ಉಳ್ಳಾಲದಲ್ಲಿ ಹಿಟ್ & ರನ್ ಪ್ರಕರಣ ; ಟ್ರಾಫಿಕ್ ಸಿಬಂದಿಗೆ ಕಾರು ಡಿಕ್ಕಿ ಹೊಡೆಸಿದ ಅಪ್ರಾಪ್ತ ಯುವಕ ಬಂಧನ 

03-10-22 09:42 pm       Mangalore Correspondent   ಕರಾವಳಿ

ಟ್ರಾಫಿಕ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಮತ್ತು ಅದರ ಅಪ್ರಾಪ್ತ ಚಾಲಕನನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಉಳ್ಳಾಲ, ಸೆ.3: ಟ್ರಾಫಿಕ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಮತ್ತು ಅದರ ಅಪ್ರಾಪ್ತ ಚಾಲಕನನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಉಳ್ಳಾಲ ಮುಕ್ಕಚ್ಚೇರಿ ಮೂಲದ 17 ರ ಹರೆಯದ ಅಪ್ರಾಪ್ತ ಯುವಕ ಆರೋಪಿಯಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಲೋಕೇಶ್ ನಾಯ್ಕ್ ಅವರು ಎಎಸ್ಐ ಮಂಜುಳಾ ಜೊತೆ ನಿನ್ನೆ ಸಂಜೆ ಉಳ್ಳಾಲಬೈಲಿನಲ್ಲಿ ಕರ್ತವ್ಯದಲ್ಲಿದ್ದಾಗ ಘಟನೆ ನಡೆದಿತ್ತು. 

ತೊಕ್ಕೊಟ್ಟಿನಿಂದ ಉಳ್ಳಾಲ ಕಡೆಗೆ ಧಾವಿಸುತ್ತಿದ್ದ ಸ್ವಿಫ್ಟ್ ಕಾರನ್ನ ಗಸ್ತಿನಲ್ಲಿದ್ದ ಲೋಕೇಶ್ ಅವರು ತಪಾಸಣೆಗಾಗಿ ಬದಿಗೆ ನಿಲ್ಲಿಸುವಂತೆ ಸೂಚಿಸಿದ್ದರು. ಕಾರನ್ನ ಬದಿಗೆ ನಿಲ್ಲಿಸಲು ಮುಂದಾಗಿದ್ದ ಅಪ್ರಾಪ್ತ ಚಾಲಕ ಏಕಾಏಕಿ ಮುಂದಕ್ಕೆ ಚಲಾಯಿಸಿ ಲೋಕೇಶ್ ಅವರಿಗೆ ಡಿಕ್ಕಿಯಾಗಿಸಿ ಪರಾರಿಯಾಗಿದ್ದ. ಕಾರು ಡಿಕ್ಕಿಯಾದ ರಭಸಕ್ಕೆ ರಸ್ತೆಯ ವಿಭಜಕಕ್ಕೆ ಎಸೆಯಲ್ಪಟ್ಟ ಲೋಕೇಶ್ ಅವರು ತಲೆಗೆ ಗಂಭೀರ ಗಾಯಗೊಂಡು ನಗರದ ಎ.ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹಿಟ್ & ರನ್ ಪ್ರಕರಣ ದಾಖಲಿಸಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ನಿನ್ನೆ ರಾತ್ರಿಯೇ ಘಟನೆಗೆ ಕಾರಣವಾದ ಕಾರನ್ನ ವಶಕ್ಕೆ ಪಡೆದಿದ್ದು, ಪರಾರಿಯಾಗಿದ್ದ ಆರೋಪಿ ಅಪ್ರಾಪ್ತ ಚಾಲಕನನ್ನ ಸೋಮವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಅಪ್ರಾಪ್ತ ಚಾಲಕ ತನ್ನ ತಂದೆಯ ಕಾರನ್ನ ಚಾಲನಾ ಪರವಾನಿಗೆ ಇಲ್ಲದೆ ಚಲಾಯಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉಳ್ಳಾಲದಲ್ಲಿ ಹಿಟ್ & ರನ್ ;  ಗಸ್ತಿನಲ್ಲಿದ್ದ ಟ್ರಾಫಿಕ್ ಸಿಬಂದಿಗೆ ಕಾರು ಡಿಕ್ಕಿ ಹೊಡೆದು ಪರಾರಿ, ಹೆಡ್ ಕಾನ್ಸ್ ಟೇಬಲ್ ಗಂಭೀರ 

Ullal hit and run accident of traffic police constable, car driver minor boy who rammed over the constable and escaped the spot is now arrested by Ullal police in Mangalore.