ಬ್ರೇಕಿಂಗ್ ನ್ಯೂಸ್
07-12-22 06:01 pm Mangalore Correspondent ಕರಾವಳಿ
ಮಂಗಳೂರು, ಡಿ.7: ಲಕ್ಷ ಲಕ್ಷ ಹಣದ ಕಂತೆ ಬಿದ್ದು ಸಿಕ್ಕಿದ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಘಟನೆ ಬಗ್ಗೆ ಮಾಧ್ಯಮದಲ್ಲಿ ಬರುತ್ತಿದ್ದಂತೆ ಕೂಲಿ ಕಾರ್ಮಿಕನ ಪತ್ನಿ ಯಾರದ್ದೋ ಹಣ ತಮಗೆ ಬೇಡವೆಂದು ಪೊಲೀಸರಿಗೆ ಮೂರು ಲಕ್ಷ ರೂಪಾಯಿ ಹಣವನ್ನು ತಂದು ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳೆದ ನವೆಂಬರ್ 26ರಂದು ಬೆಳಗ್ಗೆ 7.30ರ ಸುಮಾರಿಗೆ ಪಂಪ್ವೆಲ್ ಬಳಿಯ ಬಸ್ ನಿಲ್ದಾಣದಲ್ಲಿ ಹಣದ ಕಂತೆ ಬಿದ್ದು ಸಿಕ್ಕಿತ್ತು. ಅದನ್ನು ಕುಡಿದ ಮತ್ತಿನಲ್ಲಿದ್ದ ಮೆಕ್ಯಾನಿಕ್ ಶಿವರಾಜ್ ಮತ್ತು ಇನ್ನೊಬ್ಬ ಕೂಲಿ ಕಾರ್ಮಿಕ ತುಕಾರಾಮ ಎಂಬವರು ರಸ್ತೆಯಿಂದ ಹೆಕ್ಕಿದ್ದರು. ಅದರಲ್ಲಿ ಹಣದ ಕಂತೆ ಕಂತೆ ನೋಟುಗಳು ಸಿಕ್ಕಿದ್ದವು. ಅದರಿಂದ ಎರಡು 500ರ ನೋಟು ತೆಗೆದು ಮತ್ತೆರಡು ಪೆಗ್ ಹೊಟ್ಟೆಗಿಳಿಸಿದ್ದರು. ತುಕಾರಾಮ ಒಂದು ಕಟ್ಟು ಹಣದ ಕಂತೆಯನ್ನು ಪಡೆದು ಜಾಗ ಖಾಲಿ ಮಾಡಿದ್ದರೆ, ಶಿವರಾಜ್ ಮತ್ತೊಂದು ನೈಂಟಿ ಎಣ್ಣೆ ಹೊಡೆದು ಪಂಪ್ವೆಲ್ ಬಸ್ ನಿಲ್ದಾಣದಲ್ಲಿಯೇ ಮಲಗಿದ್ದ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಬಂದಿದ್ದ ಪೊಲೀಸರು ಎಣ್ಣೆ ಗುಂಗಿನಲ್ಲಿದ್ದ ಶಿವರಾಜ್ ನನ್ನು ಠಾಣೆಗೆ ಕರೆದೊಯ್ದಿದ್ದರು.
ಈ ಬಗ್ಗೆ ಒಂದು ವಾರದ ನಂತರ ಡಿ.6ರಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ಶಿವರಾಜ್, ಹತ್ತು ಲಕ್ಷ ಹಣ ಸಿಕ್ಕಿದ್ದ ವಿಷಯ ಹೇಳಿಕೊಂಡಿದ್ದ. ಆಮೂಲಕ ನಗದು ಹಣ ಪತ್ತೆ ವಿಚಾರ ರಟ್ಟಾಗಿತ್ತು. ಆದರೆ ಕಂಕನಾಡಿ ಪೊಲೀಸರಲ್ಲಿ ಕೇಳಿದರೆ, ಆತನಲ್ಲಿ ಕೇವಲ 49 ಸಾವಿರ ರೂ. ಇತ್ತು ಎಂದು ಹೇಳಿದ್ದರು. ಹಣ ಎಲ್ಲಿ ಹೋಯಿತು, ಪೊಲೀಸರು ಗುಳುಂ ಮಾಡಿದರೇ ಎಂಬ ಸಂಶಯ ಬಂದಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ, ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಶಿವರಾಜ್ ನನ್ನು ಹೊಯ್ಸಳ ಪೊಲೀಸರು ಬಂದು ಠಾಣೆಗೆ ಒಯ್ದಿದ್ದರು. ಆತನಲ್ಲಿ 500 ರೂ. ಮುಖಬೆಲೆಯ ಒಂದು ಕಂತೆ ಮಾತ್ರ ಇತ್ತು. ಅದರಲ್ಲಿ 49 ಸಾವಿರದ ಐನೂರು ಇತ್ತು ಎಂದು ತಿಳಿಸಿದ್ದಾರೆ.
ಅಲ್ಲದೆ, ಹಣ ಸಿಕ್ಕಿರುವ ಬಗ್ಗೆ ಮಾಧ್ಯಮದಿಂದ ತಿಳಿದ ಕೂಲಿ ಕಾರ್ಮಿಕ ತುಕಾರಾಮ ಎಂಬವರ ಪತ್ನಿ ಪ್ರೇಮಾ ತನ್ನ ಮಗನೊಂದಿಗೆ ಡಿ.6ರಂದು ಕಂಕನಾಡಿ ಠಾಣೆಗೆ ಆಗಮಿಸಿದ್ದಾರೆ. ಎರಡು ಕಟ್ಟಿನ ಹಣದ ಕಂತೆಯನ್ನು ಒಪ್ಪಿಸಿ, ಯಾರದ್ದೋ ದುಡ್ಡು ತಮಗೆ ಬೇಡವೆಂದು ತಿಳಿಸಿದ್ದಾರೆ. ಅದರಲ್ಲಿ 2 ಲಕ್ಷ 99 ಸಾವಿರದ 500 ರೂ. ಇತ್ತು. ಹೀಗಾಗಿ ಒಟ್ಟು 3 ಲಕ್ಷ 49 ಸಾವಿರ ರೂ. ಹಣ ಸಿಕ್ಕಿದೆ. ಇದನ್ನು ನಾವು ಸರಕಾರದ ನಿಧಿಗೆ ಕೋರ್ಟ್ ಮೂಲಕ ಒಪ್ಪಿಸುತ್ತೇವೆ. ಯಾರಾದ್ರೂ ಹಣ ಕಳಕೊಂಡಿದ್ದರೆ, ಸೂಕ್ತ ದಾಖಲೆ ಕೊಟ್ಟು ಪಡೆಯಬಹುದು. ಶಿವರಾಜ್ ಮಾಹಿತಿ ಪ್ರಕಾರ 500 ರೂ.ಗಳ ಒಟ್ಟು ಆರು ಹಣದ ಕಂತೆಗಳಿದ್ದವು. ಒಟ್ಟು ಎಷ್ಟಿತ್ತು ಎಂದು ಗೊತ್ತಾಗಿಲ್ಲ. ಸ್ಥಳದ ಸಿಸಿಟಿವಿ ಪರಿಶೀಲನೆ ನಡೆಸಿ, ಕುಡಿದು ಮಲಗಿದ್ದವನ ಜೇಬಿನಿಂದ ಹಣ ಎಗರಿಸಿದ್ದಾರೆಯೇ ಎಂಬ ಬಗ್ಗೆ ತಪಾಸಣೆ ನಡೆಸುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
ಐದು ಕಟ್ಟು ನೋಟಿನ ಕಂತೆಗಳಿದ್ದವು !
ಹತ್ತು ಲಕ್ಷ ಹಣ ಸಿಕ್ಕಿತ್ತು ಎಂದಿದ್ದ ಶಿವರಾಜ್ ಕೂಡ ಕಮಿಷನರ್ ಕಚೇರಿಗೆ ಬಂದಿದ್ದರು. ಮಾಧ್ಯಮದ ಸದಸ್ಯರು ಅವರನ್ನು ಪ್ರಶ್ನಿಸಿದಾಗ, ಒಟ್ಟು ಐದು ಬಂಡಲ್ ಗಳಿದ್ದವು. 500 ಮತ್ತು 2 ಸಾವಿರದ ನೋಟುಗಳಿದ್ದವು. ಅಂದಾಜು 5ರಿಂದ ಹತ್ತು ಲಕ್ಷ ಆಗಬಹುದು. ನೈಂಟಿ ಹೊಡೆದು ವೈನ್ ಶಾಪಿನಿಂದ ಹೊರಬಂದ ಬಳಿಕ ಮೂರು ಕಟ್ಟನ್ನು ಸೊಂಟಕ್ಕೆ ಸಿಕ್ಕಿಸಿದ್ದೆ. ಒಂದು ಕಟ್ಟು ಶರ್ಟ್ ಜೇಬಿನಲ್ಲಿ ಹಾಕಿದ್ದೆ. ಇನ್ನೊಂದು 500ರ ಕಟ್ಟನ್ನು ಇನ್ನೊಬ್ಬನಿಗೆ ಕೊಟ್ಟಿದ್ದೆ ಎಂದಿದ್ದಾರೆ. ಕೂಲಿ ಕಾರ್ಮಿಕ ತುಕಾರಾಮ ಎಂಬವರ ಪತ್ನಿ ಪ್ರೇಮಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಾವು ಜೀವಮಾನದಲ್ಲಿ ಅಷ್ಟು ಹಣ ನೋಡಿದ್ದಿಲ್ಲ. ಯಾರದ್ದೋ ಬೆವರಿನ ಹಣ ಇರಬಹುದು. ನಮ್ಮದಲ್ಲದ ಹಣ ನಮಗೆ ಬೇಡ ಎಂದು ಹಣ ಹಿಂತಿರುಗಿಸಿದ್ದೇವೆ ಎಂದರು.
ಒಟ್ಟಿನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಹಣ ಇತ್ತು ಎನ್ನುವ ಸಂಶಯ ಇದ್ದರೂ, ಈಗ ಸಿಕ್ಕಿರುವುದು ಕೇವಲ ಮೂರೂವರೆ ಲಕ್ಷ. ಅದು ಕೂಡ ಹಣ ಸಿಕ್ಕಿರುವ ವಿಚಾರ ಗೊತ್ತಾಗಿದ್ದು ಒಂದು ವಾರದ ನಂತರ, ಮಾಧ್ಯಮದಲ್ಲಿ ಬಂದ ಮೇಲೆ. ಪೊಲೀಸರು ಹಣ ಸಿಕ್ಕಿದರೂ, ಮೇಲಧಿಕಾರಿಗಳಿಗೂ ಮಾಹಿತಿ ನೀಡದೆ ಮುಚ್ಚಿಟ್ಟಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಳಿದ ಹಣ ಎಲ್ಲಿ ಹೋಯಿತು ಅನ್ನುವ ಬಗ್ಗೆಯೂ ಮಾಹಿತಿ ಇಲ್ಲ. ಪರಿಶೀಲನೆ ನಡೆಸುವುದಾಗಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಕುಡುಕನಿಗೆ ಬಿದ್ದು ಸಿಕ್ಕಿತ್ತು ಲಕ್ಷ ಲಕ್ಷ ಗರಿ ಗರಿ ನೋಟು! ಎಣ್ಣೆ ಗುಂಗಿನಲ್ಲಿ ನೋಟಿನ ಕಂತೆ ಹೋಗಿದ್ದೆಲ್ಲಿ ?
Mangalore Drunkard finds bag containing lakhs of money case gets big twist. Wife had handover money of 3 lakhs to police station. Will deposit the money to government fund whoever owns the money can show legal document and withdraw the money says Drunkards wife.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm