ಬ್ರೇಕಿಂಗ್ ನ್ಯೂಸ್
11-10-22 08:03 pm Mangalore Correspondent ಕರಾವಳಿ
ಮಂಗಳೂರು, ಅ.11: ರಾಜ್ಯದಲ್ಲಿ ಶೀಘ್ರದಲ್ಲೇ 350 ಇಲೆಕ್ಟ್ರಿಕ್ ಬಸ್ ಗಳನ್ನು ಸಂಚಾರಕ್ಕೆ ಇಳಿಸಲಿದ್ದೇವೆ. ಆ ಪೈಕಿ 50 ಬಸ್ ಗಳು ಮಂಗಳೂರು ಕೆಎಸ್ಸಾರ್ಟಿಸಿ ಡಿಪೋ ವ್ಯಾಪ್ತಿಗೆ ಬರಲಿವೆ. ಇನ್ನೊಂದು ತಿಂಗಳ ಒಳಗೆ ಇಲೆಕ್ಟ್ರಿಕ್ ಬಸ್ ಮಂಗಳೂರಿನಲ್ಲಿ ಓಡಾಟ ನಡೆಸಲಿವೆ ಎಂದು ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಹೇಳಿದ್ದಾರೆ.
ಮಂಗಳೂರಿನ ಬಿಜೈ ಡಿಪೋದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಲೆಕ್ಟ್ರಿಕ್ ಬಸ್ ಗಳಲ್ಲದೆ ರಾಜ್ಯದಲ್ಲಿ ಇನ್ನೂ 650 ಹೊಸ ಬಸ್ ಗಳನ್ನು ಖರೀದಿಸಲಾಗುತ್ತಿದ್ದು, ಅದರಲ್ಲಿ 50 ಬಸ್ ವೋಲ್ವೋ ಇರಲಿದೆ. ನಮ್ಮ ವೋಲ್ವೋ ಬಸ್ ಗಳು ಪ್ರಯಾಣಿಕರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕ ಸ್ನೇಹಿಯಾಗಿವೆ ಎಂದು ಹೇಳಿದರು. ಕೆಎಸ್ಸಾರ್ಟಿಸಿ ಬೆಂಗಳೂರು ವಿಭಾಗದಲ್ಲಿದ್ದ ಹೆಚ್ಚುವರಿ ಹುದ್ದೆಗಳನ್ನು ಕಡಿತ ಮಾಡಲಾಗಿದ್ದು, ಖಾಲಿಯಿರುವ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹಿಂದಿನ ಸರಕಾರದಲ್ಲಿ ಮಾಡಲಾಗಿದ್ದ ಅನಗತ್ಯ ಹುದ್ದೆಗಳನ್ನು ನಾವು ಕಡಿತ ಮಾಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಚಂದ್ರಪ್ಪ ಉತ್ತರಿಸಿದರು.
ದಸರಾ ದರ್ಶನಿ ಹೆಸರಲ್ಲಿ ಟೂರ್ ಪ್ಯಾಕೇಜ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೀಪಾವಳಿ ಸಂದರ್ಭದಲ್ಲಿಯೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದೇವಸ್ಥಾನಗಳ ದರ್ಶನಕ್ಕಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು. ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ ಪ್ರವಾಸ ಪ್ಯಾಕೇಜನ್ನು ವೀಕೆಂಡಿನಲ್ಲಿ ಪ್ರತಿ ವಾರ ಇರುವಂತೆ ವಿಸ್ತರಣೆ ಮಾಡಲಾಗುವುದು ಎಂದರು.
ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್
ರಾಜ್ಯ ಸರಕಾರ ಮೂರು ತಿಂಗಳ ಅವಧಿಗೆ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಗಳನ್ನು ನೀಡಿದೆ. ಇದನ್ನು ಮೂರು ತಿಂಗಳ ನಂತರ ಆಯಾ ಡಿಪೋ ವ್ಯಾಪ್ತಿಯಲ್ಲಿ ನವೀಕರಣ ಮಾಡಬಹುದು. ಮಂಗಳೂರು, ಉಡುಪಿ, ಕುಂದಾಪುರ ವ್ಯಾಪ್ತಿಯ ಮಂಗಳೂರು ವಿಭಾಗದಲ್ಲಿ 672 ಕಾರ್ಮಿಕರು ನೋಂದಣಿ ಮಾಡಿದ್ದು, ಇದರ ಪ್ರಯೋಜನ ಪಡೆಯಲಿದ್ದಾರೆ. ಮೊದಲಿಗೆ 296 ಕಾರ್ಡ್ ಗಳನ್ನು ಪ್ರಿಂಟ್ ಮಾಡಿದ್ದು, 376 ಕಾರ್ಡ್ ಪ್ರಿಂಟ್ ಆಗಲು ಬಾಕಿಯಿದೆ. ಪುತ್ತೂರು, ಮಡಿಕೇರಿ, ಸುಳ್ಯ, ಧರ್ಮಸ್ಥಳ ಡಿಪೋ ವ್ಯಾಪ್ತಿ ಒಳಗೊಂಡ ಪುತ್ತೂರು ವಿಭಾಗದಲ್ಲಿ 1268 ಕಾರ್ಮಿಕರು ನೋಂದಣಿ ಮಾಡಿದ್ದು, ಆ ಪೈಕಿ 366 ಕಾರ್ಡ್ ಗಳನ್ನು ಪ್ರಿಂಟ್ ಮಾಡಲಾಗಿದೆ. 902 ಕಾರ್ಡ್ ಪ್ರಿಂಟ್ ಆಗಬೇಕಷ್ಟೇ. ಶೀಘ್ರದಲ್ಲಿ ಕಾರ್ಡ್ ಕಾರ್ಮಿಕರ ಕೈಸೇರಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಹಬ್ಬದ ಸೀಸನಲ್ಲಿ ಕೆಎಸ್ಸಾರ್ಟಿಸಿ ದಿನವೊಂದಕ್ಕೆ 22.54 ಕೋಟಿ ರೂಪಾಯಿ ಆದಾಯ ಗಳಿಸಿದೆ. ಬಾಕಿ ದಿನಗಳಲ್ಲಿ 8 ಕೋಟಿ ಇರುತ್ತಿದ್ದ ಕಲೆಕ್ಷನ್ನಿಗೆ ಹೋಲಿಸಿದರೆ ಇದು ಉತ್ತಮ ಸಾಧನೆ ಎಂದು ಚಂದ್ರಪ್ಪ ಹೇಳಿದರು.
Chairman of Karnataka State Road Transport Corporation (KSRTC) M Chandrappa said, “The state government will introduce 350 electric buses across the state within a month in which 50 are allotted for Mangaluru division.”
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm