ಸುಳ್ಯದಲ್ಲಿ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ ; ಒಂಬತ್ತು ವಿದ್ಯಾರ್ಥಿಗಳ ಬಂಧನ 

31-08-22 07:11 pm       Mangalore Correspondent   ಕರಾವಳಿ

ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಗುಡ್ಡದಲ್ಲಿ ಪತ್ತೆಯಾಗಿ ಥಳಿತಕ್ಕೊಳಗಾದ ಪ್ರಕರಣದಲ್ಲಿ ಸುಳ್ಯ ಪೊಲೀಸರು ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. 

ಸುಳ್ಯ, ಆಗಸ್ಟ್ 31 : ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಗುಡ್ಡದಲ್ಲಿ ಪತ್ತೆಯಾಗಿ ಥಳಿತಕ್ಕೊಳಗಾದ ಪ್ರಕರಣದಲ್ಲಿ ಸುಳ್ಯ ಪೊಲೀಸರು ಒಂಬತ್ತು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. 

ಥಳತಕ್ಕೊಳಗಾದ ಮಹಮ್ಮದ್ ಸನೀಫ್ ಎಂಬ ಯುವಕ ಸುಳ್ಯ ಠಾಣೆಯಲ್ಲಿ ದೂರು ನೀಡಿದ್ದು ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಐದು ಜನ ಹಲ್ಲೆ ನಡೆಸಿದವರು ಮತ್ತು ನಾಲ್ವರು ಅದಕ್ಕೆ ಸಹಕರಿಸಿದವರೆಂದು ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ದೀಕ್ಷಿತ್, ಮೋಕ್ಷಿತ್, ತನುಜ್, ಅಕ್ಷಯ್, ಪ್ರಜ್ವಲ್ ಹಲ್ಲೆ ನಡೆಸಿದವರಾಗಿದ್ದು ಚರಣ್, ಧನುಷ್, ನಿಶ್ಚಯ್, ಪವನ್ ಸಹಕರಿಸಿದವರೆಂದು ಬಂಧನ ಮಾಡಲಾಗಿದೆ. ‌

ಬಂಧಿತರು ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ, ಬಿಕಾಂ ಓದುತ್ತಿದ್ದವರು. ನೀನು ಹಿಂದು ಹುಡುಗಿ ಜೊತೆಗೆ ಯಾಕೆ ಮಾತನಾಡುತ್ತೀಯಾ ಎಂದು ಹೇಳಿ ನೆಲಕ್ಕೆ ದೂಡಿ ಹಾಕಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಹಲ್ಲೆಗೊಳಗಾದ ವಿದ್ಯಾರ್ಥಿ ಸನೀಫ್ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದಾನೆ.

ಗುಡ್ಡದಲ್ಲಿ ಜೊತೆಗಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಗೆ ಹಲ್ಲೆ ; ಏಳು ಮಂದಿ ವಿರುದ್ಧ ಸುಳ್ಯದಲ್ಲಿ ಪ್ರಕರಣ ದಾಖಲು 

Sullia Assault on Muslim boy for roaming with Hindu girl, Nine students booked.