ಬಿಸಿ ರೋಡ್ ಪ್ರಿಯಾ ಇಲೆಕ್ಟ್ರಾನಿಕ್ಸ್ ಮಳಿಗೆಯ ಮೇಲಂತಸ್ತಿನಲ್ಲಿ ಬೆಂಕಿ ; ಹೊತ್ತಿ ಉರಿದ ಇಲೆಕ್ಟ್ರಿಕ್ ವಾಹನಗಳು 

02-02-23 11:53 am       Mangalore Correspondent   ಕರಾವಳಿ

ಬಿಸಿ ರೋಡಿನ ಪ್ರಿಯಾ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಸೇರಿದ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬಂಟ್ವಾಳ, ಫೆ.2: ಬಿಸಿ ರೋಡಿನ ಪ್ರಿಯಾ ಇಲೆಕ್ಟ್ರಾನಿಕ್ಸ್ ಅಂಗಡಿಗೆ ಸೇರಿದ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂದು ಬೆಳಗ್ಗೆ ನೋಡ ನೋಡುತ್ತಿದ್ದಂತೆ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗದಲ್ಲಿರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಮೇಲಿನ ಅಂತಸ್ತಿನಲ್ಲಿ ಬೆಂಕಿ ಕಾಣಿಸಿದ್ದು ಧಗ ಧಗನೆ ಹೊತ್ತಿ ಉರಿದಿದೆ. 

ಇಲೆಕ್ಟ್ರಾನಿಕ್ಸ್ ಉಪಕರಣಗಳ ಜೊತೆಗೆ ಕೊಮಾಕಿ ಕಂಪೆನಿಗೆ ಸೇರಿದ ದ್ವಿಚಕ್ರ‌ ವಾಹನಗಳನ್ನೂ ಕೊಠಡಿಯಲ್ಲಿ ದಾಸ್ತಾನು ಇರಿಸಲಾಗಿತ್ತು. ಬ್ಯಾಟರಿ ಚಾಲಿತ ಸ್ಕೂಟರ್ ಗಳಿದ್ದು, ಇದರ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹಚ್ಚಿಕೊಂಡಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ. ಭಾರೀ ಹೊಗೆ ಮತ್ತು ಬೆಂಕಿ ಕಾಣಿಸಿದ್ದು ಅಗ್ನಿಶಾಮಕ ದಳ ಸಿಬಂದಿ‌ ಮತ್ತು ಸ್ಥಳೀಯ ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

Fire erupted, on Thursday February 2 morning, at Priya Electronics showroom that has been functioning in the taluk for many years. The shop is located opposite Annapoorneshwari temple of B C Road and owned by Preetam. The fire was seen on the top floor of the showroom.