ಬ್ರೇಕಿಂಗ್ ನ್ಯೂಸ್
07-02-26 10:53 pm HK News Desk ದೇಶ - ವಿದೇಶ
ಮುಂಬೈ, ಫೆ.7: ಮುಂಬೈ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದೆ. ಬಿಜೆಪಿ ಸದಸ್ಯೆ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 25 ವರ್ಷಗಳ ಶಿವಸೇನೆ ಅಧಿಪತ್ಯ ಬದಿಗಿಟ್ಟು ಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಘಾಟ್ಕೋಪರ್ ವಾರ್ಡ್ ಕಾರ್ಪೊರೇಟರ್ ಆಗಿರುವ ರಿತು ತಾವ್ಡೆ ಈ ಹಿಂದೆ ಮುಂಬೈ ಪಾಲಿಕೆಯಲ್ಲಿ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಿವಸೇನೆಯ (ಶಿಂಧೆ ಬಣ) ಸಂಜಯ್ ಶಂಕರ್ ಘಾಡಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇವರು ವಾರ್ಡ್ ಸಂಖ್ಯೆ 5 ರಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
ಉಪ ಮೇಯರ್ ಸ್ಥಾನವನ್ನು ಶಿವಸೇನೆ ಶಿಂಧೆ ಬಣವು ತನ್ನ ನಾಲ್ವರು ಕಾರ್ಪೊರೇಟರ್ಗಳಿಗೆ ಹಂಚಿಕೆ ಮಾಡಲು ನಿರ್ಧರಿಸಿದೆ. ಸಂಜಯ್ ಘಾಡಿ ಮೊದಲ 15 ತಿಂಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.
2022ರಲ್ಲಿ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಾಗ, ಮುಂಬೈನಲ್ಲಿ ಏಕನಾಥ್ ಶಿಂಧೆ ಪರವಾಗಿ ನಿಂತ ಪ್ರಮುಖ ನಾಯಕರಲ್ಲಿ ಸಂಜಯ್ ಘಾಡಿ ಒಬ್ಬರಾಗಿದ್ದರು. ಮೈತ್ರಿ ಒಪ್ಪಂದದಂತೆ ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) ಅಧಿಕಾರ ಹಂಚಿಕೊಂಡಿವೆ.
227 ಸದಸ್ಯ ಬಲದ ಮುಂಬೈ ಪಾಲಿಕೆಗೆ ಜನವರಿ 15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶಿವಸೇನೆ ಶಿಂಧೆ ಬಣವು 29 ಸ್ಥಾನಗಳನ್ನು ಪಡೆದಿದ್ದು ಮೈತ್ರಿಕೂಟ 118 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿತ್ತು. 1997ರಿಂದ ನಿರಂತರ ಅಧಿಕಾರದಲ್ಲಿದ್ದ ಶಿವಸೇನೆ 65 ಸ್ಥಾನಗಳನ್ನು ಪಡೆದಿತ್ತು. ಇವರ ಮೈತ್ರಿ ಪಕ್ಷಗಳಾದ ಎಂಎನ್ಎಸ್ 6 ಮತ್ತು ಎನ್ ಸಿಪಿ ಒಂದು ಸ್ಥಾನ ಪಡೆದಿತ್ತು. ಕಾಂಗ್ರೆಸ್ 24, ಎಐಎಂಐಎಂ ಎಂಟು, ಎನ್ ಸಿಪಿ (ಅಜಿತ್ ಬಣ) ಮೂರು ಹಾಗೂ ಸಮಾಜವಾದಿ ಪಾರ್ಟಿ ಎರಡು ಸ್ಥಾನ ಗಳಿಸಿದ್ದವು.
ಬೃಹನ್ಮುಂಬಯಿ ಮಹಾನಗರ ಪಾಲಿಕೆ ದೇಶದ ಶ್ರೀಮಂತ ಪಾಲಿಕೆಗಳಲ್ಲಿ ಒಂದಾಗಿದ್ದು ಏಳು ವರ್ಷಗಳ ಬಳಿಕ ಚುನಾವಣೆ ಆಗಿತ್ತು. 2022ರಲ್ಲಿ ಅವಧಿ ಮುಗಿದ ಬಳಿಕ ಪಾಲಿಕೆಗೆ ಆಡಳಿತಾಧಿಕಾರಿ ನೇಮಿಸಲಾಗಿತ್ತು. ಪಾಲಿಕೆಯ 2025-26ರ ಬಜೆಟ್ ಮೊತ್ತ 74 ಸಾವಿರ ಕೋಟಿಯಾಗಿತ್ತು.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm