ಬ್ರೇಕಿಂಗ್ ನ್ಯೂಸ್
20-12-22 09:18 pm Mangalore Correspondent ಕರಾವಳಿ
ಮಂಗಳೂರು, ಡಿ.20: ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿದ್ದ ಅಮಾಯಕ ಆಟೋ ಚಾಲಕ ಪುರುಷೋತ್ತಮ ಪೂಜಾರಿ(55) ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ. ಆದರೆ ಆಸ್ಪತ್ರೆ ವೆಚ್ಚ ಭರಿಸುತ್ತೇವೆಂದು ಹೇಳಿಕೆ ನೀಡಿ ಪ್ರಚಾರ ಪಡೆದಿದ್ದ ರಾಜಕಾರಣಿಗಳು ಅವರಿಂದ ದೂರ ಸರಿದಿದ್ದಾರೆ. ಜಿಲ್ಲಾಡಳಿತವೂ ಕನಿಷ್ಠ ಚಿಕಿತ್ಸೆಯ ವೆಚ್ಚ ಭರಿಸುವುದಕ್ಕೂ ಮುಂದಾಗಿಲ್ಲ.
ಕಳೆದ ನ.19ರಂದು ಕಂಕನಾಡಿಯ ನಾಗುರಿಯಲ್ಲಿ ಆಟೋದಲ್ಲಿ ತೆರಳುತ್ತಿದ್ದಾಗಲೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಅದೃಷ್ಟವಶಾತ್ ದೊಡ್ಡ ಮಟ್ಟದ ಸ್ಫೋಟ ಆಗದೇ ಇದ್ದುದರಿಂದ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಮತ್ತು ಕುಕ್ಕರ್ ಹಿಡಿದುಕೊಂಡಿದ್ದ ಮೊಹಮ್ಮದ್ ಶಾರೀಕ್ ಅರೆಬರೆ ಸುಟ್ಟ ಗಾಯಗೊಂಡಿದ್ದರು. ಪುರುಷೋತ್ತಮ್ ಅವರ ಮುಖ, ತಲೆಯ ಭಾಗ ಕರಟಿ ಹೋಗಿದ್ದರಿಂದ ತೀವ್ರ ಆಘಾತಕ್ಕೊಳಗಾಗಿದ್ದರು. ಯಾಕಂದ್ರೆ, ಆ ಘಟನೆಯ ಬಗ್ಗೆ ಏನೊಂದೂ ತಿಳಿಯದ ಅಮಾಯಕರಾಗಿದ್ದರು ಆಟೋ ಚಾಲಕ. ಘಟನೆ ನಡೆದ ಬೆನ್ನಲ್ಲೇ ಆಸ್ಪತ್ರೆಗೆ ಭೇಟಿ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ಪುರುಷೋತ್ತಮ ಪೂಜಾರಿಯವರ ಆಸ್ಪತ್ರೆ ಖರ್ಚನ್ನು ಭರಿಸುವುದಾಗಿ ಹೇಳಿದ್ದರು. ಅಲ್ಲದೆ, ಜಿಲ್ಲಾಡಳಿತವೇ ಎಲ್ಲ ರೀತಿಯ ಉತ್ತಮ ಚಿಕಿತ್ಸೆಯನ್ನು ನೀಡಲಿದೆ ಎಂದಿದ್ದರು.

ಆದರೆ ಘಟನೆ ನಡೆದು ಒಂದು ತಿಂಗಳಾಗುತ್ತಾ ಬಂದಿದ್ದು, ರಾಜಕಾರಣಿಗಳು ಇಡೀ ಘಟನೆಯನ್ನೇ ಮರೆತುಬಿಟ್ಟಿದ್ದಾರೆ. ಈ ನಡುವೆ, ಸುಟ್ಟ ಗಾಯಗೊಂಡಿದ್ದ ಶಂಕಿತ ಉಗ್ರ ಮೊಹಮ್ಮದ್ ಶಾರೀಕ್ ನನ್ನು ಎನ್ಐಎ ಅಧಿಕಾರಿಗಳು ಮಂಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡಿದ್ದು, ಅಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪುರುಷೋತ್ತಮ ಪೂಜಾರಿ ಗತಿಯಿಲ್ಲದೆ ಆಸ್ಪತ್ರೆಯಲ್ಲಿ ಮಲಗುವ ಸ್ಥಿತಿಯಾಗಿದೆ. ಸದ್ಯಕ್ಕೆ, ಅವರ ಮಗಳು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಇಎಸ್ಐ ಸೌಲಭ್ಯದಿಂದ ಚಿಕಿತ್ಸೆ ನಡೆಯುತ್ತಿದೆ ಎನ್ನುವ ಮಾಹಿತಿ ಕುಟುಂಬಸ್ಥರಿಂದ ಲಭಿಸಿದೆ.

ಪುರುಷೋತ್ತಮ ಪೂಜಾರಿ ತೀರಾ ಬಡವರಾಗಿದ್ದು, ಪಂಪ್ವೆಲ್ ಬಳಿಯ ಉಜ್ಜೋಡಿಯಲ್ಲಿ ಮನೆ ಹೊಂದಿದ್ದಾರೆ. ಪಿತ್ರಾರ್ಜಿತ ಮನೆಯಲ್ಲಿ ಎರಡು ಸೋದರ ಕುಟುಂಬಗಳು ಪ್ರತ್ಯೇಕ ವಾಸವಿದ್ದು, ಮನೆಯ ಹಂಚು ಗೆದ್ದಲು ಹಿಡಿದು ಬೀಳುವ ಸ್ಥಿತಿಯಲ್ಲಿದೆ. ಆಟೋ ಚಾಲಕರಾಗಿಯೇ ಮನೆಯನ್ನು ನಿರ್ವಹಿಸುತ್ತಿದ್ದ ಪುರುಷೋತ್ತಮ ಪೂಜಾರಿಯವರಿಗೆ ಇಬ್ಬರು ಹೆಣ್ಮಕ್ಕಳು. ದೊಡ್ಡ ಮಗಳು ಬಿಕಾಂ ಮುಗಿಸಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದರೆ, ಕಿರಿಯ ಮಗಳು ಬಿಕಾಂ ಅಂತಿಮ ಪದವಿ ಓದುತ್ತಿದ್ದಾಳೆ. ಸ್ಫೋಟ ಘಟನೆ ನಡೆಯುವ ಮೊದಲೇ ಹಿರಿಯ ಮಗಳಿಗೆ ಮದುವೆ ನಿಶ್ಚಯ ಆಗಿತ್ತು. ಮೇ ತಿಂಗಳಲ್ಲಿ ಮದುವೆ ಇರುವುದರಿಂದ ಇಲ್ಲಿನ ಸಣ್ಣ ಕೆಲಸ ಬಿಟ್ಟು ಗಂಡನೊಂದಿಗೆ ಸೆಟ್ಲ್ ಆಗುವುದಕ್ಕೆ ತಯಾರಿ ನಡೆಸಿದ್ದರು. ಆದರೆ ಅಷ್ಟರಲ್ಲೇ ವಿಧಿಯಾಟ ಮೆರೆದಿದ್ದು, ಪುರುಷೋತ್ತಮ ಪೂಜಾರಿ ಆಸ್ಪತ್ರೆ ಸೇರಿದ್ದಾರೆ. ಮದುವೆ ಖರ್ಚಿನ ಚಿಂತೆಯಲ್ಲಿದ್ದ ಪುರುಷೋತ್ತಮ ಪೂಜಾರಿ ರಾತ್ರಿ- ಹಗಲು ಆಟೋ ಓಡಿಸಿ ದುಡಿಯುತ್ತಿದ್ದರು. ಈಗ ಆಸ್ಪತ್ರೆ ಸೇರಿರುವುದರಿಂದ ಮುಂದೇನು ಅನ್ನುವ ಚಿಂತೆಯಲ್ಲಿದ್ದಾರೆ.

ಜಿಲ್ಲಾಡಳಿತ ತಮ್ಮ ಕೈಬಿಟ್ಟಿರುವುದು ಕುಟುಂಬಕ್ಕೂ ನೋವಿದೆ. ಭಯೋತ್ಪಾದಕ ಕೃತ್ಯ ಆಗಿರುವುದರಿಂದ ಅದಕ್ಕೆ ತಕ್ಕ ಪರಿಹಾರ ಸಿಗಲಿದೆ ಎಂದು ಮಂಗಳೂರಿಗೆ ಬಂದಿದ್ದ ಡಿಜಿಪಿ ಪ್ರವೀಣ್ ಸೂದ್ ಹೇಳಿದ್ದರು. ಆ ಪರಿಹಾರದ ಹಣ ಯಾವಾಗ ಸಿಗುತ್ತೋ ಗೊತ್ತಿಲ್ಲ. ಆ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಸುವುದಕ್ಕೂ ಪೊಲೀಸರಾಗಲೀ, ಜಿಲ್ಲಾಡಳಿತದ ಅಧಿಕಾರಿಗಳಾಗಲೀ ಬಂದಿಲ್ಲ ಎನ್ನುತ್ತಾರೆ, ಕುಟುಂಬಸ್ಥರು. ಇತ್ತ ಚಿಕಿತ್ಸೆ ಆಗುತ್ತಿದ್ದರೂ, ಸರಕಾರದಿಂದ ವೈದ್ಯಕೀಯ ಚಿಕಿತ್ಸೆ ಭರಿಸುತ್ತೇವೆ ಎಂದಿದ್ದವರ ಮಾತೇ ಸುಳ್ಳಾಗಿದೆ. ಹೀಗಾಗಿ ತಾನು ಮಾಡದ ತಪ್ಪಿಗೆ ಆಸ್ಪತ್ರೆ ಸೇರಿರುವ ಪುರುಷೋತ್ತಮ ಪೂಜಾರಿ ಆತಂಕದಲ್ಲಿದ್ದಾರೆ. ಗೃಹ ಸಚಿವರು ತಮ್ಮ ವೈಯಕ್ತಿಕ ನೆಲೆಯಲ್ಲಿ 50 ಸಾವಿರ, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ 25 ಸಾವಿರ ನೀಡಿದ್ದಾರೆ. ಅದು ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಕ್ಕಿಲ್ಲ.
ಇತ್ತ ಮದುವೆಗೆ ಸಿದ್ಧತೆ ಆಗಬೇಕಿದ್ದರಿಂದ ಮನೆಮಂದಿ ಆತಂಕದಲ್ಲಿದ್ದಾರೆ. ಹೀಗಾಗಿ ಮನೆಗೆ ಭೇಟಿ ನೀಡಿದ ಗುರು ಬೆಳದಿಂಗಳು ಟ್ರಸ್ಟ್ ಅಧ್ಯಕ್ಷ ಮತ್ತು ಕುದ್ರೋಳಿ ದೇವಸ್ಥಾನದ ಟ್ರಸ್ಟಿ ಪದ್ಮರಾಜ್, ಮನೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಪುರುಷೋತ್ತಮ ಪೂಜಾರಿ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ಶಾಸಕರಾಗಲೀ, ಸಚಿವರಾಗಲೀ ಬಡ ಕುಟುಂಬದ ನೋವಿಗೆ ಕಿವಿಯಾಗದೇ ಇರುವುದನ್ನು ಟೀಕಿಸಿದ್ದಾರೆ.
Mangalore Auto Blast case, auto driver gets no medical compensation even after a month, family slams govt. During Home Ministers visit the Bjp party had promised of all medical and financial help but till date no such help has been made says family of Purshottam Pujari to Headline Karnataka.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm