ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

13-08-22 10:39 pm       Mangalore Correspondent   ಕರಾವಳಿ

ಕೇಂದ್ರ ಸರಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನದಡಿ ನಗರದ ಎಂಸಿಸಿ ಬ್ಯಾಂಕಿನಲ್ಲಿ ಧ್ವಜಾರೋಹಣ ಸಂಭ್ರಮ ಏರ್ಪಡಿಸಲಾಗಿತ್ತು. ಬಾವುಟಗುಡ್ಡೆಯ ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡವನ್ನು ತ್ರಿವರ್ಣ ರೂಪದಲ್ಲಿ ಅಲಂಕರಿಸಲಾಗಿತ್ತು.

ಮಂಗಳೂರು, ಆಗಸ್ಟ್ 13: ಕೇಂದ್ರ ಸರಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನದಡಿ ನಗರದ ಎಂಸಿಸಿ ಬ್ಯಾಂಕಿನಲ್ಲಿ ಧ್ವಜಾರೋಹಣ ಸಂಭ್ರಮ ಏರ್ಪಡಿಸಲಾಗಿತ್ತು. ಬಾವುಟಗುಡ್ಡೆಯ ಎಂಸಿಸಿ ಬ್ಯಾಂಕಿನ ಪ್ರಧಾನ ಕಚೇರಿ ಕಟ್ಟಡವನ್ನು ತ್ರಿವರ್ಣ ರೂಪದಲ್ಲಿ ಅಲಂಕರಿಸಲಾಗಿತ್ತು. ಬ್ಯಾಂಕಿನ ಅಧ್ಯಕ್ಷರು ಸೇರಿದಂತೆ ಸದಸ್ಯರು, ಸಿಬಂದಿ ವರ್ಗ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸಿದರು.

ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ಬ್ಯಾಂಕಿನ ನಿರ್ದೇಶಕರು, ಬ್ಯಾಂಕಿನ ಜನರಲ್ ಮ್ಯಾನೇಜರ್, ಇನ್ನಿತರ ಸಿಬಂದಿ ವರ್ಗದ ಸಮ್ಮುಖದಲ್ಲಿ ರಾಷ್ಟ್ರ ಧ್ವಜ ಹಾರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ ಹೆರಾಲ್ಡ್ ಮೊಂತೇರೋ, ಮಾರ್ಸೆಲ್ ಡಿಸೋಜ, ರೋಶನ್ ಡಿಸೋಜ, ಬ್ಯಾಂಕಿನ ಪ್ರೊಫೆಶನಲ್ ಡೈರೆಕ್ಟರ್ ಸುಶಾಂತ್ ಸಲ್ದಾನಾ, ಶರ್ಮಿಳಾ ಮಿನೇಜಸ್, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್, ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜ್ ಎಫ್. ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

As part of ‘Har Ghar Tiranga’ campaign (August 13 to August 15) under the aegis of ‘Azadi Ka Amrit Mahotsav’ promoted by the Govt of India to encourage people to bring the National Flag (Tiranga) and hoist it to mark the momentous occasion of 75th year of India’s independence, the National Flag was hoisted at the administrative office of MCC Bank Ltd on August 13.