ಮೋದಿ ಬರುತ್ತಾರೆಂದು ರಸ್ತೆ ಗುಂಡಿ ಮುಚ್ಚಲು ತರಾತುರಿ ; ಮಂಗಳೂರಿನಲ್ಲಿ ತೇಪೆ ಕಾಮಗಾರಿ, ರಸ್ತೆ ಗುಂಡಿಗೆ ಬಿದ್ದು ಸತ್ತರೂ ನಿರ್ಲಕ್ಷ್ಯ ಮಾಡಿದ್ದ ಶಾಸಕ, ಸಂಸದರಿಗೆ ಸಾರ್ವಜನಿಕರ ತಪರಾಕಿ

28-08-22 12:15 pm       HK News Desk   ಕರಾವಳಿ

ಪ್ರಧಾನಿ ಮೋದಿವ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ತರಾತುರಿಯಲ್ಲಿ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಗುಂಡಿ ಬಿದ್ದ ರಸ್ತೆಗಳನ್ನು ಸರಿ ಮಾಡದ ಜಿಲ್ಲಾಡಳಿತ ಈಗ ಮೋದಿ ಬರುತ್ತಾರೆಂದು ಅರ್ಜೆಂಟ್ ಆಗಿ ರಿಪೇರಿ ಕೆಲಸ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕರು ತರಾಟೆಗೆತ್ತಿಕೊಂಡಿದ್ದಾರೆ.

ಮಂಗಳೂರು, ಆಗಸ್ಟ್ 27: ಪ್ರಧಾನಿ ಮೋದಿವ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ತರಾತುರಿಯಲ್ಲಿ ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಗುಂಡಿ ಬಿದ್ದ ರಸ್ತೆಗಳನ್ನು ಸರಿ ಮಾಡದ ಜಿಲ್ಲಾಡಳಿತ ಈಗ ಮೋದಿ ಬರುತ್ತಾರೆಂದು ಅರ್ಜೆಂಟ್ ಆಗಿ ರಿಪೇರಿ ಕೆಲಸ ಮಾಡಲು ಮುಂದಾಗಿರುವುದಕ್ಕೆ ಸಾರ್ವಜನಿಕರು ತರಾಟೆಗೆತ್ತಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಂಸದ, ಶಾಸಕರನ್ನು ತೀವ್ರ ತರಾಟೆ ನಡೆಸುತ್ತಿದ್ದಾರೆ. ಈವರೆಗೆ ರಸ್ತೆ ಗುಂಡಿಗೆ ಬಿದ್ದು ಜನರು ಸತ್ತರೂ, ಗುಂಡಿ ಸರಿಪಡಿಸಲು ಮುಂದಾಗಿರಲಿಲ್ಲ. ಈಗ ಮೋದಿ ಬರುತ್ತಿದ್ದಾರೆಂದು ತುರ್ತಾಗಿ ರಸ್ತೆ ಕೆಲಸಕ್ಕೆ ಮುಂದಾಗಿದ್ದೀರಿ. ರಸ್ತೆಯಲ್ಲಿ ಗುಂಡಿ ಬಿದ್ದು ಮಳೆ ನೀರು ನಿಂತಿದ್ದರೂ, ಅದರ ಮೇಲೆಯೇ ಡಾಮರು ಹಾಕಲು ತಯಾರಿ ನಡೆಸುತ್ತಿದ್ದಾರೆ. ಈ ರೀತಿಯ ವರ್ತನೆಗೆ ಶಾಸಕರು, ಸಂಸದರನ್ನು ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಕಾಳಜಿ ಇಲ್ಲ, ಈಗ ಮೋದಿಗಾಗಿ ರಸ್ತೆ ಮಾಡುತ್ತಿದ್ದಾರೆಂದು ಟೀಕಿಸುತ್ತಿದ್ದಾರೆ. ಏರ್ಪೋರ್ಟ್ ರಸ್ತೆಯಲ್ಲಿ ಗುಂಡಿ ಬಿದ್ದು ಜನ ಕಷ್ಟ ಪಡುತ್ತಿದ್ದರೂ, ಈವರೆಗೂ ಸರಿ ಮಾಡಿರಲಿಲ್ಲ. ಈಗ ಒಮ್ಮಿಂದೊಮ್ಮೆಲೇ ಏರ್ಪೋರ್ಟ್ ರಸ್ತೆಯನ್ನು ಡಾಮರು ಮಾಡುತ್ತಿದ್ದಾರೆ.

ಜಾಲತಾಣದಲ್ಲಿ ನಳಿನ್ ಕುಮಾರ್ ತಲೆಯನ್ನು ರಸ್ತೆ ಸರಿಪಡಿಸುವ ಕೂಲಿ ಕಾರ್ಮಿಕನ ತಲೆಯ ಭಾಗಕ್ಕೆ ಸಿಕ್ಕಿಸಿ ಮಾಡಿರುವ ಟ್ರೋಲ್ ಪೇಜ್ ಭಾರೀ ವೈರಲ್ ಆಗಿದೆ. ರಸ್ತೆ ಗುಂಡಿ ಸರಿಪಡಿಸಲು ಮೋದಿ ಬರಬೇಕಾಯ್ತು. ಇಲ್ಲಿನ ಜನ ಸತ್ತರೂ, ಗುಂಡಿಗೆ ಬಿದ್ದು ಉರುಳಾಡಿದರೂ ಎಚ್ಚರ ಆಗಿರಲಿಲ್ಲ. ಮೋದಿ ತಿಂಗಳಲ್ಲಿ ಒಮ್ಮೆ ಮಂಗಳೂರಿಗೆ ಬರುತ್ತಾ ಇರಲಿ ಎಂದು ಬರೆದು ಹಾಕಿದ್ದಾರೆ. ಅಲ್ಲದೆ, ಬಂಟ್ವಾಳ ಭಾಗದ ಜನರು ಮೋದಿಯನ್ನು ದಯವಿಟ್ಟು ಕಲ್ಲಡ್ಕ ರಸ್ತೆಯಲ್ಲಿ ಕರ್ಕೊಂಡು ಬನ್ನಿ. ಇಲ್ಲಿಂದ ಸಾಗಿದರೆ ಮೋದಿಗೂ ರಸ್ತೆಯ ದುಸ್ಥಿತಿ ಅರಿವಾದೀತು ಎಂದು ಟೀಕಿಸಿದ್ದಾರೆ.

ಈ ರೀತಿಯ ಟೀಕೆಗಳಿಂದ ಬಿಜೆಪಿ ನಾಯಕರು ತೀವ್ರ ಇರಿಸುಮುರಿಸಿಗೂ ಒಳಗಾಗಿದ್ದಾರೆ. ಈ ಬಾರಿ ಮೋದಿ ಬಂದರೂ, ಜನರು ಸೇರುವುದಿಲ್ಲ ಎನ್ನುವ ಆತಂಕದಿಂದಲೋ ಏನೋ  ತುಳು ಸಿನಿಮಾ ಕಲಾವಿದರಿಂದ ಮೋದಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ. ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಫೇಸ್ಬುಕ್ ಪೇಜ್ ನಲ್ಲಿ ತುಳು ಕಲಾವಿದರ ಆಹ್ವಾನದ ವಿಡಿಯೋ ಬಂದಿದ್ದು ಭಾರೀ ಟೀಕೆಗೂ ಒಳಗಾಗಿದೆ. ತುಳು ಸಿನಿಮಾ ಕಲಾವಿದರು ಒಂದು ಪಕ್ಷದ ಕಾರಣಕ್ಕೆ ಹೆಸರು ಮಾಡಿದ್ದಲ್ಲ. ಇವರು ತುಳು ಭಾಷೆಗಾಗಿ ಹೋರಾಟ ಮಾಡಿಲ್ಲ. ನೇತ್ರಾವತಿ ಪರವಾಗಿ ಪ್ರತಿಭಟನೆ ಇದ್ದಾಗಲೂ ಬಂದಿಲ್ಲ. ಸಮಾಜ ಪರ ಕೆಲಸಕ್ಕೆ ಕರೆದರೂ, ಶೂಟಿಂಗಲ್ಲಿದ್ದೇನೆ ಎನ್ನುತ್ತಿದ್ದರು. ಈಗ ಮೋದಿ ಬರುತ್ತಾರೆ, ನಾವೂ ಬರುತ್ತೇವೆ, ನೀವೂ ಬನ್ನಿ ಎಂದು ಕಲಾವಿದರು ಹೇಳಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

Mangalore dirty roads and potholes full in repair mode as PM Modi to arrive on sep 2nd. Netizens troll Mp and MLA's on social media that Modi should keep coming to Mangalore only then roads will be repaired and lives will be saved.