ಬ್ರೇಕಿಂಗ್ ನ್ಯೂಸ್
12-12-22 02:05 pm Mangalore Correspondent ಕರಾವಳಿ
ಮಂಗಳೂರು, ಡಿ.12: ದೇಶ- ವಿದೇಶದಲ್ಲಿ ಸದ್ದು ಮಾಡಿರುವ ಕಾಂತಾರ ಚಿತ್ರದ ಎರಡನೇ ಭಾಗ ಮಾಡಲು ನಿರ್ದೇಶಕ ರಿಷಬ್ ಶೆಟ್ಟಿ ತಯಾರಾಗಿದ್ದಾರೆಯೇ ಎನ್ನುವ ಅನುಮಾನ, ವದಂತಿ ಕೇಳಿಬಂದಿದ್ದವು. ಈ ಬಗ್ಗೆ ಪಂಜುರ್ಲಿ ದೈವದ ಕೋಲದಲ್ಲಿ ಅನುಮತಿ ಕೇಳಿದ್ದಾರೆ ಎನ್ನುವ ಗುಮಾನಿಯೂ ಎದ್ದಿತ್ತು. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿಯಾಗಲೀ, ಚಿತ್ರತಂಡವಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಈಗ ಪಂಜುರ್ಲಿ ದೈವದ ಪಾತ್ರಧಾರಿ ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.
ಎರಡು ತಿಂಗಳ ಹಿಂದೆ ಹರಕೆ ನೇಮ ಕೊಡುವುದಾಗಿ ದೈವದಿಂದ ವೀಳ್ಯ ಪಡೆದಿದ್ದರು. ಮೊನ್ನೆ ಡಿ.8ರಂದು ರಿಷಬ್ ಶೆಟ್ಟಿ ಮತ್ತು ತಂಡದವರು ಬಂದು ನೇಮ ಕೊಟ್ಟಿದ್ದಾರೆ. ಮಡಿವಾಳರ ಕುಟುಂಬದ ಹೆಸರಲ್ಲಿ ನೇಮ ನಡೆದಿದ್ದು ನಮಗೇನು ರಿಷಬ್ ತಂಡದ ಪರಿಚಯ ಇರಲಿಲ್ಲ. ಕೋಲದ ಸಂದರ್ಭ ಕಾಂತಾರ ಚಿತ್ರ ಎರಡನೇ ಭಾಗ ಚಿತ್ರೀಕರಿಸಲು ಅನುಮತಿ ಕೇಳಿದ್ದಾರೆಂದು ಭಕ್ತರಿಂದ ತಿಳಿದುಕೊಂಡಿದ್ದೇನೆ. ದೈವದ ಚಿತ್ತ ತನಗೆ ಅರಿವಿಗೆ ಬರುವುದಿಲ್ಲ. ಭಕ್ತರು ಹೇಳಿದ ಪ್ರಕಾರ, ದೈವ ಚಿತ್ರ ನಿರ್ಮಾಣಕ್ಕೂ ಮೊದಲು ಧರ್ಮಸ್ಥಳದಲ್ಲಿ ಅಪ್ಪಣೆ ಪಡೆಯುವಂತೆ ನುಡಿ ಕೊಟ್ಟಿದೆ ಎಂದು ಕೋಲದಲ್ಲಿ ಪಂಜುರ್ಲಿ ಪಾತ್ರಧಾರಿಯಾಗಿದ್ದ ಉಮೇಶ್ ಪಂಬದ ಗಂಧಕಾಡು ಮಾಧ್ಯಮಕ್ಕೆ ತಿಳಿಸಿದ್ದಾರೆ.
ದೈವದ ನಡೆಯಲ್ಲಿ ಆಗಿರುವ ವಿಷಯ ನಮಗೆ ಗೊತ್ತಿರಲ್ಲ, ದೈವಕ್ಕೆ ಮಾತ್ರ ಗೊತ್ತಿರುತ್ತದೆ. ದೈವದ ನೇಮ ಆದನಂತರ ಭಕ್ತರು ನನಗೆ ಈ ಬಗ್ಗೆ ತಿಳಿಸಿದರು. ರಿಷಬ್ ಶೆಟ್ಟಿ ಎರಡನೇ ಭಾಗದ ಚಿತ್ರೀಕರಣಕ್ಕೆ ಅನುಮತಿ ಕೇಳಿದ್ದು, ಅದಕ್ಕೆ ಧರ್ಮಸ್ಥಳದ ಮಂಜುನಾಥ ದೇವರ ಅಪ್ಪಣೆ ಪಡೆಯುವಂತೆ ದೈವ ನುಡಿ ಕೊಟ್ಟಿದೆಯಂತೆ. ಮೊದಲ ಚಿತ್ರದಲ್ಲಿ ಒಳ್ಳೆಯದೂ ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಚಿಂತಿಸಿ ಮೊದಲ ಸಿನಿಮಾ ಮಾಡಿದ್ದೀರಿ. ಈ ಬಾರಿ ನೂರು ಹೆಜ್ಜೆಯಿಟ್ಟು ಚಿಂತನೆ ಮಾಡಿ ಮುಂದುವರಿಯುವಂತೆ ದೈವ ಹೇಳಿದೆ.
ಧರ್ಮದ ಪ್ರಕಾರ, ಆಚಾರ ವಿಚಾರದಲ್ಲಿ ಹೋಗುವಂತೆ ಅಪ್ಪಣೆ ಆಗಿದೆ. ಧರ್ಮಸ್ಥಳದಲ್ಲಿ ಖಾವಂದರ ಅನುಮತಿ ಕೇಳುವಂತೆ ದೈವ ನುಡಿ ಹೇಳಿದೆ. ರಿಷಬ್ ಶೆಟ್ಟಿ ಒಳ್ಳೆಯವರು, ಹರಕೆ ಕೋಲದ ವೇಳೆಯಲ್ಲೂ ಬಹಳ ಶುದ್ಧಾಚಾರದಿಂದ ನಡೆದುಕೊಂಡಿದ್ದಾರೆ. ನಾನು ನೋಡಿದ ಮಟ್ಟಿಗೆ ಅವರ ಸೇವೆ ಸಂತೋಷ ಆಗಿದೆ, ಉಳಿದಿದ್ದು ದೈವಕ್ಕೆ ಬಿಟ್ಟಿದ್ದು. ದೈವದ ವಿಷಯದಲ್ಲಿ ಕೆಟ್ಟದ್ದು ಮಾಡಬಾರದು, ತಿಳಿದು ಮಾಡಲೇಬಾರದು. ಮೊದಲ ಚಿತ್ರದಲ್ಲಿ ಶುದ್ಧಾಚಾರ ಪಾಲಿಸಿ ಚಿತ್ರ ಮಾಡಿದ್ದಾರೆ. ಎರಡನೇ ಚಿತ್ರಕ್ಕೆ ಇನ್ನಷ್ಟು ಶ್ರದ್ಧೆ ಇಟ್ಟುಕೊಂಡು ಸಿನಿಮಾ ಮಾಡಬೇಕಾಗುತ್ತದೆ ಎಂದು ಉಮೇಶ್ ಪಂಬದ ಹೇಳಿದ್ದಾರೆ.
ಮೊನ್ನೆ ಮಂಗಳೂರಿನ ಬಂದಲೆ ಎಂಬಲ್ಲಿ ಪಂಜುರ್ಲಿ ಕೋಲ ನಡೆದಿದ್ದು, ಅದರಲ್ಲಿ ರಿಷಬ್ ಶೆಟ್ಟಿ ಮತ್ತು ಚಿತ್ರತಂಡದ ಸದಸ್ಯರು ಪಾಲ್ಗೊಂಡಿದ್ದರು. ಅದರ ಸಣ್ಣ ವಿಡಿಯೋ ತುಣುಕು ಲೀಕ್ ಆಗಿದ್ದು, ಅಲ್ಲಿ ಚಿತ್ರದ ಎರಡನೇ ಭಾಗಕ್ಕೆ ಚಿತ್ರತಂಡ ಅನುಮತಿ ಕೇಳಿದೆ ಎನ್ನುವ ವದಂತಿ ಹರಡಿತ್ತು. ಈಗ ಪಂಜುರ್ಲಿ ಪಾತ್ರಧಾರಿಯೂ ಅಲ್ಲಿದ್ದ ಭಕ್ತರ ಮಾತುಗಳನ್ನು ಉಲ್ಲೇಖಿಸಿ ಹೌದೆಂದಿದ್ದಾರೆ. ಹೀಗಾಗಿ ಕಾಂತಾರ ಚಿತ್ರತಂಡ, ಎರಡನೇ ಭಾಗಕ್ಕೆ ರೆಡಿಯಾಗುತ್ತಿರುವುದು ಪಕ್ಕಾ ಆದಂತಾಗಿದೆ.
After the mega success of ‘Kantara’, Rishab Shetty and his team visited Panjurli Daiva to seek blessing before they start off with Kantara’s sequel. Like what he did previously before shooting the first film, Rishabh wanted to take the demi-god’s permission before taking any further steps. Likewise, Panjurli Daiva has granted all permission for the production of the ‘Kantara 2’. But the diety has also given some warnings to Rishabh Shetty before he goes ahead.
30-06-25 10:30 pm
HK News Desk
CM Siddaramaiah, Dk Shivakumar, CM Post: ಹೇಯ್...
30-06-25 02:55 pm
ಅಕ್ರಮ ಗೋಸಾಗಣೆ ತಡೆದ ಶ್ರೀರಾಮ ಸೇನೆ ಕಾರ್ಯಕರ್ತರನ್ನ...
30-06-25 01:44 pm
Spike in Heart Attack, Hassan: Dr. Manjunath...
30-06-25 12:05 pm
Tumakuru accident, four killed: ಕ್ಯಾಂಟರ್ -...
30-06-25 11:04 am
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
30-06-25 10:59 pm
Mangalore Correspondent
Mangalore KDP Meeting: ಕೆಡಿಪಿ ಸಭೆಯಲ್ಲಿ ಮರಳು,...
30-06-25 08:19 pm
Mangalore, Rain, School News: ತರಗತಿ ನಡೆಯುತ್ತಿ...
30-06-25 03:20 pm
Mangalore Bomb Threat, Airport: ಮಂಗಳೂರು ಸೇರಿ...
30-06-25 01:07 pm
Red Stone Quarry, Dakshina Kannada, Protest:...
27-06-25 10:17 pm
01-07-25 02:22 pm
Bangalore Correspondent
Mysuru Murder, Police suspended: ಪತ್ನಿ ಕೊಲೆಗೈ...
01-07-25 01:55 pm
Sirsi Job Fraud: ನೌಕರಿ ಕೊಡಿಸುವುದಾಗಿ 200 ರೂ. ಪ...
01-07-25 12:07 pm
Gold Loan Scam at Paduva Society, ShaktiNagar...
30-06-25 06:12 pm
Olx Fraud, Mangalore: ಓಎಲ್ ಎಕ್ಸ್ ನಲ್ಲಿ ಕಾರು ಮ...
29-06-25 11:23 pm