ಬ್ರೇಕಿಂಗ್ ನ್ಯೂಸ್
17-10-22 02:16 pm Mangalore Correspondent ಕರಾವಳಿ
ಮಂಗಳೂರು, ಅ.17 : ಸುರತ್ಕಲ್ ಟೋಲ್ ಗೇಟ್ ಅಕ್ರಮ ಎನ್ನುವುದನ್ನು ರಾಜ್ಯದ ವಿಧಾನಸಭೆಯಲ್ಲಿಯೇ ಒಪ್ಪಿಕೊಂಡಿದ್ದಾರೆ. ಸಂಸತ್ತಿನಲ್ಲಿಯೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಸಂಸತ್ತು, ವಿಧಾನಸಭೆಯಲ್ಲಿ ಯಾವುದೇ ನಿರ್ಣಯ ಆದಲ್ಲಿ ಅದನ್ನು ಅನುಷ್ಠಾನಕ್ಕೆ ತರುವುದು ಸಂಸದರು ಮತ್ತು ಶಾಸಕರ ಕರ್ತವ್ಯ. ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದ ಮೇಲೆ ಅದನ್ನು ಮುಂದುವರಿಸುವುದರಲ್ಲಿ ಅರ್ಥ ಇಲ್ಲ. ಅದಕ್ಕಾಗಿ ಅಧಿಕಾರಿಗಳು ಪ್ರಕ್ರಿಯೆ ನಡೆಸುವುದಕ್ಕಾಗಿಯೂ ಸಮಯ ಕೇಳುವಂತಿಲ್ಲ. ಕೂಡಲೇ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು ಎಂದು ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಕ್ರಮ ಎಂದಿರುವ ಟೋಲ್ ಗೇಟನ್ನು ತೆರವು ಮಾಡಿಯೆಂದು ಸಾಮಾಜಿಕ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ. ಆದರೆ ಆಡಳಿತ ನಡೆಸುತ್ತಿರುವ ಬಿಜೆಪಿ ಶಾಸಕ, ಸಂಸದರು ಪೊಲೀಸರ ಮೂಲಕ ನೋಟಿಸ್ ಕೊಟ್ಟು ಬಲಪ್ರಯೋಗಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ವಿಚಾರದಲ್ಲಿ ಜನರು ಹೋರಾಟ ಕೈಗೆತ್ತಿಕೊಂಡಾಗ ಉತ್ತರ ನೀಡುವುದು ಶಾಸಕರು ಮತ್ತು ಸಂಸದರ ಕರ್ತವ್ಯ ಅಲ್ಲವೇ? ಸಂಸದರು ಮತ್ತೆ ಮತ್ತೆ ಸಮಯಾವಕಾಶ ಕೇಳುವುದು ಅವರ ನಿಷ್ಕಾಳಜಿ ಮತ್ತು ಅಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಹೇಳಿದರು.
ವಿಪಕ್ಷದವರು ಪ್ರಶ್ನೆ ಮಾಡಿದರೆ ಐಟಿ, ಇಡಿ ಮೂಲಕ ರೈಡ್ ಮಾಡಿಸ್ತೀರಿ. ಸಾಮಾಜಿಕ ಕಾರ್ಯಕರ್ತರ ಮೇಲೆ ಪೊಲೀಸ್ ನೋಟಿಸ್ ಕೊಟ್ಟು ಬೆದರಿಸುತ್ತೀರಿ. ಒಬ್ಬ ಮಹಿಳೆಯ ಮನೆಗೆ ನಡುರಾತ್ರಿಯಲ್ಲಿ ಹೋಗಿ ನೋಟಿಸ್ ಕೊಡುತ್ತೀರಲ್ಲಾ.. ಇದು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಮಾನವ ಹಕ್ಕುಗಳ ಉಲ್ಲಂಘನೆ. ಪ್ರತಿಭಾ ಕುಳಾಯಿ ಮನೆಗೆ ನುಗ್ಗಿದ ಪೊಲೀಸರನ್ನು ಕೂಡಲೇ ಸಸ್ಪೆಂಡ್ ಮಾಡಬೇಕು. ಹ್ಯೂಮನ್ ರೈಟ್ಸ್ ಕಮಿಷನ್ ಸ್ವಯಂ ಆಗಿ ಕೇಸು ದಾಖಲಿಸಬೇಕು. ಕಾಂಗ್ರೆಸ್ ಕಡೆಯಿಂದ ಪೊಲೀಸರ ಕ್ರಮದ ವಿರುದ್ಧ ಕೇಸು ದಾಖಲು ಮಾಡುತ್ತೇವೆ ಎಂದರು.
400 ಕೋಟಿ ಅಕ್ರಮ ದುಡ್ಡು ಹೊಡೆದಿದ್ದಾರೆ !
ಸುರತ್ಕಲ್ ಟೋಲ್ ನಲ್ಲಿ ದಿನಕ್ಕೆ 12ರಿಂದ 16 ಲಕ್ಷ ಕಲೆಕ್ಷನ್ ಆಗುತ್ತದೆ. ಎಂಟು ವರ್ಷದಲ್ಲಿ 400 ಕೋಟಿ ದುಡ್ಡು ಹೊಡೆದಿದ್ದಾರೆ. ಇದರಲ್ಲಿ ಯಾರೆಲ್ಲ ಪಾಲು ಪಡೆದಿದ್ದಾರೆ ಎಂದು ಸಾರ್ವಜನಿಕರಿಗೆ ಲೆಕ್ಕ ಕೊಡಬೇಕು. ಅಕ್ರಮ ಟೋಲ್ ಎಂದ ಮೇಲೆ ಈಗ ನಡೆಯುತ್ತಿರುವುದು ಶುದ್ಧ ಅಕ್ರಮ. ಬಡವರನ್ನು, ಕಾರ್ಮಿಕರನ್ನು ಸುಲಿಗೆ ಮಾಡುತ್ತಿದ್ದಾರೆ. ಅಕ್ರಮವಾಗಿ ದುಡ್ಡು ಸಂಗ್ರಹ ಮಾಡಬೇಕಾದ ಸ್ಥಿತಿ ರಾಜ್ಯಕ್ಕೆ ಬಂದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇದೆ. ವಿಧಾನಸಭೆಯಲ್ಲಿ ಅಕ್ರಮ ಎಂದು ಒಪ್ಪಿದ ಬಳಿಕ ಅದನ್ನು ಯಾಕೆ ಮುಂದುವರಿಸುತ್ತಿದ್ದಾರೆ. ನಾಳೆ ನೇರ ಕಾರ್ಯಾಚರಣೆ ನಡೆಯಲಿದ್ದು ಕರಾವಳಿಯ ಜನರೇ ಬಂಡೆದ್ದು ಟೋಲ್ ಗೇಟ್ ತೆರವು ಮಾಡಲಿದ್ದಾರೆ. ಶಾಸಕರು ಮತ್ತು ಸಂಸದರಿಗೆ ಜನರ ಬಗ್ಗೆ ಕನಿಷ್ಢ ಕಾಳಜಿ ಎಂಬುದಿದ್ದರೆ ಪ್ರತಿಭಟನಾ ಸ್ಥಳಕ್ಕೆ ಬಂದು ಟೋಲ್ ಗೇಟ್ ಬಂದ್ ಮಾಡಬೇಕು. ಸಂಸತ್ತಿನಲ್ಲಾದ ನಿರ್ಣಯ ಅನುಷ್ಠಾನಕ್ಕೆ ತರಲು ಆಗದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಬೇಕು. ಜಿಲ್ಲಾಧಿಕಾರಿಯೂ ಸ್ಥಳಕ್ಕೆ ಬಂದು ಟೋಲ್ ಸಂಗ್ರಹ ಬಂದ್ ಮಾಡುವ ಬಗ್ಗೆ ಘೋಷಣೆ ಮಾಡಬೇಕು, ಆನಂತರ ನಿಮ್ಮ ಪ್ರಕ್ರಿಯೆ ಏನಿದ್ದರೂ ಮಾಡಿಕೊಳ್ಳಿ. ಮೊದಲು ಟೋಲ್ ಕಲೆಕ್ಷನ್ ನಿಲ್ಲಿಸಿ. ಇಲ್ಲದೇ ಇದ್ದರೆ ಇದರಿಂದಾಗುವ ಪರಿಣಾಮ ಎದುರಿಸಬೇಕು ಎಂದು ಐವಾನ್ ಡಿಸೋಜ ಹೇಳಿದರು.
ನೀವು ಪ್ರತಿಪಕ್ಷವಾಗಿ ಈ ಮೊದಲೇ ಯಾಕೆ ಇದನ್ನು ತೆರವು ಮಾಡಿಲ್ಲ. ಹೆಜಮಾಡಿ ಟೋಲ್ ಆದಕೂಡಲೇ ಇದು ಅಕ್ರಮ ಆಗಿತ್ತಲ್ಲವೇ.. ಆಗ ನೀವೇ ಅಧಿಕಾರದಲ್ಲಿದ್ದಿರಿ ಎಂದು ಪ್ರಶ್ನೆ ಹಾಕಿದಾಗ, ಅದು ಕೇಂದ್ರ ಸರಕಾರದ ವ್ಯಾಪ್ತಿಗೆ ಬರುವಂಥದ್ದು. ಸಂಸತ್ತಿನಲ್ಲಿ ಕೇಂದ್ರ ಸಾರಿಗೆ ಸಚಿವರು ಹೇಳಿದ ಬಳಿಕ ಇದು ಅಕ್ರಮ ಅಂತ ಗೊತ್ತಾಗಿದ್ದು. ರಾಜ್ಯದಲ್ಲಿ 19 ಕಡೆ ಇಂತಹ ಅಕ್ರಮ ಟೋಲ್ ಗೇಟ್ ಇರುವ ಬಗ್ಗೆ ಹೇಳಿದ್ದಾರೆ. ಅದನ್ನು ತೆರವು ಮಾಡಲಿ ಎಂದರು.
ಸುದ್ದಿಗೋಷ್ಟಿಯಲ್ಲಿ ಕಳ್ಳಿಗೆ ತಾರನಾಥ ಶೆಟ್ಟಿ, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಶುಭೋದಯ ಆಳ್ವ, ವಿವೇಕ್ ಪೂಜಾರಿ ಮತ್ತಿತರರಿದ್ದರು.
Ivan Dsouza slams BJP party over Surathkal toll, says Nitin Gadkari himself has agreed to shift the toll gate then whats the problem with the leaders here to shift to as promised.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm