ಬ್ರೇಕಿಂಗ್ ನ್ಯೂಸ್
10-01-23 12:53 pm Mangalore Correspondent ಕರಾವಳಿ
ಮಂಗಳೂರು, ಜ.10 : ಶಾಲೆಗೆ ಹೊರಟಿದ್ದ 14 ವರ್ಷದ ವಿದ್ಯಾರ್ಥಿ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಕಾಟಿಪಳ್ಳದಲ್ಲಿ ನಡೆದಿರುವುದು ಸಾರ್ವಜನಿಕರಲ್ಲಿ ಭಯ ಆವರಿಸುವಂತೆ ಮಾಡಿದೆ. ಹದಿ ಹರೆಯದ ಮಕ್ಕಳು ಇತ್ತೀಚಿನ ದಿನಗಳಲ್ಲಿ ಹಠಾತ್ ಕುಸಿದು ಸಾವುಗೀಡಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು ಜನರು ಕೊರೊನಾ ವ್ಯಾಕ್ಸಿನ್ ಅಡ್ಡ ಪರಿಣಾಮವೇ ಎನ್ನುವ ಬಗ್ಗೆ ಶಂಕೆ ವ್ಯಕ್ತಪಡಿಸ ತೊಡಗಿದ್ದಾರೆ.
ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಅಬ್ದುಲ್ ರೆಹ್ಮಾನ್ ಎಂಬವರ ಪುತ್ರ, ಎಂಟನೇ ಕ್ಲಾಸ್ ಓದುತ್ತಿದ್ದ ಮೊಹಮ್ಮದ್ ಹಸೀಮ್ (14) ಮೃತ ಬಾಲಕ. ಸೋಮವಾರ ಬೆಳಗ್ಗೆ ಶಾಲೆಗೆ ಹೊರಡಲು ಸಿದ್ದನಾಗಿದ್ದ ಹಸೀಮ್ಗೆ ಏಕಾಏಕಿ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದು, ಮನೆಮಂದಿ ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಮನೆಯವರು ಶಾಕ್ ಆಗಿದ್ದಾರೆ. ಆದರೂ ಬದುಕುಳಿಯುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಅದಾಗಲೇ ಬಾಲಕ ಕೊನೆಯುಸಿರೆಳೆದಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ, ಮೃತ ಬಾಲಕನ ಪಾರ್ಥಿವ ಶರೀರವನ್ನು ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆಗೆ ನಡೆಸದೆ ಬಿಟ್ಟುಕೊಡಲು ಒಪ್ಪಲಿಲ್ಲ. ಈ ಬಗ್ಗೆ ಗೊಂದಲ ಉಂಟಾದ ಕಾರಣ ಮಾಜಿ ಶಾಸಕ ಮೊಯ್ದೀನ್ ಬಾವಾ ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸಿದ್ದು ಶವ ಕುಟುಂಬಕ್ಕೆ ಬಿಟ್ಟುಕೊಡುವ ವ್ಯವಸ್ಥೆ ಮಾಡಿದ್ದರು. ಕೊಡಗಿನಲ್ಲಿ ಎರಡು ದಿನಗಳ ಹಿಂದೆ 15 ವರ್ಷದ ಹುಡುಗ ಇದೇ ರೀತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿತ್ತು. ವಿಟ್ಲ, ಸುಳ್ಯ, ಪುತ್ತೂರು, ಬಂಟ್ವಾಳ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ವರ್ಷದಲ್ಲಿ 20ಕ್ಕೂ ಹೆಚ್ಚು ಮಕ್ಕಳು ದಿಢೀರ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗಾಗಿ ಹಿಂದೆ ಇಲ್ಲದ ಈ ರೀತಿಯ ಘಟನೆಗಳು ಈಗ ಒಮ್ಮಿಂದೊಮ್ಮೆಲೇ ಮರುಕಳಿಸುತ್ತಿರುವುದು ಜನರಲ್ಲಿ ಭೀತಿ ಆವರಿಸುವಂತೆ ಮಾಡಿದೆ.
ವೈದ್ಯರ ಜವಾಬ್ದಾರಿ, ಅಧ್ಯಯನ ಆಗಬೇಕಾಗಿದೆ ; ಡಾ.ಕಕ್ಕಿಲ್ಲಾಯ
ಈ ರೀತಿಯ ಬೆಳವಣಿಗೆ ಬಗ್ಗೆ ಮಂಗಳೂರಿನ ಖ್ಯಾತ ವೈದ್ಯ ಶ್ರೀನಿವಾಸ ಕಕ್ಕಿಲ್ಲಾಯ ಅವರ ಬಳಿ ಕೇಳಿದಾಗ, ಆಘಾತಕಾರಿ ಮಾಹಿತಿಗಳನ್ನು ನೀಡಿದ್ದಾರೆ. ಭಾರತ ಹೊರತುಪಡಿಸಿ ಉಳಿದ ಯಾವುದೇ ರಾಷ್ಟ್ರಗಳಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡಿಲ್ಲ. ಆದರೆ ಕೊರೊನಾ ಲಸಿಕೆ ನೀಡಿರುವುದು ಎಲ್ಲ ಕಡೆಯೂ ಒಂದೇ ರೀತಿಯದ್ದು. ಹೃದಯಾಘಾತದ ಹೆಚ್ಚಳ ಈಗ ಯುಕೆ, ಅಮೆರಿಕದಲ್ಲೂ ಆಗ್ತಿದೆ. ಡೆನ್ಮಾರ್ಕ್, ಇಟಲಿಯಂತಹ ದೇಶಗಳು ಲಸಿಕೆ ಬಗ್ಗೆ ಶಂಕೆ ವ್ಯಕ್ತವಾದ ಕೂಡಲೇ 2021ರ ಆರಂಭದಲ್ಲಿಯೇ ಲಸಿಕೆ ನೀಡುವುದನ್ನು ನಿಲ್ಲಿಸಿದ್ದವು. ಅಲ್ಲಿನ ವೈದ್ಯರು ಲಸಿಕೆ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದಾರೆ. ಅಮೆರಿಕದಲ್ಲಿಯೂ ಹೃದಯಾಘಾತ ಹೆಚ್ಚಳದ ಬಗ್ಗೆ ಭಾರೀ ಕಳವಳ ಉಂಟಾಗಿದ್ದು ವೈದ್ಯರು ಪ್ರಶ್ನೆ ಮಾಡುತ್ತಿದ್ದಾರೆ.
ಈಗ ಒಂದೂವರೆ ವರ್ಷದಲ್ಲಿ ಒಮ್ಮಿಂದೊಮ್ಮೆಲೇ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹೃದಯಾಘಾತ ಆಗ್ತಿರೋದನ್ನು ನಾವು ನೋಡುತ್ತಿದ್ದೇವೆ. ಇದಕ್ಕೇನು ಕಾರಣ ಎಂದು ಹೇಳುವುದು ವೈದ್ಯರ ಜವಾಬ್ದಾರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಳೆದ ಒಂದೂವರೆ ವರ್ಷದಲ್ಲಿ ಸಣ್ಣ ವಯಸ್ಸಿನ ಮಕ್ಕಳು ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಇಲ್ಲಿ ಆ ಮಕ್ಕಳಿಗೆ ಹೃದಯ ಸಂಬಂಧೀ ಸಮಸ್ಯೆ ಇತ್ತೇ, ಅವರಿಗೆ ಕೊರೊನಾ ಲಸಿಕೆ ನೀಡಲಾಗಿತ್ತೇ ಎಂಬ ಬಗ್ಗೆ ಅಧ್ಯಯನ ಆಗಬೇಕಾಗಿದೆ. ಕಾಟಿಪಳ್ಳದ ಹುಡುಗನ ಸಾವಿನ ಬಗ್ಗೆ ಗೊತ್ತಾಗಿದೆ. ಆತನಿಗೆ ಪೋಸ್ಟ್ ಮಾರ್ಟಂ ಆಗಿಲ್ಲ ಎಂಬುದನ್ನು ಅಲ್ಲಿನವರು ಹೇಳುತ್ತಿದ್ದಾರೆ. ಇಲ್ಲಿ ಪೋಸ್ಟ್ ಮಾರ್ಟಂ ಆಗಿದ್ದಲ್ಲಿ ಯಾವ ರೀತಿಯ ಸ್ತಂಭನ ಎನ್ನುವುದನ್ನು ತಿಳಿಯಬಹುದಿತ್ತು. ಯಾವುದೇ ಹೃದಯದ ಸಮಸ್ಯೆ ಹಿನ್ನೆಲೆ ಇಲ್ಲದ ಮಕ್ಕಳಿಗೆ ದಿಢೀರ್ ಆಗಿ ಅಟ್ಯಾಕ್ ಆಗಲ್ಲ. ಅದು ರಕ್ತನಾಳ ಒಡೆದು ಹಾರ್ಟ್ ಅಟ್ಯಾಕ್ ಆಗಿದ್ದೇ ಅಥವಾ ಹಿಂದೆಯೇ ಸಮಸ್ಯೆ ಇತ್ತು. ಅದು ತಿಳಿಯದೆ ಈಗ ಅಟ್ಯಾಕ್ ಆಗಿದೆಯೇ ಎನ್ನುವುದೂ ಪೋಸ್ಟ್ ಮಾರ್ಟಂ ವರದಿಯಲ್ಲಿ ತಿಳಿಯಬಹುದಿತ್ತು. ಈಗ ಏನು ಹೇಳೋದು ಅಂದ್ರೆ, ಒಂದೂವರೆ ವರ್ಷದಲ್ಲಿ ದಿಢೀರ್ ಆಗಿ ಮಕ್ಕಳು ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ ಘಟನೆಗಳ ಬಗ್ಗೆ ಸರಕಾರದಿಂದಲೇ ಅಧ್ಯಯನ ಆಗಬೇಕಾಗಿದೆ. ಇದನ್ನು ಮುಚ್ಚಿಡುವುದರಲ್ಲಿ ಯಾವುದೇ ಸಾಧನೆ ಮಾಡಲಾಗದು. ಅಲ್ಲದೆ, ಈ ರೀತಿಯ ಅಡ್ಡ ಪರಿಣಾಮ ಇದೆಯೆಂದಾದ್ರೆ ಅದಕ್ಕೇನು ಪರಿಹಾರ ಎನ್ನುವುದನ್ನು ಜನರಿಗೆ ತಿಳಿಸಬೇಕಾಗಿದೆ. ಅದರಲ್ಲೂ ಪೀರಿಯಡ್ ಆಗುವ ಹೆಣ್ಣುಮಕ್ಕಳಲ್ಲಿ ಹೃದಯಾಘಾತ ಸಾಧ್ಯತೆ ತೀರಾ ಕಡಿಮೆ. ಆದರೆ ಹೈಸ್ಕೂಲ್ ಹೆಣ್ಮಕ್ಕಳು ಕೂಡ ಈಗ ಕುಸಿದು ಬಿದ್ದು ಸಾಯುತ್ತಿರುವುದು ಆತಂಕ ಮೂಡಿಸಿದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕಳವಳ ವ್ಯಕ್ತಪಡಿಸಿದ್ದಾರೆ.
Mangalore 17 year old dies of heart attack while getting ready for school in Katipalla Surathkal, fear of the covid vaccine. Mohammed Hasim (17), a resident of Krishnapur, seventh block, is the boy who breathed his last. Hasim got ready to school on Monday January 9 morning. He suddenly collapsed due to head reeling sensation. Though family members rushed him to the nearby hospital, the doctor declared him dead. However, the family members took him to private hospital at Mukka with the hope of Hasim recovering. But unfortunately, Hasim had gone forever.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm