ಬ್ರೇಕಿಂಗ್ ನ್ಯೂಸ್
31-08-22 10:48 pm Mangalore Correspondent ಕರಾವಳಿ
ಉಳ್ಳಾಲ, ಆ.31: ರೋಗಿಗಳೆಂದು ನಟಿಸಲು ಗುಲ್ಬರ್ಗ ಮೂಲದ 100 ಕೂಲಿ ಕಾರ್ಮಿಕರಿಗೆ ತಲೆಗೆ 900 ರೂಪಾಯಿ ಕೊಡೋದಾಗಿ ನಂಬಿಸಿ ತಮ್ಮ ಕೆಲಸ ಮುಗಿದ ಮೇಲೆ ಬಾಕಿ ಉಳಿದ 5 ಲಕ್ಷವನ್ನ ಕೊಡದೆ ಸತಾಯಿಸಿದ ಕಣಚೂರು ಆಸ್ಪತ್ರೆಯ ವಿರುದ್ಧ ಕ್ರಮಕ್ಕಾಗಿ ಉಳ್ಳಾಲ ಠಾಣೆಯಲ್ಲಿ ಕೂಲಿ ಕಾರ್ಮಿಕರು ಜಮಾಯಿಸಿದ ಘಟನೆ ನಡೆದಿದೆ.
ಮಂಗಳೂರಿನ ಕಾವೂರಿನಲ್ಲಿ ಬಿಡಾರ ಹೂಡಿರುವ ಗುಲ್ಬರ್ಗ ಜಿಲ್ಲೆ ಮೂಲದ 100 ಮಂದಿ ಕೂಲಿ ಕಾರ್ಮಿಕರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ವಿರುದ್ಧ ವಂಚನೆಯ ಆರೋಪ ಮಾಡಿದ್ದಾರೆ. ಕಣಚೂರು ಆಸ್ಪತ್ರೆ ಪರ ಮಧ್ಯವರ್ತಿ ಪ್ರಸಾದ್ ಎಂಬ ವ್ಯಕ್ತಿ ಕಾವೂರಲ್ಲಿ ಬಿಡಾರ ಹೂಡಿರುವ ಗುಲ್ಬರ್ಗ ಮೂಲದ ಲಕ್ಷ್ಮಿ ಮತ್ತು ಬಸವರಾಜ್ ಎಂಬವರನ್ನ ಸಂಪರ್ಕಿಸಿ ಕಣಚೂರು ಆಸ್ಪತ್ರೆಯಲ್ಲಿ ಇನ್ಸ್ ಪೆಕ್ಷನ್ ಸಂದರ್ಭ ರೋಗಿಗಳೆಂದು ಮಲಗಲು ನೂರು ಮಂದಿ ಕೂಲಿ ಕಾರ್ಮಿಕರನ್ನ ಕರೆಸಿ ಕೊಂಡಿದ್ದನಂತೆ. ಆತನ ಸೂಚನೆಯಂತೆ ಕಾವೂರಲ್ಲಿ ಬಿಡಾರ ಹೂಡಿದ್ದ ಗುಲ್ಬರ್ಗ ಮೂಲದ 100 ಮಂದಿ ಕೂಲಿ ಕಾರ್ಮಿಕರನ್ನ ಲಕ್ಷ್ಮಿ ಮತ್ತು ಬಸವರಾಜ್ ಅವರು ಆ.1ರಂದು ಕಣಚೂರು ಆಸ್ಪತ್ರೆಯಲ್ಲಿ ರೋಗಿಗಳೆಂದು ಮಲಗಲು ಹೇಳಿದ್ದರು ಎನ್ನಲಾಗಿದೆ.
ದಿವಸಕ್ಕೆ 900 ರೂ. ಸಿಗುವ ಆಸೆಯಿಂದ 100 ಜನ ಕೂಲಿ ಕಾರ್ಮಿಕರು ಆಗಸ್ಟ್ ಒಂದರಿಂದ 12 ದಿನಗಳ ಕಾಲ ಆಸ್ಪತ್ರೆಯಲ್ಲಿ ರೋಗಿಗಳಂತೆ ಮಲಗಿದ್ದಾಗಿ ಗುಲ್ಬರ್ಗ ಮೂಲದ ಮಲ್ಲಮ್ಮ ಹೇಳಿದ್ದಾರೆ. ತಮ್ಮನ್ನ ರೋಗಿಗಳೆಂದು ಬಳಸಿದ್ದಕ್ಕೆ ಆಸ್ಪತ್ರೆಯವರು ನೀಡಿದ್ದ ಐಡಿ ಕಾರ್ಡ್ ಗಳು ಇತರ ದಾಖಲೆಗಳನ್ನ ಮಾಧ್ಯಮಕ್ಕೆ ನೀಡಿದ್ದಾರೆ. ಆಸ್ಪತ್ರೆಯಲ್ಲಿ 12 ದಿವಸ ಮಲಗಿದ್ದು ನಂತರ ಆಸ್ಪತ್ರೆ ಸಿಬ್ಬಂದಿ ನಮ್ಮನ್ನ ಹೊರ ಕಳಿಸಿದ್ದು, ಮಧ್ಯವರ್ತಿ ಪ್ರಸಾದ್ ಎಂಬಾತ 100 ಜನರಿಗೆ 4 ಲಕ್ಷ ನೀಡಿದ್ದು ಬಾಕಿ ಉಳಿದ 5 ಲಕ್ಷವನ್ನ ಆಗಸ್ಟ್ 31ರಂದು ನೀಡೋದಾಗಿ ಹೇಳಿದ್ದ. ಅದರಂತೆ ಆಗಸ್ಟ್ 31ರ ಬುಧವಾರ ಕೂಲಿ ಕಾರ್ಮಿಕರು ಬಾಕಿ ಉಳಿದ 5 ಲಕ್ಷ ಹಣವನ್ನ ಕೇಳಲು ಕಣಚೂರು ಆಸ್ಪತ್ರೆಗೆ ತೆರಳಿದಾಗ ಎಲ್ಲರನ್ನ ಹೊರದಬ್ಬಿ ಗೇಟ್ ಹಾಕಿದ್ದಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರು ದಿಕ್ಕು ಕಾಣದೆ ಕೊಣಾಜೆ ಠಾಣೆಗೆ ದೂರು ನೀಡಲು ಹೋಗಿದ್ದು, ಅಲ್ಲಿ ಕಣಚೂರು ಆಸ್ಪತ್ರೆ ಉಳ್ಳಾಲ ಠಾಣಾ ವ್ಯಾಪ್ತಿಗೆ ಬರೋದೆಂದು ಪೊಲೀಸರು ತಿಳಿಸಿದ್ದಾರೆ. ಉಳ್ಳಾಲಕ್ಕೆ ತೆರಳಿದ ಸಂತ್ರಸ್ತ ಕೂಲಿ ಕಾರ್ಮಿಕರನ್ನ ಠಾಣೆಯ ಪಿಎಸ್ ಐ ಪ್ರದೀಪ್ ಅವರು ಮಾನವೀಯತೆ ತೋರದೆ ಹೀನಾಯ ರೀತಿಯಲ್ಲಿ ದಬಾಯಿಸಿದ್ದಾರೆ. ಅಲ್ಲದೆ ಇದೆಲ್ಲ ಸಿವಿಲ್ ಮ್ಯಾಟರ್, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪೊಲೀಸ್ ವಾಹನದ ಸೈರನ್ ಹೊಡೆದು ದೂರು ನೀಡಲು ಬಂದ ಬಡಪಾಯಿ ಕಾರ್ಮಿಕರನ್ನ ಠಾಣೆಯಿಂದ ಹೊರಗೋಡಿಸಿದ್ದಾರೆ.
ದಿಕ್ಕು ಕಾಣದೆ ಉಳ್ಳಾಲದಲ್ಲಿ ರಸ್ತೆ ಬದಿ ಕುಳಿತಿದ್ದ ಕೂಲಿ ಕಾರ್ಮಿಕರನ್ನ ಉಳ್ಳಾಲದ ಸಮಾಜ ಸೇವಕರೋರ್ವರು ಬುಧವಾರ ರಾತ್ರಿ ಉಳ್ಳಾಲ ದರ್ಗಾದಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದಾರೆ. ಕಣಚೂರು ಆಸ್ಪತ್ರೆ ಮೂಲಗಳು ಕೂಲಿ ಕಾರ್ಮಿಕರ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದು ಇದೆಲ್ಲ ಬ್ಲಾಕ್ ಮೇಲ್ ಅಂತ ಹೇಳಿ ಕೈ ತೊಳೆದುಕೊಂಡಿದೆ. 5 ಲಕ್ಷ ಬಾಕಿ ಅಂದರೆ 100 ಜನರಲ್ಲಿ ಒಂದು ತಲೆಗೆ 5000 ರೂಪಾಯಿ ಬಾಕಿ ಇದ್ದಂತೆ. 5 ಸಾವಿರ ರೂಪಾಯಿಗಾಗಿ ಠಾಣೆಯಲ್ಲಿ ಪೊಲೀಸರ ನಿಂದನೆ ಸಹಿಸಿ ಹೋರಾಟ ನಡೆಸುವ ಸ್ಥಿತಿ ಕೂಲಿ ಕಾರ್ಮಿಕರದ್ದು. ಹಸು ಗೂಸುಗಳನ್ನ ಹಿಡಿದು ತಮ್ಮ ಹಣವನ್ನ ನೀಡುವಂತೆ ಉಳ್ಳಾಲ ಪೊಲೀಸರಿಗೆ ಒತ್ತಾಯಿಸುತ್ತ ಕುಳಿತಿದ್ದಾರೆ. ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ನೂರಾರು ರೋಗಿಗಳು ಇದ್ದಾರೆಂದು ತೋರಿಸಲು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರನ್ನು ರೋಗಿಗಳಂತೆ ಮಲಗಿಸುವುದು ಮಂಗಳೂರಿನಲ್ಲಿ ಮಾಮೂಲಿ ಅನ್ನುವಂತಾಗಿದೆ.
Mangalore Poor coolie families fight for justice against Kanachur Hospital in Derlakatte.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 12:56 pm
Mangalore Correspondent
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm