ಬ್ರೇಕಿಂಗ್ ನ್ಯೂಸ್
12-09-22 04:49 pm Mangalore Correspondent ಕರಾವಳಿ
ಮಂಗಳೂರು, ಸೆ.12 : ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿದ್ದಾರೆ. ಹಿಂದೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದರು. ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಇದ್ದು ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಒಬ್ಬ ಮಹಾನ್ ದಾರ್ಶನಿಕನ ಜಯಂತಿಯನ್ನು ಜಿಲ್ಲೆಗೆ ಸೀಮಿತಗೊಳಿಸಿದ್ದು ಬಿಜೆಪಿ ನಾರಾಯಣ ಗುರುಗಳಿಗೆ ಮಾಡಿರುವ ಸರಣಿ ಅಪಮಾನ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಕಳೆದ ಎರಡು ವರ್ಷಗಳಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ, ಬೊಮ್ಮಾಯಿ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಲಿಲ್ಲ. ಈ ಬಾರಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡುವುದಿದ್ದರೆ ಮುಖ್ಯಮಂತ್ರಿ ನೇತೃತ್ವದಲ್ಲೇ ಮಾಡಬೇಕಿತ್ತು. ಜನರ ಮಧ್ಯೆ ಮಾಡಬೇಕಿದ್ದರೆ ಮುಖ್ಯಮಂತ್ರಿ ಜನರ ನಡುವೆ ಬರಬೇಕಿತ್ತು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಜನಸ್ಪಂದನ ಮಾಡುವಲ್ಲಿ ಬಿಝಿಯಾಗಿದ್ದರು ಎಂದು ಹೇಳಿದರು.

ಕಳೆದ ಬಾರಿ ಗಣರಾಜ್ಯ ಸಂದರ್ಭದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ರಿಜೆಕ್ಟ್ ಮಾಡಿದ್ದರು. ಆನಂತರ ಹತ್ತನೇ ತರಗತಿ ಪಠ್ಯದಲ್ಲಿ ನಾರಾಯಣ ಗುರು ಪಠ್ಯವನ್ನೇ ಹೊರಗಿಟ್ಡಿದ್ದರು. ಈಗ ಗುರುಗಳ ಜಯಂತಿ ಕಾರ್ಯಕ್ರಮವನ್ನೆ ರಾಜಧಾನಿಯಿಂದ ಹೊರಗೆ ಇರಿಸಿದ್ದಾರೆ. ಈ ಬಾರಿ ನಾರಾಯಣ ಗುರು ಜಯಂತಿ ಸಂದರ್ಭದಲ್ಲೇ ಬಿಜೆಪಿ ಸರಕಾರ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದರೂ, ಅಲ್ಲಿ ಕನಿಷ್ಠ ಹೆಸರನ್ನೂ ಉಲ್ಲೇಖಿಸಿಲ್ಲ. ದೇಶ ಕಂಡ ದೊಡ್ಡ ದಾರ್ಶನಿಕರನನ್ನು ಕಡೆಗಣಿಸಿ ಒಂದು ಜಿಲ್ಲೆಗೆ ಸೀಮಿತಗೊಳಿಸಿರುವುದನ್ನು ಖಂಡಿಸುತ್ತೇವೆ. ಕೆಲವರು ಇದನ್ನು ಸಮರ್ಥನೆ ಮಾಡಿದ್ದರೆ ಅದು ಗುರುಗಳಿಗೆ ಮಾಡಿದ ಅಪಮಾನ.
ಕರಾವಳಿ ಭಾಗ ನಾರಾಯಣ ಗುರುಗಳಿಗೆ ದೊಡ್ಡ ಮಟ್ಟಿನ ಬೆಂಬಲಿಗರನ್ನು ಹೊಂದಿರುವ ಪ್ರದೇಶ. ಕೆಲವರ ಮನಸ್ಸಲ್ಲಿ ಅಂದುಕೊಂಡ ರೀತಿ ಕಾರ್ಯಕ್ರಮ ಮಾಡಿರುವುದು ಸರಿಯಲ್ಲ. ಬೊಮ್ಮಾಯಿ ಸ್ವತಃ ಕಳೆದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಪಾಲ್ಗೊಳ್ಳದೇ ಇರುವುದರ ಅರ್ಥ ಏನು ಅಂತ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಬಗ್ಗೆ ತಾನು ಕೊಟ್ಟ ಮನವಿ ಮೇರೆಗೆ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿತ್ತು. ಆಗಿನ ಸಚಿವೆ ಉಮಾಶ್ರೀಯವರ ಮೂಲಕ ಆದೇಶ ಮಾಡಿಸಲಾಗಿತ್ತು. ಕರಾವಳಿಯ ನಾರಾಯಣ ಗುರುಗಳ ಅನುಯಾಯಿಗಳು, ಸಮಸ್ತ ಶೋಷಿತ ವರ್ಗದ ಪರವಾಗಿ ಜಯಂತಿ ಕಾರ್ಯಕ್ರಮ ಆಚರಣೆಗೆ ತರಲಾಗಿತ್ತು ಎಂದು ರಮಾನಾಥ ರೈ ಹೇಳಿದರು.

ಅಲ್ಲದೆ, ಸಮಾಜದಲ್ಲಿದ್ದ ಮೇಲು ಕೀಳು, ಅಸ್ಪೃಶ್ಯತೆ ತೊಡೆದು ಹಾಕುವ ನಿಟ್ಟಿನಲ್ಲಿ ನಾರಾಯಣ ಗುರುಗಳು ನೋವಿನ ಕಣ್ಣೀರಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ, ಸಮಸ್ತ ಹಿಂದುಳಿದ ವರ್ಗದವರ ಪರವಾಗಿ ಶಿವಲಿಂಗ ಸ್ಥಾಪನೆ ಮಾಡಿದ್ದರು. ಕುದ್ರೋಳಿ ನಾರಾಯಣ ಗುರುಗಳಿಂದ ಸ್ಥಾಪಿತ ಕ್ಷೇತ್ರ. ಅಲ್ಲಿ ರಾಜ್ಯ ಮಟ್ಟದ ನಾರಾಯಣ ಗುರು ಜಯಂತಿ ಮಾಡುತ್ತಿದ್ದರೆ ಹೆಚ್ಚು ಅರ್ಥ ಬರುತ್ತಿತ್ತು. ಆದರೆ ಈ ರೀತಿ ಅಪಮಾನ ಮಾಡಿರುವುದು ಸರಿಯಲ್ಲ. ಕೇರಳದಿಂದ ಬಂದು ಇಲ್ಲಿ ತಳವೂರಿದ ಮಂಗಳೂರಿನ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕಾಂಗ್ರೆಸ್ ಸರಕಾರ ಇದ್ದಾಗ ಪಾಲಿಕೆಯಲ್ಲಿ ನಿರ್ಣಯ ಮಾಡಿದ್ದೆವು. ಆದರೆ ಬಿಜೆಪಿ ಸರಕಾರ ಅದಕ್ಕೂ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ 60 ಸಾವಿರದ ಬೆಲ್ಟ್ ಹಾಕಿದ್ರೆ ತಪ್ಪು ಕಂಡಿಲ್ಲವೇ ?
ರಾಹುಲ್ ಗಾಂಧಿ ಹಾಕಿದ್ದ ಟೀ ಶರ್ಟ್ ಬಗ್ಗೆ ಬಿಜೆಪಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವಕ್ಕೂ ಶ್ರೀಮಂತವಾಗಿದ್ದ ಮೋತಿಲಾಲ ನೆಹರು ಕುಟುಂಬದಿಂದ ಬಂದವರು. ಅವರೇನು ತಾನು ಚೌಕಿದಾರ, ಚಾಯ್ ವಾಲ ಅಂತ ಹೇಳಿಕೊಂಡಿಲ್ಲ. ಹತ್ತು ಲಕ್ಷದ ಸೂಟನ್ನೂ ಹಾಕಿಲ್ಲ. ವಿಜಯೇಂದ್ರ 60 ಸಾವಿರದ ಬೆಲ್ಟ್ ಹಾಕಿದ್ದಾರೆ ಅಂತ ಯಾರೋ ಒಬ್ಬರು ಹೇಳುತ್ತಿದ್ದರು. ಹಾಗಾದ್ರೆ, 40 ಸಾವಿರದ ಶರ್ಟ್ ಮೇಲೋ, ವಿಜಯೇಂದ್ರ ಹಾಕ್ಕೊಂಡ ಬೆಲ್ಟ್ ಮೇಲೋ ಎಂದು ಕೇಳಬೇಕಾಗಿದೆ ಎಂದು ಪ್ರಶ್ನೆ ಮಾಡಿದರು.
Narayana Guru is continuously put to shame by BJP slams Ramanath Rai in Mangalore.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 12:06 pm
HK News Desk
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
15-11-25 12:12 pm
Mangalore Correspondent
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm