ಬ್ರೇಕಿಂಗ್ ನ್ಯೂಸ್
26-09-22 10:37 pm Mangalore Correspondent ಕರಾವಳಿ
ಮಂಗಳೂರು, ಸೆ.26: ವಕ್ಫ್ ಆಸ್ತಿ ದುರುಪಯೋಗದ ಬಗ್ಗೆ ಅನ್ವರ್ ಮಾಣಿಪ್ಪಾಡಿ ನೀಡಿದ್ದ ವರದಿಯನ್ನು ಒಪ್ಪಿದ್ದೇವೆ. ಅದರ ಬಗ್ಗೆ ಮೂರು ತಿಂಗಳ ಹಿಂದೆಯೇ ವಿಧಾನ ಪರಿಷತ್ತಿನ ಭರವಸೆಗಳ ಕಮಿಟಿಯ ಅಧ್ಯಕ್ಷ ಬಿಎಂ ಫಾರೂಕ್ ನೇತೃತ್ವದಲ್ಲಿ ಚರ್ಚೆ ನಡೆಸಿದ್ದೆವು. ಸರಕಾರಕ್ಕೆ ವರದಿಯನ್ನು ಒಪ್ಪಿಸಿ ತನಿಖೆಗೆ ಹೇಳಿದ್ದೇವೆ. ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಕೊಡಲಿ, ಸಿಬಿಐ ತನಿಖೆಗೇ ಕೊಡಲಿ. ಯಾವುದೇ ತನಿಖೆಗೂ ನಾವು ಸಿದ್ಧರಿದ್ದೇವೆ ಎಂದು ವಕ್ಫ್ ಕಮಿಟಿ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.
ನಗರದ ಪಾಂಡೇಶ್ವರದಲ್ಲಿ ವಕ್ಫ್ ಇಲಾಖೆಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಕ್ಫ್ ಇಲಾಖೆಯಲ್ಲಿ ನಾನು 2011ರಲ್ಲಿಯೇ ಮೆಂಬರ್ ಆಗಿದ್ದೇನೆ. ಮಾಣಿಪ್ಪಾಡಿಯವರು 2012ರಲ್ಲಿ ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ವಕ್ಫ್ ಆಯೋಗದ ಅಧ್ಯಕ್ಷರಿಗೆ ಮಾತ್ರ ಅಧಿಕಾರ ಇದೆ. ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ತನಿಖೆ ನಡೆಸಿ ಕಬಳಿಕೆ ಆಗಿರುವ ಆಸ್ತಿಯನ್ನು ಮರಳಿ ಪಡೆಯಬೇಕಾಗಿದೆ ಎಂದು ಹೇಳಿದರು.
ಬೀದರ್, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ವಕ್ಫ್ ಇಲಾಖೆಗೆ ಅತಿ ಹೆಚ್ಚು ಆಸ್ತಿ ಇದೆ. ಟಿಪ್ಪು ಸುಲ್ತಾನ್, ಮೈಸೂರು ಒಡೆಯರು, ಬಹಮನಿ ಸುಲ್ತಾನರು ವಕ್ಫ್ ಆಸ್ತಿಯೆಂದು ನೀಡಿದ್ದ ಭೂಮಿಯಿದ್ದು, ಅದನ್ನು ಕಂಪೌಂಡ್ ಹಾಕಿ ರಕ್ಷಿಸಲು ಕ್ರಮ ಕೈಗೊಂಡಿದ್ದೇವೆ. ಅದಕ್ಕಾಗಿ 70 ಕೋಟಿ ಸರಕಾರದಿಂದ ಬಿಡುಗಡೆ ಮಾಡಲಾಗಿದೆ. ವಕ್ಫ್ ಆಸ್ತಿಯನ್ನು ಮರಳಿ ಪಡೆಯುವಲ್ಲಿ ಕಾನೂನು ಇಲಾಖೆಯಲ್ಲಿ ವೈಫಲ್ಯ ಆಗಿರುವುದನ್ನು ಮನಗಂಡು ಸೂಕ್ತವಾಗಿ ಸ್ಪಂದಿಸಲು ತಜ್ಞ ವಕೀಲರನ್ನು ನೇಮಕ ಮಾಡಿದ್ದೇವೆ. ಅಶೋಕ್ ಹಾರ್ನಳ್ಳಿ, ಜಯದೇವ ಪಾಟೀಲರಂಥ ವಕೀಲರನ್ನು ನೇಮಕ ಮಾಡಿದ್ದು ವಕ್ಫ್ ಆಸ್ತಿ ಮರಳಿ ಸಿಕ್ಕಿದರೆ ನಮಗೆ ಸರಕಾರದಿಂದ ಅನುದಾನ ಕೇಳುವ ಸ್ಥಿತಿ ಬರುವುದಿಲ್ಲ.
ವಕ್ಫ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಿವೆ. ಬೀದರ್ ಖಬರಸ್ತಾನದಲ್ಲಿ ಏಶ್ಯಾದಲ್ಲೇ ಅತಿ ಹೆಚ್ಚು 5 ಸಾವಿರ ಎಕ್ರೆ ಆಸ್ತಿಯಿದೆ. ಆದರೆ ಇದನ್ನು ಸೂಕ್ತವಾಗಿ ಬಳಸಿಕೊಳ್ಳದೆ ನಾವು ಸೋತಿದ್ದೇವೆ. 2020ರಲ್ಲಿ ವಕ್ಫ್ ಬೋರ್ಡಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. 26 ಜಿಲ್ಲೆಗಳಿಗೆ ಕಮಿಟಿ ನೇಮಕ ಆಗಿದೆ. ಇದರಲ್ಲಿ ರಾಜಕೀಯ ಇಲ್ಲ. ವಕ್ಫ್ ಪ್ರತ್ಯೇಕ ಕಾನೂನಾಗಿದ್ದು, ಸ್ವತಂತ್ರವಾಗಿದೆ. ಇದರಲ್ಲಿ ನೇಮಕ ಮಾಡುವ ಸಂದರ್ಭದಲ್ಲಿ ರಾಜಕೀಯ ತಂದರೆ, ಸಮಸ್ಯೆ ಆಗುತ್ತದೆ. ರಾಜಕೀಯ ದೂರವಿಟ್ಟು ನಾವು ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದರು.
Mangalore Waqf board shafi saadi says Anwar Manippady is ready for any investigation.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm