ಮುಂದುವರಿದ ಹಿಜಾಬ್ ಸಂಘರ್ಷ ; ಸರಕಾರಿ, ಅನುದಾನಿತ ಕಾಲೇಜು ತೊರೆಯುತ್ತಿದ್ದಾರೆ ಮುಸ್ಲಿಂ ವಿದ್ಯಾರ್ಥಿನಿಯರು ! 

22-08-22 01:58 pm       Mangalore Correspondent   ಕರಾವಳಿ

ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು, ಜಟಾಪಟಿಯ ನಡುವಲ್ಲೇ ಶೈಕ್ಷಣಿಕ ವರ್ಷ ಮುಗಿದು ಹೋಗಿದೆ. ಈಗ ಹೊಸತಾಗಿ ಅಡ್ಮಿಷನ್ ಶುರುವಾಗಿ ತರಗತಿ ಆರಂಭಗೊಂಡಿದೆ.‌

ಮಂಗಳೂರು, ಆಗಸ್ಟ್ 22 : ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು, ಜಟಾಪಟಿಯ ನಡುವಲ್ಲೇ ಶೈಕ್ಷಣಿಕ ವರ್ಷ ಮುಗಿದು ಹೋಗಿದೆ. ಈಗ ಹೊಸತಾಗಿ ಅಡ್ಮಿಷನ್ ಶುರುವಾಗಿ ತರಗತಿ ಆರಂಭಗೊಂಡಿದೆ.‌ ಆದರೆ, ಈ ನಡುವೆ ಹಿಜಾಬ್ ಕಾರಣಕ್ಕೆ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಸರಕಾರಿ ಕಾಲೇಜು ತೊರೆಯುತ್ತಿರುವ ಅಂಶ ಬೆಳಕಿಗೆ ಬಂದಿದೆ.‌

ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ 145 ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಖಾಸಗಿ ಕಾಲೇಜುಗಳಿಗೆ ತೆರಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ವ್ಯಾಪ್ತಿಯ ಕಾಲೇಜುಗಳಲ್ಲಿ 900ಕ್ಕೂ ಮುಸ್ಲಿಂ ವಿದ್ಯಾರ್ಥಿನಿಯರಿದ್ದು ಈ ಪೈಕಿ 145 ಮಂದಿ ಕಾಲೇಜು ತೊರೆದಿದ್ದಾರೆ.‌

Yadapadithaya takes charge as MU VC | Deccan Herald

ಸುಮಾರು 16 ಶೇಕಡಾ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಹಿಂಪಡೆದಿದ್ದಾರೆ ಎನ್ನಲಾಗುತ್ತಿದೆ. ಕಾಲೇಜು ನಿಯಮಕ್ಕೆ ಬದ್ಧರಾಗಿ ನಡೆದುಕೊಳ್ಳಲು ಸಾಧ್ಯವಾಗದವರು ಟಿಸಿ ಪಡೆದು ಹೋಗಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪಿ.ಎಸ್ ಯಡಪಡಿತ್ತಾಯ ಹೇಳಿದ್ದರು. ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದ ಆಗಿದ್ದಾಗ ವಿದ್ಯಾರ್ಥಿನಿಯರು ಜಿಲ್ಲಾಡಳಿತದ ಕದ ತಟ್ಟಿದ್ದರು. ಮಂಗಳೂರು ವಿವಿಯ ಉಪ ಕುಲಪತಿಗೂ ದೂರು ನೀಡಿದ್ದರು.‌ ಆದರೆ ಸಿಂಡಿಕೇಟ್ ನಿರ್ಣಯ ಆಗಿದೆ, ನಾವೇನು ಮಾಡುವಂತಿಲ್ಲ ಎಂದು ವಿಸಿಯವರು ನಿರಾಕರಣೆ ಮಾಡಿದ್ದರು. ‌

ಇದೇ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆ ಕಾಲೇಜಿಗೆ ಹೋಗಿದ್ದಾರೆ. ಸರ್ಕಾರಿ ಕಾಲೇಜಿನಿಂದ 34 ಶೇ., ಅನುದಾನಿತ ಕಾಲೇಜಿನಿಂದ 13 ಶೇ. ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆಂದು ಈ ಕುರಿತ ಆರ್ಟಿಐ ಪ್ರಶ್ನೆಗೆ ರಾಜ್ಯ ಶಿಕ್ಷಣ ಇಲಾಖೆ ಉತ್ತರ ನೀಡಿದೆ. 

ಶಿಕ್ಷಣ ಸಚಿವ ಬಿಸಿ ನಾಗೇಶ್ ಕಾರಣ..

Textbook row: Education minister B C Nagesh reaches out to ex-PM Deve Gowda  | Deccan Herald

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿಜಾಬ್ ಪರ ಹೋರಾಟಗಾರ್ತಿ ಗೌಸಿಯಾ, ವಿದ್ಯಾರ್ಥಿನಿಯರು ಟಿಸಿ ಪಡೆಯಲು ಮುಖ್ಯ ಕಾರಣ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಎಂದು ದೂರಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣ ವಿದ್ಯಾರ್ಥಿನಿಯರು ಟಿಸಿ ಪಡೆದು ಖಾಸಗಿ ಕಾಲೇಜು ಸೇರುತ್ತಿದ್ದಾತೆ. ಈ ರೀತಿಯ ಬೆಳವಣಿಗೆ ಸಚಿವ ಬಿ.ಸಿ. ನಾಗೇಶ್ ಕಾರಣ. ಸಂವಿಧಾನದ ಹಕ್ಕಿನಂತೆ ಶಿಕ್ಷಣ ಪಡೆಯಲು ರಾಜ್ಯ ಸರಕಾರ ಬಿಡಲಿಲ್ಲ. ತುಂಡು ಬಟ್ಟೆಯನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ್ದಾರೆ. ಇದರಿಂದ ಹಲವು ಸರ್ಕಾರಿ ಕಾಲೇಜುಗಳಿಗೆ ನಷ್ಟವಾಗಲಿದೆ. ರಾಜ್ಯಾದ್ಯಂತ 30 ಶೇ. ಅಧಿಕ ವಿದ್ಯಾರ್ಥಿನಿಯರು ಕಾಲೇಜು ತೊರೆದಿದ್ದಾರೆ. ಅದೆಷ್ಟೋ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನೇ ಮೊಟಕುಗೊಳಿಸಿದ್ದಾರೆ.‌ ಇದಕ್ಕೆಲ್ಲ ಬಿಜೆಪಿ ಸರಕಾರ ಕಾರಣ ಎಂದು ದೂರಿದ್ದಾರೆ. ಗೌಸಿಯಾ ಹಂಪನಕಟ್ಟೆ ವಿವಿ ಕಾಲೇಜಿನಿಂದ ಟಿಸಿ ಪಡೆದು ಖಾಸಗಿ ಕಾಲೇಜು ಸೇರಿದ್ದಾರೆ.

Hijab fight, Muslims girl leaving government college in Mangalore increases.