ಕಾರ್ಕಳ ; ಬೆಂಗಳೂರು ಬಸ್ - ಪಿಕಪ್ ಟೆಂಪೋ ಮುಖಾಮುಖಿ ಡಿಕ್ಕಿ ; ಪಿಕಪ್ ಚಾಲಕ ಸ್ಥಳದಲ್ಲೇ ಸಾವು 

13-09-22 01:04 pm       Mangalore Correspondent   ಕರಾವಳಿ

ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾಗಿ ಪಿಕಪ್ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ನ ದುಗ್ಗನರಾಯ ಚಡವು ಎಂಬಲ್ಲಿ ನಡೆದಿದೆ. 

ಕಾರ್ಕಳ, ಸೆ.13: ಖಾಸಗಿ ಬಸ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾಗಿ ಪಿಕಪ್ ಚಾಲಕ ಸ್ಥಳದಲ್ಲೇ ಸಾವಿಗೀಡಾದ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಚಿಕ್ಕಲ್ ಬೆಟ್ಟು ಕ್ರಾಸ್ ನ ದುಗ್ಗನರಾಯ ಚಡವು ಎಂಬಲ್ಲಿ ನಡೆದಿದೆ. 

ಪಿಕಪ್ ಚಾಲಕ ನೆಲ್ಲಿಕಟ್ಟೆ ನಿವಾಸಿ ಸಂತೋಷ್ ನಾಯಕ್(36) ಸಾವಿಗೀಡಾದವರು. ಕುಂದಾಪುರದಿಂದ ಹೆಬ್ರಿ ಮೂಲಕ ಕಾರ್ಕಳ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ ದುರ್ಗಾಂಬಾ ಬಸ್, ಹಿರ್ಗಾನ ಕಡೆಯಿಂದ ನೆಲ್ಲಿಕಟ್ಟೆಯ ಕಡೆಗೆ ಬರುತ್ತಿದ್ದ ಪಿಕ್ ಅಪ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಸೋಮವಾರ ರಾತ್ರಿ 9.15ಕ್ಕೆ ಘಟನೆ ನಡೆದಿದ್ದು ಅಪಘಾತದ ರಭಸಕ್ಕೆ ಪಿಕಪ್ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಚಾಲಕ ವಾಹನದಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. 

ಬಸ್ ಚಾಲಕ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ತಿರುವಿನಲ್ಲಿ ಬಸ್ ನಿಯಂತ್ರಣಕ್ಕೆ ಸಿಗದೆ, ನೇರವಾಗಿ ಪಿಕಪ್ ಗೆ ಅಪ್ಪಳಿಸಿದೆ ಎನ್ನಲಾಗುತ್ತಿದೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore Bangalore Durgamba bus jeep accident,  pickup driver dies on spot in Karkala. The deceased has been identified as Santosh Nayak (36).