ಕಮರಿಗೆ ಉರುಳಿದ ಆಟೋ ರಿಕ್ಷಾ ; ಸೋಮೇಶ್ವರದ ಆಟೋ ಚಾಲಕ ಸ್ಥಳದಲ್ಲೇ ಸಾವು

13-09-22 09:20 am       Mangaluru Correspondent   ಕರಾವಳಿ

ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಉಳ್ಳಾಲ, ಸೆ.13: ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70) ಮೃತ ದುರ್ದೈವಿ. ಸೋಮೇಶ್ವರ ದೇವಸ್ಥಾನದ ಬಳಿಯ ಆಟೋ ಪಾರ್ಕಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಆನಂದ್ ಅವರು ಸೋಮವಾರ ರಾತ್ರಿ ಬಾಡಿಗೆಗೆ‌ ತೆರಳಿ ಹಿಂತಿರುಗುತ್ತಿದ್ದ ವೇಳೆ ಅವಘಡ ನಡೆದಿದೆ. ರಾತ್ರಿ 8.45 ರ ವೇಳೆಗೆ ಪಾನೀರು ಅಸ್ಸಿಸಿ ಶಾಲೆ ಬಳಿ ಆನಂದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಉರುಳಿ ಕಮರಿಗೆ ಬಿದ್ದಿದೆ. ಆನಂದ್ ಅವರ ತಲೆಗೆ ಆಟೋ ರಿಕ್ಷಾದ ಕಬ್ಬಿಣದ ಸಲಾಕೆಗಳ ಏಟು ತಗುಲಿ ಸಾವು ಸಂಭವಿಸಿರುವುದಾಗಿ ತಿಳಿದುಬಂದಿದೆ.

ಮೃತ ಆನಂದ್ ಅವರು ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಎರಡು ಬ್ರಹ್ಮ ಕಲಶೋತ್ಸವದಲ್ಲಿ ನೀರಿನ ವ್ಯವಸ್ಥೆಯನ್ನ ಅಚ್ಚು ಕಟ್ಟಾಗಿ ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mangalore 70 year old Auto driver killed after auto topples and falls into ditch in Ullal. The deceased has been identifed as Anand from someshwara  auto park.