ಬ್ರೇಕಿಂಗ್ ನ್ಯೂಸ್
01-02-23 10:05 pm Mangalore Correspondent ಕರಾವಳಿ
ಮಂಗಳೂರು, ಫೆ.1: ಶಾಸಕ ಭರತ್ ಶೆಟ್ಟಿ ತನ್ನ ಅವಧಿಯಲ್ಲಿ 1920 ಕೋಟಿ ಅನುದಾನ ತಂದಿದ್ದಾಗಿ ಬೊಗಳೆ ಬಿಡುತ್ತಾರೆ. ಅವರು ಅನುದಾನ ತಂದಿದ್ದರೆ ಎಲ್ಲಿ ಕೆಲಸ ಆಗಿದೆ ಅನ್ನುವುದನ್ನು ತೋರಿಸಲಿ. ಈ ಹಿಂದೆ ತಾನು ಶಾಸಕನಾಗಿದ್ದಾಗ ತಂದಿದ್ದ ಅನುದಾನದ ಕೆಲಸವನ್ನೇ ಮಾಡಿಸಿಲ್ಲ. ಸುರತ್ಕಲ್ ನಿಂದ ಎಂಆರ್ ಪಿಎಲ್ ಗಣೇಶಪುರಕ್ಕೆ ಸಾಗುವ ರಸ್ತೆಯನ್ನು ಆರು ಪಥಕ್ಕೆ ಮಾಡಿಸಲು 58 ಕೋಟಿ ಅನುದಾನವನ್ನು 2017-18ರಲ್ಲಿ ಬಜೆಟ್ ನಲ್ಲಿ ಬಿಡುಗಡೆ ಮಾಡಿಸಿದ್ದೆ. ಆದರೆ, ಇವರು ಅಧಿಕಾರಕ್ಕೆ ಬಂದು ಆ ರಸ್ತೆಯನ್ನು ಮಾಡುವ ಬದಲು ಅಲ್ಲಿನ ಅನುದಾನವನ್ನೇ ಬೇರೆ ಕಡೆಗೆ ಹಂಚಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮೊಯ್ದೀನ್ ಬಾವ, ಕಾಟಿಪಳ್ಳ ರಸ್ತೆಯಲ್ಲಿ ಎಂಆರ್ ಪಿಎಲ್ ಟ್ಯಾಂಕರಿನಡಿಗೆ ಬಿದ್ದು ಹಲವಾರು ಜನ ಸತ್ತಿದ್ದಾರೆ. ಹಾಗಿದ್ದರೂ, ಆ ರಸ್ತೆಯನ್ನು ಅಗಲಗೊಳಿಸಲು ಇವರಿಂದ ಆಗಿಲ್ಲ. ನಾನು ಬಜೆಟ್ ನಲ್ಲಿ ತಂದಿದ್ದ 58 ಕೋಟಿ ಅನುದಾನವನ್ನೇ ಇವರು ಈಗ ಇಡೀ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದಾರೆ. ಸುರತ್ಕಲ್ ನಿಂದ ಗಣೇಶಪುರದ ದೇವಸ್ಥಾನದ ವರೆಗೆ 18 ಕೋಟಿ ಅನುದಾನ ಇಟ್ಟು ಉಳಿದ 40 ಕೋಟಿ ಮೊತ್ತವನ್ನು ಇಡೀ ಕ್ಷೇತ್ರದಲ್ಲಿ ಸಣ್ಣ ಪುಟ್ಟ ರಸ್ತೆಗಳಿಗೆ ಕೊಟ್ಟು ಈಗ ಗುದ್ದಲಿ ಪೂಜೆ ಮಾಡುತ್ತಿದ್ದಾರೆ. ಜೊತೆಗೆ, ಭರತ್ ಶೆಟ್ಟಿ ಅನುದಾನ ತಂದಿದ್ದಾಗಿ ಪೋಸ್ಟರ್ ಹಾಕುತ್ತಿದ್ದಾರೆ. ಶಾಸಕರಿಗೆ ನಾಚಿಕೆಯಾಗಬೇಕು, 58 ಕೋಟಿಯ ಆರು ಪಥದ ರಸ್ತೆ ಕಾಮಗಾರಿಯನ್ನು ಬದಿಗಿಟ್ಟು ಅಲ್ಲಿನ ಜನರಿಗೆ ಅನ್ಯಾಯ ಮಾಡಿದ್ದಾರೆ, ದೇವಸ್ಥಾನದ ಭಕ್ತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳಿದರು.
ಕುಳಾಯಿಯಲ್ಲಿ ಮೊಗವೀರರಿಗೆ ನೆರವಾಗುವುದಕ್ಕಾಗಿ ಜೆಟ್ಟಿ ನಿರ್ಮಿಸಬೇಕೆಂದು ಆಸ್ಕರ್ ಸಚಿವರಾಗಿದ್ದಾಗ 200 ಕೋಟಿ ಯೋಜನೆ ತರಿಸಿದ್ದೆ. ಆದರೆ ಆನಂತರ ನಿತಿನ್ ಗಡ್ಕರಿಯವರು ಎರಡೆರಡು ಸಾರಿ ಶಿಲಾನ್ಯಾಸ ಮಾಡಿದರೂ, ಯೋಜನೆ ಕೈಗೆತ್ತಿಕೊಳ್ಳಲು ಆಗಿಲ್ಲ. ಅಲ್ಲಿ ಈವತ್ತಿನ ವರೆಗೂ ಒಂದು ಕಲ್ಲನ್ನು ಎತ್ತಿ ಇಡುವುದಕ್ಕೆ ಶಾಸಕರಿಂದ ಆಗಿಲ್ಲ. ಮೀನುಗಾರ ಸಮುದಾಯಕ್ಕೆ ದ್ರೋಹ ಮಾಡಿದ್ದಾರೆ.
ಸುರತ್ಕಲ್ನಲ್ಲಿ ಸುಂದರ ಮಾರುಕಟ್ಟೆಗೆ ನಿರ್ಮಿಸಲು ಸಿದ್ದರಾಮಯ್ಯ ಸರ್ಕಾರ ಇದ್ದಾಗ 162 ಕೋಟಿ ಮೊತ್ತದ ಅನುದಾನ ಮಂಜೂರಾಗಿ, ಆರಂಭದಲ್ಲಿ 61 ಕೋಟಿ ಬಿಡುಗಡೆಯಾಗಿತ್ತು. 14 ಕೋಟಿ ಮೊತ್ತದ ಕಾಮಗಾರಿಯೂ ನಡೆದಿತ್ತು. ಆನಂತರ ಚುನಾವಣೆ ಬಂದು ಹೊಸ ಶಾಸಕರು ಬಂದರೂ, ಮಾರುಕಟ್ಟೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಈಗ ಮತ್ತೆ 21 ಕೋಟಿ ಹೆಚ್ಚುವರಿ ಸೇರಿಸಿ 81 ಕೋಟಿ ಬೇಕೆಂದು ಯೋಜನೆ ಗಾತ್ರ ದೊಡ್ಡದು ಮಾಡಿದ್ದಾರೆ. ಇದರಿಂದ 35 ಕೋಟಿ ರೂ. ಜನರ ದುಡ್ಡು ಪೋಲಾಗುತ್ತಿದ್ದು, ಇದು ಶಾಸಕರ ವೈಫಲ್ಯಕ್ಕೆ ಸಾಕ್ಷಿ ಎಂದು ಹೇಳಿದರು.
ನಿಮ್ಮ ಸೀಟು ಹೋಯ್ತು ಎಂದಿದ್ದ ನಳಿನ್
ಕಳೆದ ಬಾರಿ ದೀಪಕ್ ರಾವ್ ಕೊಲೆಯಾದಾಗ ಸಂಸದ ನಳಿನ್ ಮತ್ತು ನಾನು ಒಟ್ಟಿಗೆ ಚಹಾ ಕುಡಿಯುತ್ತಿದ್ದೆವು. ನಿಮ್ಮ ಕ್ಷೇತ್ರದಲ್ಲಿ ಕೊಲೆಯಾಗಿದೆ, ನಿಮ್ಮ ಸೀಟು ಹೋಯ್ತು ಅಂತ ನಳಿನ್ ಹೇಳಿದರು. ಕೂಡಲೇ ನಾನು ದೀಪಕ್ ಮನೆಗೆ ಹೋಗಿದ್ದೆ, 5 ಲಕ್ಷ ಪರಿಹಾರವನ್ನೂ ರಾಜ್ಯ ಸರಕಾರದಿಂದ ಕೊಡಿಸಿದ್ದೆ. ಗೃಹ ಸಚಿವರನ್ನು ಮನೆಗೆ ಕರೆದೊಯ್ದು ಪರಿಹಾರ ಕೊಡಿಸುವ ಕೆಲಸ ಮಾಡಿದ್ದೆ. ಆದರೆ ಭರತ್ ಶೆಟ್ಟಿ ಮಾಡಿದ್ದೇನು, ಚುನಾವಣೆ ಕಾಲದಲ್ಲಿ ದೀಪಕ್ ರಾವ್ ತಾಯಿಯನ್ನು ಜೊತೆಗೆ ಕರೆದೊಯ್ದು ತನ್ನ ಮಗನನ್ನು ಮೊಯ್ದೀನ್ ಬಾವ ಕೊಲ್ಲಿಸಿದ್ದಾಗಿ ಅಪಪ್ರಚಾರ ಮಾಡಿಸಿದರು. ಇವರು ಹಿಂದುತ್ವದ ಹೆಸರಲ್ಲಿ ಅನೈತಿಕವಾಗಿ ಗೆದ್ದು ಶಾಸಕರಾಗಿದ್ದಾರೆ. ಈಗ ಫಾಜಿಲ್ ಗೆ ಪರಿಹಾರ ಕೊಡಬೇಕಿತ್ತು ಎನ್ನುತ್ತಿದ್ದಾರೆ. ಶಾಸಕರಾಗಿ ಆ ಮನೆಗೆ ಭೇಟಿ ಕೊಟ್ಟಿದ್ದಾರೆಯೇ ಎಂದು ಕೇಳಿದರು.
ಸುರತ್ಕಲ್ ನಲ್ಲಿ ಆರ್ ಟಿಓ ತರುವುದು ಫೈನಲ್ ಆಗಿತ್ತು. ನಂಬರ್ ಕೂಡ ಆಗಿತ್ತು. ಅದು ಈಗ ಎಲ್ಲಿ ಹೋಗಿದೆ ಅನ್ನುವುದೇ ಇಲ್ಲ. ಹೊಸಬೆಟ್ಟುವಿನಲ್ಲಿ ಪಾರ್ಕ್ ಮಾಡುವುದಿತ್ತು. 700 ಮನೆಗಳ ಸಂಕೀರ್ಣ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿತ್ತು. ನಾನು ಇರುತ್ತಿದ್ದರೆ, ಮಂಗಳೂರಿನ ನಂತರದ ದೊಡ್ಡ ನಗರ ಸುರತ್ಕಲ್ ಚಿತ್ರಣ ಬದಲಾಗುತ್ತಿತ್ತು. ಶಾಸಕ ಭರತ್ ಶೆಟ್ಟಿ ಯಾವುದೇ ಕಾಮಗಾರಿ ಮಾಡಿಸಿದ್ದರೆ, ಅದನ್ನು ಸಾಕ್ಷ್ಯ ಸಹಿತ ತೋರಿಸಲಿ. ನನ್ನ ಅವಧಿಯಲ್ಲಿ 2018 ಕೋಟಿ ಅನುದಾನ ತಂದಿದ್ದೇನೆ, ಈ ಬಗ್ಗೆ ಆರ್ಟಿಐ ಹಾಕಿದರೂ ದಾಖಲೆ ಇದೆ ಎಂದರು.
ನಿಮ್ಮ ಕ್ಷೇತ್ರದಲ್ಲಿ ಇನಾಯತ್ ಆಲಿ ಸ್ಪರ್ಧೆ ಒಡ್ಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಇನಾಯತ್ ಆಲಿ ಮಾತ್ರವಲ್ಲ, ಟಿಕೆಟ್ ಬಯಸಿ 11 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ. ಕೆಪಿಸಿಸಿ ಮತ್ತು ಹೈಕಮಾಂಡ್ ತಮ್ಮದೇ ಸರ್ವೆ ನಡೆಸಿದ್ದಾರೆ. ಅದರ ಪ್ರಕಾರ ಟಿಕೆಟ್ ನೀಡಲಿದ್ದಾರೆ. ನನಗೆ ಸಿಗುತ್ತೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Former MLA Mohiuddin Bawa slammed sitting MLA Dr Y Bharath Shetty and alleged that the MLA is misleading the people of the constituency by spreading lies and promoting all development works done during the previous tenure. He was speaking in a press meet at the district Congress office here on Wednesday, February 1. He said, "When I was the MLA in the year 2017-18, the Congress government allocated Rs 58 crore for a six-lane road from Surathkal junction to the temple in Ganeshpura. Even the foundation stone for the commencement of work was done.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm