ಬ್ರೇಕಿಂಗ್ ನ್ಯೂಸ್
15-02-23 05:51 pm Mangalore Correspondent ಕರಾವಳಿ
ಮಂಗಳೂರು, ಫೆ.15: ಭೂತಾನ್, ಬರ್ಮಾ ದೇಶದ ಅಡಿಕೆಯಿಂದಾಗಿ ಕರಾವಳಿಯ ಅಡಿಕೆಗೆ ದರ ಇಳಿಕೆಯಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಗ್ಗೆ ಕ್ಯಾಂಪ್ಕೋ, ಮ್ಯಾಮ್ಕೋಸ್, ಅಡಿಕೆ ಮಾರಾಟ ಮಹಾಮಂಡಳಿ ಸತತ ಒತ್ತಡದ ಪರಿಣಾಮವಾಗಿ ಕೇಂದ್ರ ಸರಕಾರ ವಿದೇಶಿ ಅಡಿಕೆ ಆಮದಿನ ಮೇಲೆ ತೆರಿಗೆಯನ್ನು ಹೆಚ್ಚಿಸಿದೆ. ಅಡಿಕೆಯ ಕನಿಷ್ಠ ಆಮದು ಬೆಲೆಯನ್ನು ಈಗ ಇರುವ ಕೆಜಿಗೆ 251 ರೂ.ಗಳಿಂದ 351 ರೂ.ಗಳಿಗೆ ಹೆಚ್ಚಿಸಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರದ ಈ ಕ್ರಮದಿಂದಾಗಿ ವಿದೇಶದಿಂದ ಬರುವ ಕಳಪೆ ಗುಣಮಟ್ಟದ ಅಡಿಕೆಯ ಆಮದಿನ ಮೇಲೆ ಭಾರೀ ಹೊಡೆತ ಬೀಳಲಿದೆ. ಉತ್ತಮ ಗುಣಮಟ್ಟದ ದೇಶಿ ಅಡಿಕೆಗೆ ಬೇಡಿಕೆ ಬರಲಿದೆ ಮತ್ತು ದರದಲ್ಲಿ ಸ್ಥಿರತೆ ಕಾಣಲಿದ್ದು ಅಡಿಕೆ ಮಾರುಕಟ್ಟೆ ಚೇತರಿಕೆಯಾಗಲಿದೆ ಎಂದು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಕ್ಯಾಂಪ್ಕೋ, ಮ್ಯಾಮ್ಕೋಸ್, ಟಿಎಸ್ಎಸ್, ತುಮ್ಕೋಸ್, ಅಡಿಕೆ ಮಾರಾಟ ಮಹಾಮಂಡಳಿ ಮತ್ತು ಸಹಕಾರಿ ರಂಗದ ಹಿರಿಯರಾದ ಮಂಜಪ್ಪ ಹೊಸಬಾಳೆ ಹಾಗೂ ಸಹಕಾರ ಭಾರತಿಯ ರಾಷ್ಟ್ರೀಯ ಮುಖಂಡರಾದ ರಮೇಶ್ ವೈದ್ಯ ಮುಂತಾದ ಸದಸ್ಯರನ್ನೊಳಗೊಂಡ ನಿಯೋಗವು ದೆಹಲಿಗೆ ತೆರಳಿ ಆಮದು ಕನಿಷ್ಠ ಬೆಲೆಯನ್ನು ಹೆಚ್ಚಿಸುವಂತೆ ಕೃಷಿ ಮತ್ತು ವಾಣಿಜ್ಯ ಸಚಿವರಲ್ಲಿ ಮನವಿ ಮಾಡಿತ್ತು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ 5ನೇ ಕೃಷಿ ಯಂತ್ರಮೇಳದಲ್ಲಿ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಬಗ್ಗೆ ಘೋಷಣೆ ಮಾಡಿದ್ದರು. ನಿರೀಕ್ಷೆಯಂತೆ ಕೇಂದ್ರ ಸರಕಾರ ಆಮದು ಅಡಿಕೆಯ ಕನಿಷ್ಠ ಬೆಲೆಯನ್ನು ಹೆಚ್ಚಿಸಿದ್ದು ಕ್ಯಾಂಪ್ಕೋ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ಅಧ್ಯಕ್ಷ ಕೊಡ್ಗಿ ಹೇಳಿದರು.
ಅಡಿಕೆ ಬೆಳೆಯುವ ವ್ಯಾಪ್ತಿ ಹೆಚ್ಚುವುದರಿಂದ ಭವಿಷ್ಯದಲ್ಲಿ ದರ ಇಳಿಕೆಯಾಗಬಹುದೇ ಎಂಬ ಪ್ರಶ್ನೆಗೆ, ಮಲೆನಾಡು, ಬೆಂಗಳೂರು ಸೇರಿ ಆಂಧ್ರದಲ್ಲಿಯೂ ಅಡಿಕೆಯನ್ನು ಬೆಳೆಯುತ್ತಿದ್ದಾರೆ. ಇದರಿಂದ ಅಡಿಕೆ ಬೆಳೆ ಹೆಚ್ಚಿದಂತೆ ಅದರ ಬೆಲೆ ಕುಸಿತವಾಗುವ ಅಪಾಯ ಇದೆ. ಇದಕ್ಕಾಗಿಯೇ ಅಡಿಕೆ ಜೊತೆಗೆ ಉಪ ಬೆಳೆಯನ್ನೂ ಬೆಳೆಸಬೇಕೆಂದು ನಾವು ರೈತರಿಗೆ ಹೇಳುತ್ತಾ ಬಂದಿದ್ದೇವೆ. ಅಡಿಕೆಯನ್ನು ನಂಬಿ ಕುಳಿತುಕೊಳ್ಳುವುದು ಬೇಡ ಎನ್ನುವುದು ನಮ್ಮ ಸಲಹೆ. ಒಂದು ರಾಮಪತ್ರೆ ಮರದಿಂದ ವರ್ಷದಲ್ಲಿ 15 ಸಾವಿರ ಆದಾಯ ಗಳಿಸಬಹುದು. ತೋಟದ ಸುತ್ತಲೂ ಈ ರೀತಿಯ ಮರಗಳನ್ನು ಬೆಳೆಸಿದಲ್ಲಿ ಪರ್ಯಾಯ ಆದಾಯ ಪಡೆಯಬಹುದು ಎಂದರು.
ಅಡಿಕೆ ಕ್ಯಾನ್ಸರ್ ರೋಗ ಗುಣಪಡಿಸುವ ಔಷಧೀಯ ಗುಣ ಹೊಂದಿದೆಯೇ ಎಂಬ ಪ್ರಶ್ನೆಗೆ, ಸುಪ್ರೀಂ ಕೋರ್ಟಿನಲ್ಲಿ ವಿಶ್ವಸಂಸ್ಥೆಯ ಕಡೆಯಿಂದ ಅಡಿಕೆ ಕ್ಯಾನ್ಸರ್ ಕಾರಕ ಎಂದು ದಾವೆ ಹೂಡಲಾಗಿದೆ. ಅದನ್ನು ಪ್ರಶ್ನಿಸಿ ನುರಿತ ವಕೀಲರಿಂದ ಪ್ರತಿವಾದ ಮಂಡಿಸಲಾಗುತ್ತಿದೆ. ಇದೇ ವೇಳೆ, ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಮತ್ತು ಮಂಗಳೂರಿನ ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನಿಂದ ಅಡಿಕೆ ಬಗ್ಗೆ ಸಂಶೋಧನೆ ನಡೆದಿದೆ. ಅದರಲ್ಲಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ. ಕ್ಯಾನ್ಸರ್ ಸೇರಿ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎನ್ನುವ ವಿಚಾರ ಹೊರಬಂದಿದೆ. ಇದನ್ನು ವಿಧಾನಸಭೆಯಲ್ಲಿ ಆರಗ ಜ್ಞಾನೇಂದ್ರ ಮಂಡಿಸಿದ್ದಾರೆ. ನಾವು ಸುಪ್ರೀಂ ಕೋರ್ಟಿಗೂ ಸಲ್ಲಿಕೆ ಮಾಡುತ್ತೇವೆ ಎಂದಿದ್ದಾರೆ.
A Kishore Kumar Kodgi, president and the board of management of CAMPCO Ltd., Mangaluru on behalf of the entire arecanut fraternity is grateful to the union government for having hiked the minimum import price from Rs 251 to Rs351.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
18-05-25 08:23 pm
HK News Desk
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
18-05-25 12:42 pm
Mangalore Correspondent
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
18-05-25 07:45 pm
Mangaluru HK Staff
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm