ಬ್ರೇಕಿಂಗ್ ನ್ಯೂಸ್
20-08-22 09:53 pm HK News Desk ಕರಾವಳಿ
ಮಂಗಳೂರು, ಆಗಸ್ಟ್ 20: ಮಂಗಳೂರಿನ ಹೆದ್ದಾರಿ ಅವ್ಯವಸ್ಥೆಗೆ ಯಾರನ್ನು ದೂರಬೇಕೋ ಗೊತ್ತಾಗಲ್ಲ. ಬಿಸಿ ರೋಡ್ -ಕಲ್ಲಡ್ಕ- ಮಾಣಿ ಹೆದ್ದಾರಿಯಲ್ಲಿ ಆಮೆಗತಿಯಲ್ಲಿ ರಸ್ತೆ ಕಾಮಗಾರಿ ನಡೀತಿದೆ. ವಾಹನಗಳು ಹೊಂಡ ಬಿದ್ದ ಹೆದ್ದಾರಿಯಲ್ಲಿ ತೇಲಾಡುತ್ತಾ ಸಾಗಬೇಕಾದ ಸ್ಥಿತಿ. ಕೆಲವೊಂದು ಸಾರಿಗೆ ಬಸ್ಸಿನ ಚಾಲಕರು ಪ್ರಯಾಣಿಕರಿದ್ದಾರೆ ಎಂಬ ಗೊಡವೆಯಿಲ್ಲದೆ ಹೊಂಡಕ್ಕೆ ಇಳಿಸಿಕೊಂಡು ಎಂದಿನ ವೇಗದಲ್ಲೇ ಸಾಗುತ್ತವೆ. ಇಂಥದ್ದೇ ಘಟನೆಯೊಂದರಲ್ಲಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರು ಸೊಂಟ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಗಸ್ಟ್ 17ರಂದು ಸುಳ್ಯದ ವಿಜಯ ಕುಮಾರ್ ಎಂಬವರು ಮಂಗಳೂರಿಗೆ ಬಂದು ಮಧ್ಯಾಹ್ನ 12.30ರ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ, ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತು ತನ್ನಷ್ಟಕ್ಕೆ ಮೊಬೈಲಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಬಸ್ಸು ಕಲ್ಲಡ್ಕಕ್ಕೆ ತಲುಪಿದಾಗ ದುರಂತಕ್ಕೀಡಾಗಿದ್ದಾರೆ. ಬಸ್ಸಿನ ಚಾಲಕನ ಧಾವಂತದಿಂದಾಗಿ ಬಸ್ಸು ಕಲ್ಲಡ್ಕದಿಂದ ಸ್ವಲ್ಪ ಮುಂದೆ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಎದ್ದು ಬಿದ್ದು ಯದ್ವಾತದ್ವಾ ಹೋಗಿದ್ದು, ಹಿಂಬದಿ ಸೀಟಿನಲ್ಲಿದ್ದ ವ್ಯಕ್ತಿ ಧಡಕ್ಕನೆ ಮೇಲ್ಭಾಗಕ್ಕೆ ಚಿಮ್ಮಲ್ಪಟ್ಟು ಮತ್ತೆ ನೆಲಕ್ಕೆ ಬಿದ್ದಿದ್ದಾರೆ. ಎರಡು ಬಾರಿ ಹೀಗೆ ಮೇಲೆ ಕೆಳಗೆ ಬಿದ್ದ ಕಾರಣ ತಲೆಯ ಭಾಗಕ್ಕೆ ಮೇಲಿನ ಸರಳು ಬಡಿದಿದ್ದು, ಬೆನ್ನು ಮೂಳೆಗೆ ತೀವ್ರ ಏಟು ಬಿದ್ದಿದೆ. ಬಸ್ಸಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದುದರಿಂದ ಒಬ್ಬರಿಗೆ ಮಾತ್ರ ತೀವ್ರ ಏಟು ಉಂಟಾಗಿತ್ತು.
ವಿಜಯಕುಮಾರ್ ಹಿಂದಿನಿಂದ ಬೊಬ್ಬೆ ಹಾಕಿದ್ದನ್ನು ಕೇಳಿ ಬಸ್ಸನ್ನು ಚಾಲಕ ನಿಲ್ಲಿಸಿದ್ದು, ಸಿಬಂದಿ ಮತ್ತು ಇತರ ಪ್ರಯಾಣಿಕರು ಓಡಿ ಬಂದಿದ್ದಾರೆ. ಸೀಟಿನ ಎಡೆಯಲ್ಲಿ ಅಂಗಾತ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್ ಮಾಡಿ ಬಂಟ್ವಾಳದ ಆಸ್ಪತ್ರೆಗೆ ಒಯ್ಯಲಾಗಿತ್ತು. ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಂದು ಅಡ್ಮಿಟ್ ಮಾಡಲಾಗಿದೆ. ಬೆನ್ನುಮೂಳೆಗೆ ಏಟು ಬಿದ್ದಿದ್ದು, ಎದ್ದು ಕೂರುವುದಕ್ಕೂ ಸಾಧ್ಯವಾಗದೆ ಜೀವಚ್ಛವ ಅನ್ನುವ ಸ್ಥಿತಿಗೆ ತಲುಪಿದ್ದಾರೆ. ಸೊಂಟದಿಂದ ಕೆಳಗಿನ ಭಾಗ ಜೀವ ಕಳಕೊಂಡಂತಿದೆ. ಬೆನ್ನು ಮೂಳೆಯ ಆಪರೇಶನ್ ಮಾಡಬೇಕು, ಕೆಎಂಸಿಗೆ ಹೋಗಬೇಕು ಎಂದು ವೆನ್ಲಾಕ್ ವೈದ್ಯರು ತಿಳಿಸಿದ್ದಾರಂತೆ. ಬಡ ಕುಟುಂಬದ ವಿಜಯ ಕುಮಾರ್ ತಾನು ಮಾಡದ ತಪ್ಪಿಗೆ ಈ ಸ್ಥಿತಿಯಾಗಿದ್ದರಿಂದ ದಿಕ್ಕೆಟ್ಟು ಹೋಗಿದ್ದು, ಕುಟುಂಬಸ್ಥರು ತೀವ್ರ ನೊಂದುಕೊಂಡಿದ್ದಾರೆ.
ಘಟನೆ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬಸ್ಸಿನ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಹೈವೇ ಅಧಿಕಾರಿಗಳ ಮತ್ತು ಕಾಮಗಾರಿ ನಡೆಸುತ್ತಿರುವ ಕಂಪನಿ ಪ್ರತಿನಿಧಿಗಳ ನಿರ್ಲಕ್ಷ್ಯವೂ ಘಟನೆಗೆ ಕಾರಣವಾಗಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸಬೇಕಾಗಿದೆ. ಬೆಳ್ಳಾರೆ ನಿವಾಸಿಯಾಗಿರುವ ವಿಜಯಕುಮಾರ್(41) ಸುಳ್ಯದಲ್ಲಿ ಮೊಬೈಲ್ ಟೆಕ್ನೀಶಿಯನ್ ಆಗಿದ್ದರು. ಮಂಗಳೂರಿಗೆ ಬಂದು ಮೊಬೈಲ್ ಬಿಡಿ ಭಾಗಗಳನ್ನು ಆಯ್ದು ಒಯ್ಯುತ್ತಿದ್ದರು. ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳನ್ನು ಹೊಂದಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಆಗಿರುವ ದುರಂತದಿಂದ ಬಡ ಕುಟುಂಬದ ಆಧಾರ ಸ್ತಂಭವೇ ಕಳಚಿದಂತಾಗಿದ್ದು, ಸುಳ್ಯದ ಶಾಸಕ, ಬಂಟ್ವಾಳದ ಶಾಸಕರಾದ್ರೂ ಹೃದಯ ಮಿಡಿತ ತೋರಿಸಿಯಾರೇ..? ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪನಿಯಿಂದ ಅಥವಾ ಕೆಎಸ್ಸಾರ್ಟಿಸಿ ಕಡೆಯಿಂದ ಪರಿಹಾರ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿದೆ ಕುಟುಂಬ.
Youth who owns a mobile shop who was on his way to Mangalore in a private bus gets paralysis after bus falls into pothole in Kalladka in Mangalore. Youth now is hospitalised whose neck and spinal has been damaged seriously.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm