ಹಳದಿ ರೋಗದಿಂದ ಸಂಕಷ್ಟ ಪಡುತ್ತಿರುವ ರೈತನಿಗೆ ಯಾವುದೇ ಸ್ಪಂದನೆ ನೀಡಲಿಲ್ಲ. ಗೃಹ ಸಚಿವರು ಪುತ್ತೂರಿಗೆ ಭೇಟಿ ಕೊಟ್ಟಿದ್ದರಿಂದ ಜನರಿಗೆ ಅಥವಾ ಕ್ಯಾಂಪ್ಕೋ ಅಥವಾ ರೈತರಿಗೆ ಆಗಿರುವ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಷಾ ಉಕ್ಕಿನ ಮನುಷ್ಯನಲ್ಲ, ಸೊಕ್ಕಿನ ಮನುಷ್ಯ
ರಾಜ್ಯ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಅಮಿತ್ ಷಾರನ್ನು ಅವರ ಪಕ್ಷದವರು ಹೇಳುವಂತೆ ಉಕ್ಕಿನ ಮನುಷ್ಯನಲ್ಲ, ಅವರೊಬ್ಬ ಸೊಕ್ಕಿನ ಮನುಷ್ಯ. ಆದ್ದರಿಂದಲೇ ಅವರು ಕ್ಯಾಂಪ್ಕೋ ವೇದಿಕೆಯನ್ನು ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಹಣಿಯಲು ಬಳಸಿಕೊಂಡಿದ್ದಾರೆ. ಇದು ದ.ಕ. ಜಿಲ್ಲೆಯ ರೈತರಿಗೆ ಮಾಡಿದ ಅವಮಾನ ಎಂದು ಹೇಳಿದರು.
ವಾರಣಾಸಿ ಇರುತ್ತಿದ್ದರೆ ಗೆಟ್ ಔಟ್ ಎನ್ನುತ್ತಿದ್ದರು!
ಕ್ಯಾಂಪ್ಕೋ ಪಕ್ಷಾತೀತ ಸಂಸ್ಥೆಯಾಗಿದ್ದು ಎಲ್ಲ ಪಕ್ಷದವರು ಸದಸ್ಯರಿದ್ದಾರೆ, ಪಕ್ಷಾತೀತ ಸಹಕಾರಿ ಸಂಘದ ತತ್ವದಡಿ ಆಡಳಿತ ನಡೆಯುತ್ತದೆ. ಸಹಕಾರಿ ವೇದಿಕೆಯಲ್ಲಿ ಅಮಿತ್ ಷಾಗೆ ಚುನಾವಣಾ ಭಾಷಣ ಮಾಡಲು ಅಧಿಕಾರ ಕೊಟ್ಟವರಾರು? ಕ್ಯಾಂಪ್ಕೋ ಸ್ಥಾಪಕ ವಾರಾಣಾಸಿ ಸುಬ್ರಾಯ ಭಟ್ ಅವರು ಮೊನ್ನೆ ವೇದಿಕೆಯಲ್ಲಿರುತ್ತಿದ್ದರೆ ಶಾರನ್ನು ಗೆಟ್ ಔಟ್ ಎನ್ನುತ್ತಿದ್ದರು. ಆದರೆ ಬಿಜೆಪಿಯ ಚಮಚಾಗಳಂತೆ ವರ್ತಿಸುವ ಈಗಿನ ಅಡಳಿತ ಮಂಡಳಿ ವೇದಿಕೆಯ ದುರುಪಯೋಗಕ್ಕೆ ಮೂಕ ಸಾಕ್ಷಿಯಾಯಿತು ಎಂದರು.
ತರಾತುರಿಯ ಹೆಲಿಪ್ಯಾಡ್ ಗೆ ವರ್ಕ್ ಅರ್ಡರ್ ಎಲ್ಲಿದೆ?
ಶಾ ಭೇಟಿಯಿಂದಾಗಿ ಪುತ್ತೂರಿನ ಮೊಟ್ಟೆತಡ್ಕದಲ್ಲಿ ಶಾಶ್ವತ ಹೆಲಿಪ್ಯಾಡ್ ನಿರ್ಮಾಣವಾಯಿತೆಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ಇದರ ಟೆಂಡರ್ ಕರೆದದ್ದು ಯಾವಾಗ? ವರ್ಕ್ ಆರ್ಡರ್ ಎಲ್ಲಿದೆ? ಸರಕಾರದ ಬೊಕ್ಕಸದ ಹಣವನ್ನು ಯಾವುದೇ ಲಗಾಮಿಲ್ಲದೇ ತಮ್ಮ ಸ್ವಂತ ಕಿಸೆಯ ಹಣ ಎಂಬಂತೆ, ನೀತಿ ನಿಯಮಗಳನ್ನು ಗಾಳಿಗೆ ತೂರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಳಸುತ್ತಿದ್ದಾರೆ ಎಂದವರು ಆರೋಪಿಸದರು.
ಹಿಂದುತ್ವದ ಹೆಸರಲ್ಲಿ ಸಾಯೋರೆಲ್ಲ ಅಣಬೆಗಳೇ !
ಮಳೆ ಬಂದಾಗ ಅಣಬೆಗಳು ಹುಟ್ಟುವಂತೆ ಚುನಾವಣೆ ಬಂದಾಗ ಬ್ಯಾನರ್ ಕಾಣಿಸಿಕೊಳ್ಳುತ್ತವೆ ಎಂಬ ಪುತ್ತೂರು ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಅಮಳ ರಾಮಚಂದ್ರ, ಅಣಬೆಗಳು ಹುಟ್ಟುವುದು ಸತ್ತ ಮರದಲ್ಲಿ. ಜೀವ ಇರುವ ಮರದಲ್ಲಿ ಅಣಬೆ ಹುಟ್ಟುವುದಿಲ್ಲ. ಬಿಜೆಪಿಯಲ್ಲಿ ಅಣಬೆಗಳು ಹುಟ್ಟುತ್ತಿದೆ ಎಂದಾದರೆ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದರ್ಥ. ಬಿಜೆಪಿಯವರು ಯುವಕರ ತಲೆಗೆ ಕೋಮುವಾದದ ವಿಷ ಬಿತ್ತಿ, ಅವರನ್ನು ಬಳಸಿಕೊಂಡು, ತಮ್ಮ ಕಾರ್ಯಸಾಧನೆ ಬಳಿಕ ಎಸೆಯುತ್ತಾರೆ. ಹಿಂದುತ್ವದ ಹೆಸರಿನಲ್ಲಿ ಹಿಂಸೆಯಲ್ಲಿ ತೊಡಗಿಕೊಳ್ಳುವ ಬಿಸಿ ರಕ್ತದ ಹುಡುಗರು ಶಾಸಕರು ಹೇಳಿದಂತೆ ಅಣಬೆಯ ರೀತಿಯೇ ಆಗಿಹೋಗಿದ್ದಾರೆ. ಇಂದು ಹುಟ್ಟಿ ನಾಳೆ ನಾಶವಾಗುವ ಹಿಂಸೆಯ ಹಿಂದುತ್ವದ ಯುವಕರನ್ನು ಬಿಜೆಪಿ ಬಳಸಿ ಎಸೆಯುತ್ತದೆ, ಯುವ ಜನಾಂಗ ದ್ವೇಷ ಮತ್ತು ಹಿಂಸೆಯ ಹಿಂದುತ್ವವನ್ನು ತೊರೆದು ನೈಜ ಹಿಂದುತ್ವವನ್ನು ಅನುಸರಿಸಲಿ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌನೀಸ್ ಮಸ್ಕರೇನಸ್, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಮತ್ತು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು.
CAMPCO stage used for the BJP program in Puttur is inappropriate slams M B Vishwanath.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm