ಸಂಸದ ನಳಿನ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ; ಮಂಗಳೂರಿನಲ್ಲಿ ಎರಡು ಪ್ರಕರಣ ದಾಖಲು, ಮೋದಿ ಕಾರ್ಯಕ್ರಮದ ಬಗ್ಗೆ ಗೊಂದಲ ಎಬ್ಬಿಸಿದರೆ ಕ್ರಮ 

31-08-22 01:23 pm       Mangalore Correspondent   ಕರಾವಳಿ

ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಪ್ರದರ್ಶನಕ್ಕೆ ಸಿದ್ಧತೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಮಂಗಳೂರು, ಆಗಸ್ಟ್ 31 : ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ಪ್ರದರ್ಶನಕ್ಕೆ ಸಿದ್ಧತೆ ನಡೆಸಿ, ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು, ಕೆಲವು ವ್ಯಕ್ತಿಗಳ ಫೋಟೊಗಳನ್ನು ಮಾರ್ಕ್ ಮಾಡಿ ಹಂಚುತ್ತಿರುವುದು, ಆಕ್ಷೇಪಾರ್ಹ ಬರಹಗಳನ್ನು ವಾಟ್ಸಪ್, ಫೇಸ್‌ಬುಕ್‌ ನಲ್ಲಿ ಹಂಚುತ್ತಿರುವ ಬಗ್ಗೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣವನ್ನು ಮಂಗಳೂರು ಸಿಟಿ ಸೈಬರ್ ಪೊಲೀಸರು ಮಾನಿಟರ್ ಮಾಡುತ್ತಿದ್ದಾರೆ. ಯಾರು ಇಂತಹ ಬರಹ, ಅನಪೇಕ್ಷಿತ ವಿಚಾರಗಳನ್ನು ಷೇರ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ನಿಗಾ ಇಟ್ಟಿದ್ದೇವೆ. ಇಬ್ಬರನ್ನು ವಶಕ್ಕೆ ಪಡೆಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ‌

Do not forget the 'dark period' of Emergency: PM Modi in 90th Mann ki Baat  address - India News

ಫೋಟೋವನ್ನು ಮಾರ್ಕ್ ಮಾಡಿ ಆಕ್ಷೇಪಾರ್ಹ ರೀತಿ ಚಿತ್ರಿಸಿರುವುದು, ಪ್ರಧಾನಿ ಕಾರ್ಯಕ್ರಮದಲ್ಲಿ ಗೊಂದಲ ಉಂಟು ಮಾಡುವ ರೀತಿ ಪೋಸ್ಟ್ ಮಾಡಿರುವುದನ್ನು ಗಮನಿಸಿದ್ದೇವೆ. ಗೊಂದಲ ಉಂಟು ಮಾಡುವುದಕ್ಕೆಂದೇ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗಿದೆ. ಈ ಗ್ರೂಪ್ ಗಳನ್ನು ಸೋಷಿಯಲ್ ಮಿಡಿಯಾ ಸೆಲ್ ಮಾನಿಟರ್ ಮಾಡುತ್ತಿದೆ. ಯಾವುದೇ ಪೋಸ್ಟ್ ಅಪರಾಧಕ್ಕೆ ಕಾರಣವಾಗಬಲ್ಲ ವಿಚಾರ, ಗೊಂದಲಕ್ಕೀಡು ಮಾಡುವಂತಿದ್ದಲ್ಲಿ ಅಂತಹ ಪೋಸ್ಟ್ ಬಗ್ಗೆ ಪ್ರಕರಣ ದಾಖಲು ಮಾಡುತ್ತೇವೆ.‌ ಇಲ್ಲದಿದ್ದಲ್ಲಿ ಅಂತಹ ವ್ಯಕ್ತಿಗಳಿಂದ ಶೂರಿಟಿ ಬಾಂಡ್ ಪಡೆಯಲಿದ್ದೇವೆ.‌ ಈಗಾಗಲೇ ಎರಡು ಪ್ರಕರಣ ದಾಖಲಿಸಿದ್ದೇವೆ. ಪೋಸ್ಟ್ ಮಾಡಿದವರನ್ನು ವಶಕ್ಕೆ ಪಡೆಯುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ. 

Social media monitoring to be strengthened: Mangaluru police chief |  Mangaluru News - Times of India

ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುತ್ತೇವೆ. ಸೆಕ್ಷನ್ 107, 110 ಅಡಿ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಕಮೀಷನರ್ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪೋಸ್ಟ್ ಹಂಚಿಕೆ ಬಗ್ಗೆ ಯಾರು ದೂರು ಕೊಟ್ಟಿದ್ದಾರೆ ಎಂದು ಕೇಳಿದ ಪ್ರಶ್ನೆಗೆ, ಆ ಬಗ್ಗೆ ಈಗ ಹೇಳುವಂತಿಲ್ಲ ಎಂದರು.

Modi Visit, Defamatory post against bp state president Nalin kumar kateel , 2 cases registered in Mangalore.