ಬ್ರೇಕಿಂಗ್ ನ್ಯೂಸ್
26-09-22 05:12 pm Udupi Correspondent ಕರಾವಳಿ
ಉಡುಪಿ, ಸೆ.26: ರಾಜ್ಯದಲ್ಲಿ ನಲ್ವತ್ತು ಪರ್ಸೆಂಟ್ ಕಮಿಷನ್ ಆರೋಪ ರಾಜ್ಯದ ಬಿಜೆಪಿ ಸರಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿರುವಂತೆಯೇ ಈ ಬಗ್ಗೆ ಉಡುಪಿಯಲ್ಲಿ ಗುತ್ತಿಗೆದಾರರು ಸ್ಪಷ್ಟನೆ ಕೊಟ್ಟಿದ್ದು, ಕಮಿಷನ್ ಆರೋಪಕ್ಕೂ ತಮಗೂ ಸಂಬಂಧ ಇಲ್ಲವೆಂದು ಹೇಳಿದ್ದಾರೆ. ಆರೋಪದ ಕಾರಣಕ್ಕೆ ಗುತ್ತಿಗೆ ಕಾಮಗಾರಿಯ ಹಣ ಬಿಡುಗಡೆ ಮಾಡದೇ ಇರುವುದು ಸರಿಯಲ್ಲ. ಸೂಕ್ತ ಸಂದರ್ಭದಲ್ಲಿ ಕಾಮಗಾರಿ ಆಗದೇ ಇದ್ದರೆ ಜಿಲ್ಲೆಯ ಜನರಿಗೇ ನಷ್ಟ ಎಂದು ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ಉದಯ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಅಂತಹ ಯಾವುದೇ ಪರಿಪಾಠ ಇಲ್ಲ, 25 ವರ್ಷಗಳಿಂದ ನಾವು ಗುತ್ತಿಗೆ ವಹಿಸ್ಕೊಂಡು ಕೆಲಸ ಮಾಡುತ್ತಾ ಇದ್ದೇವೆ. ಆರೋಪದ ಕಾರಣದಿಂದ ಹಣ ಬಿಡುಗಡೆ ಆಗದಿರುವುದು, ಕಾಮಗಾರಿ ವಹಿಸದೇ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾರೆ ಅದರಿಂದ ಎಲ್ಲರಿಗೂ ನಷ್ಟ. ಅಂಥ ಸ್ಥಿತಿ ಬರಬಾರದೆಂದು ನಾವು ಸ್ಪಷ್ಟನೆ ಕೊಡುತ್ತಿದ್ದೇವೆ. ನಮ್ಮಲ್ಲಿ ನಲ್ವತ್ತು ಪರ್ಸೆಂಟ್ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ, ನಮ್ಮನ್ನೂ ಸಂಶಯದ ದೃಷ್ಟಿಯಿಂದ ನೋಡುವ ಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರನ್ನು ಸಂಶಯದಲ್ಲಿ ನಲ್ವತ್ತು ಪರ್ಸೆಂಟ್ ಬಗ್ಗೆ ಕೇಳುತ್ತಿದ್ದಾರೆ. ಇದಕ್ಕಾಗಿ ನಾವು ನಲ್ವತ್ತು ಪರ್ಸೆಂಟ್ ಕಮಿಷನ್ನಲ್ಲಿ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದರು.
ಇತ್ತೀಚೆಗೆ ರಸ್ತೆ ಸರಿಯಿಲ್ಲವೆಂದು ಸಾಮಾಜಿಕ ಕಾರ್ಯಕರ್ತರು ರಸ್ತೆಯಲ್ಲಿ ಹೊರಳಾಡಿ ಪ್ರತಿಭಟನೆ ನಡೆಸಿದ್ದರು. ಮಣಿಪಾಲದ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಇರುವ ರಸ್ತೆಯಲ್ಲಿ ಗುಂಡಿ ಬಿದ್ದಿರುವುದು ನಮಗೆಲ್ಲ ನಾಚಿಕೆ. ಆದರೆ, ಆರೋಪದ ಕಾರಣಕ್ಕೆ ರಸ್ತೆ ಸರಿಪಡಿಸದೇ ಇರುವುದು, ಹಣ ಬಿಡುಗಡೆ ಮಾಡದೇ ಇದ್ದರೆ ಅದರಿಂದ ಜಿಲ್ಲೆಗೆ ಕೆಟ್ಟ ಹೆಸರು. ಜಿಲ್ಲೆಯಲ್ಲಿ 400ರಷ್ಟು ಸಣ್ಣ ಪುಟ್ಟ ಗುತ್ತಿಗೆದಾರರು ಇದ್ದಾರೆ. ಹಣ ಬಿಡುಗಡೆ ಆಗದೇ ಇದ್ದರೆ, ದುಡಿಯುವ ವರ್ಗ, ಅವರ ಕುಟುಂಬ ವರ್ಗಕ್ಕೂ ಕಷ್ಟ ಎದುರಾಗುತ್ತದೆ. ಬೆಂಗಳೂರಿನಲ್ಲಿ ಕೆಲವು ದೊಡ್ಡ ಗುತ್ತಿಗೆಯವರು ಇಂಥ ಆರೋಪ ಮಾಡಿರಬಹುದು. ಜಿಲ್ಲೆಯ ಮಟ್ಟದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಇಂಥ ಬೆಳವಣಿಗೆ ಆಗಕೂಡದು ಎಂದು ಉದಯಕುಮಾರ್ ಶೆಟ್ಟಿ ಹೇಳಿದರು.
ಸದ್ಯಕ್ಕೆ ಉಡುಪಿಯಲ್ಲಿ ಗುತ್ತಿಗೆದಾರರ ಸಂಘ ಅಸ್ತಿತ್ವದಲ್ಲಿಲ್ಲ. ಬರ್ಖಾಸ್ತು ಆಗಿರುವುದರಿಂದ ಸಂಘದ ನೆಲೆಯಲ್ಲಿ ಒಂದಷ್ಟು ಮಂದಿ ಸೇರಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಮುನಿಯಾಲು ಉದಯ ಕುಮಾರ್ ಶೆಟ್ಟಿ ಜಿಲ್ಲೆಯ ಮಟ್ಟಿಗೆ ಪ್ರಭಾವಿ ಗುತ್ತಿಗೆದಾರರು. ಅಲ್ಲದೆ, ಕಾಂಗ್ರೆಸಿನಲ್ಲಿ ಗುರುತಿಸಿಕೊಂಡಿದ್ದು ಕಳೆದ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಸದ್ಯದ ಮಟ್ಟಿಗೆ ಬಿಜೆಪಿ ಅಧಿಕಾರದಲ್ಲಿರುವುದರಿಂದ ಬಿಜೆಪಿ ವಿರುದ್ಧ ಮಾತನಾಡುತ್ತಿಲ್ಲ. ಸಚಿವ ಸುನಿಲ್ ಕುಮಾರ್ ಸೇರಿದಂತೆ ಉಡುಪಿಯಲ್ಲಿ ಬಿಜೆಪಿ ಮುಖಂಡರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ನಲ್ವತ್ತು ಪರ್ಸೆಂಟ್ ಆರೋಪ ಬಿಜೆಪಿ ಪಾಲಿಗೆ ಮುಜುಗರ ಸೃಷ್ಟಿಸಿರುವಾಗಲೇ ಕಾಂಗ್ರೆಸಿನಲ್ಲಿರುವ ಉದಯ ಕುಮಾರ್ ಶೆಟ್ಟಿ ಈ ರೀತಿ ಸ್ಪಷ್ಟನೆ ನೀಡಿರುವುದರಿಂದ ಚುನಾವಣೆ ವೇಳೆಗೆ ಇವರು ಬಿಜೆಪಿ ಸೇರಲಿದ್ದಾರೆಯೇ ಎನ್ನುವ ಅನುಮಾನವೂ ಹುಟ್ಟಿಕೊಂಡಿದೆ.
“The 40% commission issue doesn’t not exist in Udupi. But, contractors are suffering due to the allegations of 40% commission here. More than 400 to 500 people are suffering. We will not oppose the allegations against the government, but when it comes to the matter of Udupi, none of the people's representatives and officers ask for commission,” said Udupi based politician and contractor, Muniyal Uday Kumar Shetty.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm