ಬ್ರೇಕಿಂಗ್ ನ್ಯೂಸ್
11-10-22 09:28 pm Mangalore Correspondent ಕರಾವಳಿ
ಮಂಗಳೂರು, ಅ.11: ವಾಮಂಜೂರಿನಲ್ಲಿ ಶಾರದೋತ್ಸವ ಆಚರಣೆಯ ನಿಮಿತ್ತ ಹಾಕಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದ್ದ ಘಟನೆ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು. ವಿರೋಧಿ ಕೋಮಿನ ಕಿಡಿಗೇಡಿಗಳು ಕೃತ್ಯ ಎಸಗಿದ್ದರು ಅನ್ನುವ ರೀತಿಯೂ ಬಿಂಬಿತವಾಗಿತ್ತು. ರಾತ್ರೋರಾತ್ರಿ ಬ್ಯಾನರ್ ಹರಿದು ಹಾಕಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದರ ಬೆನ್ನಲ್ಲೇ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಮೂವರು ಕಿಡಿಗೇಡಿ ಯುವಕರನ್ನು ಬಂಧಿಸಿದ್ದಾರೆ. ಗುರುಪುರ ಆಸುಪಾಸಿನ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ ಮತ್ತು ಪ್ರವೀಣ್ ಪೂಜಾರಿ ಎಂಬ ಮೂವರನ್ನು ಬಂಧಿಸಿದ್ದು, ಅವರು ಬಳಸಿದ್ದ ಸ್ವಿಫ್ಟ್ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.8ರ ಮಧ್ಯರಾತ್ರಿ 1.30ರಿಂದ ಎರಡು ಗಂಟೆ ಮಧ್ಯದಲ್ಲಿ ಯುವಕರು ಕೃತ್ಯ ಎಸಗಿದ್ದರು. ರಸ್ತೆ ಬದಿ ಹಾಕಿದ್ದ ಫ್ಲೆಕ್ಸನ್ನು ಹರಿದು ಹಾಕಿದ್ದು ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ಪೊಲೀಸರು ಅದನ್ನೇ ಆಧರಿಸಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.



ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದಳ್ಳುರಿ ನಡೆದಿತ್ತು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಉಂಟಾದ ಉದ್ವಿಗ್ನ ಸ್ಥಿತಿ ಮತ್ತೊಬ್ಬನ ಕೊಲೆಯೊಂದಿಗೆ ಅವಸಾನ ಆಗಿತ್ತು. ಇದೀಗ ರಾತ್ರೋರಾತ್ರಿ ಶಾರದೋತ್ಸವಕ್ಕೆ ಹಾಕಿದ್ದ ಬ್ಯಾನರನ್ನು ಹರಿದು ಹಾಕಿದ್ದು ಇನ್ನೊಂದು ಕೋಮಿನವರು ಉದ್ದೇಶ ಪೂರ್ವಕ ನಡೆಸಿದ ಕೃತ್ಯ ಎನ್ನುವಂತೆ ಬಿಂಬಿಸಲಾಗಿತ್ತು. ಆದರೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದು, ಸಂಘಟನೆಯ ಒಳಗಿನ ವೈಮನಸ್ಸಿನಿಂದಲೇ ಈ ರೀತಿ ಕೃತ್ಯ ಎಸಗಿದ್ದರು ಅನ್ನೋದು ತಿಳಿದುಬಂದಿದೆ. ಯುವಕರು ಯಾಕಾಗಿ ಇಂತಹ ಕೃತ್ಯ ಎಸಗಿದ್ದಾರೆ, ಇದರ ಹಿಂದೆ ಕೋಮು ದ್ವೇಷ ಹರಡುವ ಉದ್ದೇಶ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಹರಿದ ಕಿಡಿಗೇಡಿಗಳು ; ಮತ್ತೆ ಶಾಂತಿ ಕದಡಲು ಯತ್ನ
The city police have detained three persons on Tuesday, October 11, in connection with tearing a flex hung at a public place by Vamanjoor Friends' Association for Sharadotsav.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am