ಬ್ರೇಕಿಂಗ್ ನ್ಯೂಸ್
07-11-22 04:51 pm Mangalore Correspondent ಕರಾವಳಿ
ಮಂಗಳೂರು, ನ.7: ಸ್ಮಾರ್ಟ್ ಸಿಟಿ ಯೋಜನೆಯಡಿ ಹಂಪನಕಟ್ಟೆಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗುತ್ತಿದೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪ್ರಮುಖರು ಸೋಮವಾರ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅವರನ್ನು ಭೇಟಿಯಾಗಿ ಮನವಿ ಒಪ್ಪಿಸಿದ್ದಾರೆ.
ಹೊಸ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಬಾರದು. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿರುವ ಮಧ್ಯೆಯೇ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಿದರೆ ಅಕ್ರಮ ಗೋಹತ್ಯೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಇದರಿಂದ ಸಮಾಜದಲ್ಲಿ ಅಶಾಂತಿಕ ಕಾರಣವಾಗುತ್ತದೆ ಎಂದು ಶಾಸಕರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಕಾಮತ್, ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಬೀಫ್ ಸ್ಟಾಲ್ ಗಳನ್ನು ಪ್ರಸ್ತಾವನೆಯಲ್ಲಿ ರದ್ದುಪಡಿಸದೇ ಇದ್ದರೆ ಮಾರುಕಟ್ಟೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಇಲ್ಲ ಎಂದು ಹೇಳಿದರು.
ಹಿಂದಿನ ಸರಕಾರ ಇದ್ದಾಗಲೇ ಹೊಸ ಮಾರುಕಟ್ಟೆಯ ಪ್ಲಾನ್ ಮಾಡಲಾಗಿತ್ತು. ಬಿಜೆಪಿ ಸರಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಅದರ ಪ್ರಕಾರ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗದು. ಈ ಹಿಂದೆಯೇ ಮಾರುಕಟ್ಟೆಯ ಕಾಮಗಾರಿ ಶುರುವಾಗಬೇಕಿತ್ತು. ಆದರೆ ಕಾಂಗ್ರೆಸ್ ನವರು ಮಾರುಕಟ್ಟೆ ಕಾಮಗಾರಿಗೆ ತಡೆ ತಂದಿದ್ದರಿಂದ ವಿಳಂಬ ಆಗಿತ್ತು. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಶೀಘ್ರದಲ್ಲೇ ಸೆಂಟ್ರಲ್ ಮಾರುಕಟ್ಟೆಯ ಕಾಮಗಾರಿ ಆರಂಭಗೊಳ್ಳಲಿದೆ. ಅಕ್ರಮ ಗೋಹತ್ಯೆ ತಡೆಯುವ ನಿಟ್ಟಿನಲ್ಲಿ ಬೀಫ್ ಸ್ಟಾಲ್ ಹಾಕುವುದಕ್ಕೂ ಅವಕಾಶ ನೀಡುವುದಿಲ್ಲ.
ಗೋಹತ್ಯೆ ನಿಷೇಧ ಕಾಯ್ದೆಯಡಿ ಅಕ್ರಮ ಗೋಹತ್ಯೆ ಪತ್ತೆಯಾದರೆ, ಅಲ್ಲಿನ ಆಸ್ತಿ ಮುಟ್ಟುಗೋಲು ಹಾಕಲು ಅವಕಾಶವಿದೆ. ಅದರಂತೆ, ಮಂಗಳೂರಿನ ಹಲವೆಡೆ ಕಾನೂನು ಕ್ರಮ ಜರುಗಿಸಲಾಗಿದೆ. ಇದರಿಂದ ಜನರಿಗೂ ಅರಿವು ಬಂದಿದ್ದು, ಅಕ್ರಮ ಗೋಹತ್ಯೆಗೆ ಕಡಿವಾಣ ಬೀಳಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು. ಶಿವಾನಂದ ಮೆಂಡನ್, ಗೋಪಾಲ ಕುತ್ತಾರ್, ಪುನೀತ್ ಅತ್ತಾವರ ಸೇರಿದಂತೆ ಹಲವರು ವಿಹಿಂಪ ನಿಯೋಗದಲ್ಲಿದ್ದರು.
Responding to the matter of allowing beef stalls to operate in central market building, MLA Vedavyas Kamath on Monday November 7 said, “Vishwa Hindu Parishad (VHP) leaders have objected allocating beef stalls in central market that will be newly built. This market is the oldest market in my constituency
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
15-11-25 10:47 pm
Mangalore Correspondent
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm