ನೀಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ ಬಂದಿದ್ದಕ್ಕೆ ನದಿಗೆ ಹಾರಿ ಸಾವಿಗೆ ಶರಣಾದ ಪಿಯುಸಿ ವಿದ್ಯಾರ್ಥಿ

09-09-22 08:25 pm       Udupi Correspondent   ಕರಾವಳಿ

ನೀಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕು ಬಂದ ಕಾರಣಕ್ಕೆ ನೊಂದುಕೊಂಡ ಪಿಯುಸಿ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೇರಿಕುದ್ರು ಸೇತುವೆಯಲ್ಲಿ ನಡೆದಿದೆ.

ಕುಂದಾಪುರ, ಸೆ.9: ನೀಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕು ಬಂದ ಕಾರಣಕ್ಕೆ ನೊಂದುಕೊಂಡ ಪಿಯುಸಿ ವಿದ್ಯಾರ್ಥಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೇರಿಕುದ್ರು ಸೇತುವೆಯಲ್ಲಿ ನಡೆದಿದೆ.

ಸಾಯೀಶ್ ಶೆಟ್ಟಿ(18) ಮೃತ ವಿದ್ಯಾರ್ಥಿಯಾಗಿದ್ದು, ಗುರುವಾರ ಸಂಜೆ ಹೇರಿಕುದ್ರು ಸೇತುವೆ ಬಳಿಗೆ ಸೈಕಲಿನಲ್ಲಿ ಬಂದಿದ್ದ ಯುವಕ ನದಿಗೆ ಹಾರಿದ್ದಾನೆ. ಯುವಕ ನದಿಗೆ ಹಾರಿದ್ದನ್ನು ಸ್ಥಳೀಯರು ನೋಡಿ ಹುಡುಕಾಟ ನಡೆಸಿದ್ದಾರೆ. ಪೊಲೀಸರ ಗಮನಕ್ಕೂ ತಂದಿದ್ದರು.

ರಾತ್ರಿ ಮಳೆ ಇದ್ದುದರಿಂದ ನದಿಯಲ್ಲಿ ನೀರು ಹೆಚ್ಚಿದ್ದರಿಂದ ಯುವಕ ಕೊಚ್ಚಿಕೊಂಡು ಹೋಗಿದ್ದ. ಶುಕ್ರವಾರ ಬೆಳಗ್ಗೆ ನಾವುಂದ ಎಂಬಲ್ಲಿ ಸಾಯೀಶ್ ಶವ ಪತ್ತೆಯಾಗಿದೆ. ಶಿವಮೊಗ್ಗದಲ್ಲಿ ಪಿಯುಸಿ ಕಲಿಯುತ್ತಿದ್ದ ಯುವಕ ರಜೆಯಲ್ಲಿ ಊರಿಗೆ ಬಂದಿದ್ದ. ನೀಟ್ ಪರೀಕ್ಷೆ ಬರೆದು ಉತ್ತಮ ಮಾರ್ಕಿನ ನಿರೀಕ್ಷೆಯಲ್ಲಿದ್ದ. ಆದರೆ ಕಡಿಮೆ ಮಾರ್ಕ್ ಬಂದಿದ್ದರಿಂದ ನಿರಾಸೆಗೊಂಡು ಸಾವಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

The mortal remains of Sayeesh Shetty (18), who jumped into river from Herikudru bridge on Thursday after he got depressed over getting low marks in NEET examination, were found on Friday September 9 morning at Navunda.