ಬ್ರೇಕಿಂಗ್ ನ್ಯೂಸ್
09-02-23 04:57 pm Mangalore Correspondent ಕರಾವಳಿ
ಮಂಗಳೂರು, ಫೆ.9: ಫೆ.11ರಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ರೋಡ್ ಶೋ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಪುತ್ತೂರಿನಲ್ಲಿ ಕ್ಯಾಂಪ್ಕೋ ಕಾರ್ಯಕ್ರಮ ಮುಗಿಸಿ ಸಂಜೆ ಮಂಗಳೂರಿಗೆ ಬಂದು ರೋಡ್ ಶೋ ನಡೆಸುವುದೆಂದು ನಿಶ್ಚಯಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರನ್ನು ಸೇರಿಸಿ ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಏರ್ಪೋರ್ಟ್ ನಿಂದ ಕಾವೂರು ಅಥವಾ ಪದವಿನಂಗಡಿ ವರೆಗೆ ರೋಡ್ ಶೋ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪುತ್ತೂರಿನಿಂದ ಮಂಗಳೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದು ತಲುಪುವಾಗಲೇ ಸಂಜೆ ಆರು ಗಂಟೆ ಆಗುವುದರಿಂದ ಆನಂತರ ರೋಡ್ ಶೋ ನಡೆಸಲು ಸೆಕ್ಯುರಿಟಿ ಕ್ಲಿಯರೆನ್ಸ್ ಸಿಕ್ಕಿಲ್ಲ. ಎಸ್ ಪಿಜಿ ಪಡೆ ಭದ್ರತಾ ದೃಷ್ಟಿಯಿಂದ ಅವಕಾಶ ನಿರಾಕರಿಸಿದ್ದು, ಹಾಗಾಗಿ ರೋಡ್ ಶೋ ಕಾರ್ಯಕ್ರಮವನ್ನೇ ರದ್ದುಪಡಿಸಲಾಗಿದೆ.
ಮಂಗಳೂರಿನಲ್ಲಿ ಆರು ಜಿಲ್ಲೆಗಳ ವ್ಯಾಪ್ತಿಯ ವಿಭಾಗ ಮಟ್ಟದ ಪ್ರತಿನಿಧಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪದವಿನಂಗಡಿಯ ಸಭಾಂಗಣದಲ್ಲಿ ಸಭೆ ನಡೆಸುವುದು ಮತ್ತು ಅಲ್ಲಿ ವರೆಗೂ ಏರ್ಪೋರ್ಟ್ ನಿಂದ ಅಮಿತ್ ಷಾರನ್ನು ರೋಡ್ ಶೋದಲ್ಲಿ ಕರೆತರುವುದು ಬಿಜೆಪಿ ಪ್ಲಾನ್ ಆಗಿತ್ತು. ಆದರೆ ಪದವಿನಂಗಡಿಯ ಕೊರಗಜ್ಜನ ಕೋಲ ಅದೇ ದಿನ ಇರುವುದರಿಂದ ಅಲ್ಲಿ ಜನ ಸೇರುವುದು ಮತ್ತು ರಸ್ತೆಯನ್ನು ಪೂರ್ತಿ ಬ್ಲಾಕ್ ಮಾಡಬೇಕೆಂಬ ಎಸ್ ಪಿಜಿ ಬೇಡಿಕೆಗೆ ಬಿಜೆಪಿ ಪ್ರಮುಖರು ಒಪ್ಪಿಗೆ ನೀಡಿಲ್ಲ.
ಆನಂತರ, 150 ಮಂದಿಯ ಪ್ರತಿನಿಧಿಗಳ ಸಮಾವೇಶವನ್ನು ಕೆಂಜಾರಿನ ಶ್ರೀದೇವಿ ಕಾಲೇಜಿನ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಕಾವೂರಿನ ವರೆಗೆ ರೋಡ್ ಶೋ ನಡೆಸುವುದೆಂದು ಬಿಜೆಪಿ ನಾಯಕರ ಒತ್ತಾಸೆಯಿತ್ತು. ಆದರೆ, ಇತ್ತ ಅಮಿತ್ ಷಾ ಮಂಗಳೂರು ಏರ್ಪೋರ್ಟ್ ತಲುಪುವಾಗಲೇ ಸಂಜೆ 6 ಗಂಟೆ ಆಗುತ್ತದೆ ಎನ್ನುವ ಮಾಹಿತಿ ಬಂದಿರುವುದರಿಂದ ಜಿಲ್ಲಾ ಬಿಜೆಪಿ ಕೈಗೊಂಡಿದ್ದ ರೋಡ್ ಶೋ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ಶ್ರೀದೇವಿ ಕಾಲೇಜಿನಲ್ಲಿ ಪ್ರತಿನಿಧಿಗಳ ಸಮಾವೇಶ ಮಾತ್ರ ನಡೆಯಲಿದೆ. ಅಲ್ಲಿ ಮಾಧ್ಯಮಕ್ಕಾಗಲೀ, ಇತರೇ ಸಾರ್ವಜನಿಕರಿಗಾಗಲೀ ಪ್ರವೇಶ ಇಲ್ಲವೆಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಅಮಿತ್ ಷಾ ರೋಡ್ ಶೋ ನಡೆಸುವುದಕ್ಕೆ ಭಾರೀ ಟೀಕೆಯೂ ವ್ಯಕ್ತವಾಗಿತ್ತು. ಶಿರಾಡಿ ಘಾಟಿ ಹೊಂಡ ಬಿದ್ದು ಗಬ್ಬೆದ್ದು ಹೋಗಿರುವುದರಿಂದ ಅಮಿತ್ ಷಾ ಅವರನ್ನು ಆ ದಾರಿಯಲ್ಲೇ ರೋಡ್ ಶೋ ನಡೆಸುವಂತೆ ಕಾಂಗ್ರೆಸ್ ನಾಯಕರು ಸಲಹೆ ಮಾಡಿದ್ದರು. ಟೀಕೆ, ಟಿಪ್ಪಣಿ ನಡುವೆ ಅಮಿತ್ ಷಾ ರೋಡ್ ಶೋ ಕಾರ್ಯಕ್ರಮವೇ ರದ್ದಾಗಿದೆ.
Amit Shah road show in Mangalore cancelled due to security reasons by SPG. Union Minister for Home and Co-operation Amit Shah will be visiting Puttur in Dakshina Kannada district to participate in a co-operative convention on February 11. The convention is being held at Puttur in connection with the golden jubilee celebrations of the central arecanut and cocoa marketing and processing co-operative limited (CAMPCO).
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm