ನಟ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ; ಹಿಂದೂ ಜಾಗರಣ ವೇದಿಕೆಯಿಂದ ಕಾರ್ಕಳ ಪೊಲೀಸ್ ಠಾಣೆಗೆ ದೂರು ! 

20-10-22 04:00 pm       Udupi Correspondent   ಕರಾವಳಿ

ದೈವಾರಾಧಾನೆ ಹಿಂದುತ್ವದ ಭಾಗವಲ್ಲವೆಂದ ನಟ ಚೇತನ್ ವಿರುದ್ಧ ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.

ಉಡುಪಿ, ಅ.20: ದೈವಾರಾಧಾನೆ ಹಿಂದುತ್ವದ ಭಾಗವಲ್ಲವೆಂದ ನಟ ಚೇತನ್ ವಿರುದ್ಧ ಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು  ದಾಖಲಿಸಲಾಗಿದೆ.

ದೂರಿನಲ್ಲಿ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ನಟ ಚೇತನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆ ಆಗ್ರಹಿಸಿದೆ. 

ಭೂತಕೋಲ, ದೈವಾರಾಧನೆ ಹಿಂದೂ ಸಂಸ್ಕೃತಿಯ ಭಾಗ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದರು. ಕಾಂತಾರ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಈ ಹೇಳಿಕೆ ಮಹತ್ವ ಪಡೆದುಕೊಂಡಿತ್ತು. ಈ ಮಾತಿಗೆ ವಿರೋಧ ಎನ್ನುವಂತೆ ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ನೀಡಿದ್ದರು. ಭೂತಕೋಲವು ಹಿಂದೂ ಸಂಸ್ಕೃತಿಯೇ ಅಲ್ಲ ಎಂದು ವಿರೋಧಿಸಿದ್ದರು. ಈ ಕುರಿತು ಪರ ವಿರೋಧ ಚರ್ಚೆ ಕೂಡ ನಡೆದಿತ್ತು. ಇದಕ್ಕೆ ಚೇತನ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ರಿಷಬ್ ಬಳಸಿದ `ಹಿಂದೂ ಸಂಸ್ಕೃತಿ’ ಪದಕ್ಕೆ ನನ್ನ ಆಕ್ಷೇಪಣೆ ಇದೆ ಎಂದಿದ್ದರು. ಚೇತನ್ ಹೇಳಿಕೆ ಬಾರಿ ವಿವಾದ ಸೃಷ್ಟಿಸಿತ್ತು.

Actor chetan Kumar controversy on Kantara, case filed by Hindu Jagrana members in Karkala