ಬ್ರೇಕಿಂಗ್ ನ್ಯೂಸ್
15-12-22 10:46 pm Mangalore Correspondent ಕರಾವಳಿ
ಮಂಗಳೂರು, ಡಿ.15: ಪಚ್ಚನಾಡಿ ಗ್ರಾಮದ ಕಾರ್ಮಿಕ ನಗರದ ಸರ್ವೆ ನಂಬರ್ 158ರಲ್ಲಿ ಎರಡು ಎಕರೆ ಸರಕಾರಿ ಭೂಮಿಯಿದ್ದು, ಸ್ಥಳೀಯ ಕಾರ್ಪೊರೇಟರ್ ಸಂಗೀತಾ ನಾಯಕ್ ಮತ್ತು ಆಕೆಯ ಪತಿ ರವೀಂದ್ರ ನಾಯಕ್ ಸೇರಿ ಆ ಭೂಮಿಯನ್ನು ಅಕ್ರಮವಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಸ್ಥಳೀಯರು ಆಟವಾಡಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುತ್ತಿದ್ದ ಜಾಗವನ್ನು ಇವರು ತಮಗೆ ಬೇಕಾದವರಿಗೆ ಮಾರಾಟ ಮಾಡಲು ಮುಂದಾಗಿದ್ದನ್ನು ಖಂಡಿಸುತ್ತೇವೆ ಎಂದು ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಮೊಯ್ದೀನ್ ಬಾವ ಹೇಳಿದ್ದಾರೆ.
ಸದ್ರಿ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಗುರುತು ಹಾಕಲಾಗಿದೆ. ಸ್ಥಳೀಯರು ಇದಕ್ಕೆ ಆಕ್ಷೇಪಿಸಿದ್ದು, ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸರಕಾರಿ ಜಾಗವೆಂದು ಹೇಳಿದ್ದರೂ, ರಾತ್ರಿ ವೇಳೆ ಕಾರ್ಪೊರೇಟರ್ ಗಂಡ ಸ್ಥಳಕ್ಕೆ ಬಂದು ಕಾಮಗಾರಿ ನಡೆಸಲು ಮುಂದಾಗಿದ್ದಾರೆ. ತಡೆಯಲು ಬಂದ ಸಾರ್ವಜನಿಕರ ಜೊತೆ ಗೂಂಡಾ ರೀತಿ ವರ್ತಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವರ್ತನೆಯನ್ನು ಕಾಣಬಹುದು.



ಒಂದು ಕಡೆ ಕಾರ್ಪೊರೇಟರ್ ಸಂಗೀತಾ ನಾಯಕ್, ಸದ್ರಿ ಜಾಗವನ್ನು ಕುಮ್ಕಿ ಜಾಗವೆಂದು ಹೇಳುತ್ತಾರೆ. ಕುಮ್ಕಿ ಆಗಿದ್ದರೆ, ಸ್ಥಳೀಯ ವ್ಯಕ್ತಿಗಳ ಖಾಸಗಿ ವರ್ಗ ಜಾಗಕ್ಕೆ ಸೇರುವಂಥದ್ದು. ಆ ಜಾಗದ ಹಕ್ಕುದಾರ ಖಾಸಗಿ ವ್ಯಕ್ತಿ ಮಾತ್ರ ಆಗಿರುತ್ತಾನೆ. ಅದನ್ನು ಸರಕಾರ ಸಾರ್ವಜನಿಕ ಬಳಕೆಗೆ ಪರಭಾರೆ ಮಾಡುವುದಾದರೆ, ಮಹಾನಗರ ಪಾಲಿಕೆ ವಶಕ್ಕೆ ಪಡೆದು ಕಂದಾಯ ಭೂಮಿಯೆಂದು ಘೋಷಣೆ ಮಾಡಬೇಕು. ಸರಕಾರಿ ಜಾಗವೆಂದು ಘೋಷಿಸಿ ಮನೆ ರಹಿತರಿಗೆ ನೀಡುವ ಕ್ರಮ ಆಗಬೇಕು. ಆದರೆ, ಅದ್ಯಾವುದೇ ಕೆಲಸ ಆಗದೇ ರಾತ್ರೋರಾತ್ರಿ ಬಂದು ಸರಕಾರಿ ಜಾಗದಲ್ಲಿ ಹಕ್ಕುದಾರಿಕೆ ತೋರುವುದು ಸರಿಯಲ್ಲ. ಎರಡು ಎಕರೆ ಭೂಮಿಯನ್ನು ಸೂಕ್ತವಾಗಿ ಬಳಸಿದರೆ, 400 ಮಂದಿಗೆ ವಸತಿ ನೀಡಲು ಸಾಧ್ಯವಿದೆ. ಇವರು ಯಾರೋ ತಮಗೆ ಬೇಕಾದವರಿಗೆ, ಹಣ ಪಡೆದು ನಿವೇಶನ ನೀಡಲು ತೊಡಗಿದರೆ ಅದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಮೊಯ್ದೀನ್ ಬಾವ ಹೇಳಿದರು.


ಈ ಬಗ್ಗೆ ಸ್ಥಳೀಯರ ಪ್ರತಿಭಟನೆಗೆ ಕಾಂಗ್ರೆಸ್ ಸಹಕಾರ ನೀಡುವುದಲ್ಲದೆ, ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗುವುದು. ಮಹಾನಗರ ಪಾಲಿಕೆಗೂ ದೂರು ನೀಡುತ್ತೇವೆ. ಸರಕಾರಿ ಜಾಗವನ್ನು ಅಕ್ರಮ ಪರಭಾರೆ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಮೇಶ್ ದಂಡಕೇರಿ ಸೇರಿದಂತೆ ಪಚ್ಚನಾಡಿ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು.
Former legislator and Congress leader Moideen Bhawa alleged that government sites were being allotted illegally in the labourers colony by the local corporator's husband.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am