ಬ್ರೇಕಿಂಗ್ ನ್ಯೂಸ್
31-08-22 10:02 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 31 : ಮಂಗಳೂರಿನಲ್ಲಿ ಆಯೋಜಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿಸಲು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಇಡೀ ಆಡಳಿತ ಯಂತ್ರವನ್ನೇ ಬಳಸಿಕೊಳ್ಳಲಾಗುತ್ತಿದ್ದು, ಜಿಲ್ಲಾಡಳಿತವೇ ಮುಂದೆ ನಿಂತು ಜನರನ್ನು ಪ್ರಧಾನಿ ಸಭೆಗೆ ಬರುವಂತೆ ಬಲಪ್ರಯೋಗ ಮಾಡುತ್ತಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಆರೋಪಿಸಿದೆ.
ನರೇಂದ್ರ ಮೋದಿಯವರ ಕಾರ್ಯಕ್ರಮಗಳು ನೇರವಾಗಿ ಜನಸಾಮಾನ್ಯರಿಗೆ ಸಂಬಂಧ ಪಟ್ಟಿದ್ದಲ್ಲ. ಬಂದರು ಹಾಗೂ ಎಮ್ಆರ್ ಪಿಎಲ್ ನ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಜೋಡಿಸಿ ಪರೋಕ್ಷವಾಗಿ ಬಿಜೆಪಿಯ ಸಾರ್ವಜನಿಕ ಸಭೆಯನ್ನು ನಡೆಸಲಾಗುತ್ತಿದೆ. ಗೋಲ್ಡ್ ಫಿಂಚ್ ಮೈದಾನ ದುರಸ್ತಿಗೊಳಿಸಲು, ಪೆಂಡಾಲ್, ವೇದಿಕೆ ನಿರ್ಮಾಣ ಸಹಿತ ಕಾರ್ಯಕ್ರಮದ ಸಿದ್ಧತೆಗೆ ಜನರ ತೆರಿಗೆಯ ಹಣದಿಂದ ಹತ್ತಾರು ಕೋಟಿ ರೂಪಾಯಿಗಳನ್ನು ಎಗ್ಗಿಲ್ಲದೆ ಬಳಸಲಾಗುತ್ತಿದೆ. ಬಿಜೆಪಿ ಸರಕಾರದ ವಿರುದ್ಧದ ಅಲೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಬಲವಾಗಿ ಬೀಸುತ್ತಿರುವುದರಿಂದ ಜನ ಸೇರದಿರುವ ಸಾಧ್ಯತೆಗಳನ್ನು ಮನಗಂಡು ಎರಡೂ ಜಿಲ್ಲೆಗಳ ಇಡೀ ಆಡಳಿತ ಯಂತ್ರವನ್ನು ಪ್ರಧಾನಿಗಳ ಸಭೆಗೆ ಜನ ಸೇರಿಸಲು ನಿರ್ಲಜ್ಜವಾಗಿ ಬೀದಿಗಿಳಿಸಲಾಗಿದೆ. ಸರಕಾರದ ಎಲ್ಲಾ ಇಲಾಖೆಗಳಲ್ಲಿ ದುಡಿಯುತ್ತಿರುವವರು, ಬ್ಯಾಂಕ್ ನೌಕರರಿಗೂ ಜನ ಸೇರಿಸುವುದು ಮತ್ತು ಸ್ವತಃ ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ.
ಸ್ವಸಹಾಯ ಗುಂಪುಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಖುದ್ದು ಹಾಜರಿರುವಂತೆ ಸೂಚನೆ ಹೊರಡಿಸಲಾಗಿದೆ. ವೃದ್ದರು, ಅನಾರೋಗ್ಯ ಪೀಡಿತರು, ಅಂಗವಿಕಲರು ಎಂದು ನೋಡದೆ ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಪಂಚಾಯತ್ ಮಟ್ಟದಿಂದಲೇ ಕಡ್ಡಾಯ ಹಾಜರಿರುವಂತೆ ನೋಡಿಕೊಳ್ಳಲು ಸುತ್ತೋಲೆಗಳನ್ನು ಹೊರಡಿಸಿರುವುದು, ಫಲಾನುಭವಿಗಳ ಜೊತೆಗೆ ಸಾರ್ವಜನಿಕರನ್ನೂ ಕರೆತರಲು ಪಂಚಾಯತ್ ಸಿಬ್ಬಂದಿಗಳಿಗೆ ಟಾರ್ಗೆಟ್ ಗಳನ್ನು ಫಿಕ್ಸ್ ಮಾಡಿರುವುದು, ವಾಹನಗಳನ್ನು ಒದಗಿಸಿರುವುದು ಎಂದೂ ಕಂಡುಕೇಳರಿಯದ ವಿದ್ಯಮಾನ. ಒಟ್ಟು ಎಲ್ಲಾ ವಿಭಾಗಗಳನ್ನು ಬೆದರಿಸಿ ಕಾರ್ಯಕ್ರಮಕ್ಕೆ ಬರುವಂತೆ ಮಾಡುತ್ತಿರುವುದು ಕಣ್ಣಿಗೆ ಕಾಣುವಂತೆ ನಡೆಯುತ್ತಿದೆ. ಸ್ವತಃ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಪತ್ರಿಕಾಗೋಷ್ಟಿ ನಡೆಸಿ ಒಂದೂವರೆ ಲಕ್ಷ ಜನ ಸೇರುತ್ತಾರೆ ಎಂದು ಘೋಷಿಸಿರುವುದು ಆಡಳಿತ ಯಂತ್ರದ ದುರುಪಯೋಗ ನಡೆಯುತ್ತಿರುವುದಕ್ಕೆ ಪ್ರಬಲ ಸಾಕ್ಷಿ.
ಫಲಾನುಭವಿಗಳ ಯಾವುದೇ ಹೊಸ ಯೋಜನೆಗಳು ಇಲ್ಲದ, ಖಾಸಗಿ ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಹೊಂದಿರುವ ಬಂದರಿನ ಸಾಮಾನ್ಯ ಬರ್ತ್ ಉದ್ಘಾಟನೆ ಕಾರ್ಯಕ್ರಮಕ್ಕೆ ಸರಕಾರದ ಯೋಜನೆಗಳ ಹಳೆಯ ಫಲಾನುಭವಿಗಳ ಸಹಿತ ಎಲ್ಲಾ ವಿಭಾಗದ ಜನರನ್ನು ಬಲ ಪ್ರಯೋಗಿಸಿ ಮೈದಾನಕ್ಕೆ ಕರೆತರುವ ಅಗತ್ಯ ಏನಿದೆ ? ಮಳೆ ಸಂತ್ರಸ್ತರಿಗೆ ಪರಿಹಾರಗಳು ಸರಿಯಾಗಿ ವಿತರಣೆ ಆಗದೆ ಜನ ಸಂಕಷ್ಟದಲ್ಲಿ ಇರುವಾಗ ಅವರನ್ನು ಅಣಕಿಸುವಂತೆ ಹತ್ತಾರು ಕೋಟಿ ರೂಪಾಯಿ ಸುರಿದು ಸರಕಾರ ಪ್ರಧಾನಿಗಳ ಸಭೆ ನಡೆಸುವ ಔಚಿತ್ಯ ಏನು ?ಪ್ರಧಾನಿಗಳು ತುಳುನಾಡಿನ ಜನರ ಯಾವ ಪ್ರಧಾನ ಬೇಡಿಕೆಗಳನ್ನು ಈಡೇರಿಸುವ ಘೋಷಣೆ ಇಲ್ಲಿ ಮಾಡಲಿದ್ದಾರೆ ? ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿ ಯಾವುದಾದರು ಯೋಜನೆಗಳು ಘೋಷಣೆ ಆಗಲಿದೆಯೆ ?
ಎಮ್ಆರ್ ಪಿಎಲ್ ಸಹಿತ ಅವಿಭಜಿತ ಜಿಲ್ಲೆಯ ಉದ್ಯಮಗಳಲ್ಲಿ ಸ್ಥಳೀಯರ ಉದ್ಯೋಗಾವಕಾಶಗಳ ಕುರಿತು, ರಾಷ್ಟ್ರೀಯ ಹೆದ್ದಾರಿ, ಟೋಲ್ ಗೇಟ್ ಸಮಸ್ಯೆಗಳ ಕುರಿತು ಪ್ರಧಾನಿ ಯಾವುದಾದರು ಪರಿಹಾರ ಒದಗಿಸುವ ಮಾತುಗಳನ್ನು ಆಡುತ್ತಾರಾ ? ಪ್ರಧಾನಿಗಳು ಲೋಕಾರ್ಪಣೆ ಮಾಡಲಿರುವ ಬಂದರಿನ ಬರ್ತ್, ಎಮ್ಅರ್ ಪಿಎಲ್ ನ 655 ಕೋಟಿ ರೂಪಾಯಿ ವೆಚ್ಚದ ನೀರು ಶುದ್ದೀಕರಣ ಘಟಕಗಳಾದರೂ ಸೃಷ್ಟಿ ಮಾಡಿರುವ ಉದ್ಯೋಗಗಳು ಎಷ್ಟು? ಅದರಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗಗಳು ಲಭ್ಯ ಆಗಲಿವೆ ಎಂಬುದನ್ನಾದರು ಪ್ರಧಾನಿ ಭಾಷಣದಲ್ಲಿ ಹೇಳಿಸಲು ಸಾಧ್ಯವೇ ?
ಹಾಗಾಗಿದ್ದರೆ ಜನರು ಸ್ವಯಂ ಪ್ರೇರಣೆಯಿಂದ ಸಭೆಗೆ ಆಗಮಿಸುತ್ತಿದ್ದರು. ಜನರ ಬೇಡಿಕೆಗಳಿಂದ ಅದರಲ್ಲೂ ತುಳುನಾಡಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದರಲ್ಲಿ ಉದ್ದೇಶಪೂರ್ವಕವಾಗಿ ಸೋತಿರುವ ಬಿಜೆಪಿ ಸರಕಾರ ಹಾಗೂ ಜನಪ್ರತಿನಿಧಿಗಳಿಂದ ಜನರು ಸಹಜವಾಗಿಯೇ ದೂರವಾಗಿದ್ದಾರೆ. ಕಳೆದು ಹೋಗಿರುವ ವರ್ಚಸ್ಸನ್ನು ಸರಿಪಡಿಸಲು ಬಿಜೆಪಿ ಪರಿವಾರ ಈಗ ಪ್ರಧಾನಿ ನರೇಂದ್ರ ಮೋದಿ ಸಭೆ ಯಶಸ್ಸುಗೊಳಿಸುವ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಅದಕ್ಕಾಗಿ ಎಂದೂ ಕಂಡು ಕೇಳರಿಯದ ರೀತಿಯಲ್ಲಿ ಜಿಲ್ಲಾಡಳಿತಗಳನ್ನು ಬಳಸಿಕೊಳ್ಳುತ್ತಿದೆ. ಜನರನ್ನು ಬಲವಂತದಿಂದ ಸಭೆಯಲ್ಲಿ ಕೂಡಿಹಾಕಲು ಯತ್ನಿಸುತ್ತಿದೆ, ಇದು ಖಂಡನೀಯ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Modi in Mangalore, Bjp has lost its power in state its trying to console people slams DFYI
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 02:32 pm
Mangalore Correspondent
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm