ಬ್ರೇಕಿಂಗ್ ನ್ಯೂಸ್
05-02-23 09:39 pm Mangalore Correspondent ಕರಾವಳಿ
ಮಂಗಳೂರು, ಫೆ.5: ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನಾದ್ರೂ ಲಾಭ ಇದೆಯಾ.. ಅದರಿಂದ ದೇಶದ ಆರ್ಥಿಕತೆಗೆ ನಷ್ಟವೇ ಹೊರತು ಲಾಭ ಇರಲ್ಲ. ಹಾಗಾಗಿ ಮೋದಿ ಸರಕಾರ ಅಂತಹ ಪುಕ್ಕಟೆ ಪ್ರಚಾರಕ್ಕಾಗಿ ಬಜೆಟ್ ಮಾಡಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮಂಗಳೂರಿನಲ್ಲಿ ಬಜೆಟ್ ಕುರಿತ ಸಂವಾದದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಮೋದಿ ಸರಕಾರ 50 ವರ್ಷಗಳ ದೂರಗಾಮಿ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದೆ ಎಂದು ಹೇಳಿದರು. 2008ರಲ್ಲಿ ಯುಪಿಎ ಸರಕಾರ ಮತ್ತೆ ಗೆದ್ದು ಬರುವುದಕ್ಕಾಗಿ ದೇಶದ ಬಜೆಟ್ಟಿನಲ್ಲಿ ಒಟ್ಟೂ ಹಣವನ್ನು ವ್ಯಯಿಸಿ ಒಂದು ಲಕ್ಷ ಕೋಟಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು. ಅದಕ್ಕೆ 2009ರ ಲೋಕಸಭೆ ಚುನಾವಣೆ ಗೆಲ್ಲುವುದೇ ಮುಖ್ಯವಾಗಿತ್ತು. ಅದಕ್ಕಾಗಿ ಪುಕ್ಕಟೆ ಪ್ರಚಾರಕ್ಕೆ ಹೋಗಿತ್ತು. ರೈತರ ಸಾಲ ಮನ್ನಾ ಮಾಡುವುದರಿಂದ ತಾತ್ಕಾಲಿಕವಾಗಿ ರೈತರಿಗಷ್ಟೇ ಉಪಯೋಗ ಆಗಿತ್ತು. ಅದರಿಂದ ದೇಶದ ಆರ್ಥಿಕತೆಗೆ ಯಾವುದೇ ರೀತಿಯ ಉಪಯೋಗ ಆಗಿಲ್ಲ.
ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನಾದ್ರೂ ಲಾಭ ಇದೆಯಾ.. ಒಂದಷ್ಟು ರೈತರಿಗೆ ಒಮ್ಮೆಗೆ ಲಾಭ ಆಗಬಹುದಷ್ಟೇ.. ಮುಂದೆ ಚುನಾವಣೆ ಇದ್ದರೂ ಮೋದಿ ಸರಕಾರ ಅಗ್ಗದ ಪ್ರಚಾರಕ್ಕೆ ಹೋಗಿಲ್ಲ. ಮುಂದಿನ ವರ್ಷ ಚುನಾವಣೆ ಇದ್ದರೂ ದೇಶಕ್ಕೆ ನಷ್ಟ ಆಗುವ ರೀತಿ ನಡೆದುಕೊಂಡಿಲ್ಲ. ಹತ್ತು ಲಕ್ಷ ಕೋಟಿಯಷ್ಟು ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಇಟ್ಟು ಅದರ ಮೂಲಕ 30 ಲಕ್ಷ ಕೋಟಿಯಷ್ಟು ದೇಶದಲ್ಲಿ ಬಂಡವಾಳ ಹೆಚ್ಚಿಸುವ ಗುರಿ ಹೊಂದಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಇಕಾನಮಿಗೂ ಇರುವ ವ್ಯತ್ಯಾಸ.
ಆರ್ ಬಿಐನ ಆರ್ಥಿಕ ತಜ್ಞರ ಪ್ರಕಾರ, ದೇಶದಲ್ಲಿ ಒಂದು ರೂಪಾಯಿ ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆ ಮಾಡಿದರೆ, ಅದರಿಂದ ಮೂರು ರೂಪಾಯಿ ದೇಶಕ್ಕೆ ಲಾಭ ಆಗುವುದಂತೆ. ಹೊಸ ಏರ್ಪೋರ್ಟ್, ಹೆದ್ದಾರಿ, ಆಧುನಿಕ ರಸ್ತೆಯಾದರೆ ಎಷ್ಟೆಲ್ಲ ಅಭಿವೃದ್ಧಿ ಕಾರ್ಯ ಆಗೋದಿಲ್ಲ. ಹೊಸ ರಸ್ತೆಯಾದಲ್ಲೆಲ್ಲೆ ಜಾಗದ ದರ ಹೆಚ್ಚುತ್ತದೆ. ಗೂಡಂಗಡಿ, ಹೊಟೇಲ್ ಹಾಕಿ ಜನರಿಗೆ ವ್ಯಾಪಾರದ ದಾರಿಯಾಗುತ್ತದೆ. ಆಮೂಲಕ ಮೂಲಸೌಕರ್ಯ ಕ್ಷೇತ್ರಕ್ಕೆ ಹೂಡಿಕೆ ಮಾಡಿದರೆ, ಅದರಿಂದ ಎರಡು ಪಟ್ಟು ಲಾಭ ಪರೋಕ್ಷವಾಗಿ ದೇಶದ ಆರ್ಥಿಕತೆ ಮೇಲಾಗುತ್ತದೆ. ಆ ದೃಷ್ಟಿಯಿಂದ ಮೋದಿ ಸರಕಾರ ಬಜೆಟ್ ಮಂಡನೆ ಮಾಡಿದೆ ಎಂದು ಸಮರ್ಥನೆ ಮಾಡಿದ್ದಾರೆ.
#Farmersloan waiving is a national loss says #MPTejaswisurya in #Mangalore pic.twitter.com/JUNc4FrntK
— Headline Karnataka (@hknewsonline) February 5, 2023
"The union government's budget 2022-2023 presented by Finance Minister Nirmala Seetharaman is futuristic for the economic development of the nation for the next 25 years. It is an outline drawn with a vision for the future development of the economy of the country. In the past nine years of Modi's government, the Indian economy has increased in size from being 10th largest to 5th largest economy in the world. The budget will impact the present and future growth of the Indian economy," said MP and National president of BJP Yuva Morcha Tejasvi Surya.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm