ಉಳ್ಳಾಲದ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಶವ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ 

12-08-22 02:46 pm       Mangalore Correspondent   ಕರಾವಳಿ

ಬೆಳಗ್ಗಿನಿಂದ ಮನೆಯಿಂದ ನಾಪತ್ತೆಯಾಗಿದ್ದ ಉಳ್ಳಾಲದ ಶಿಕ್ಷಕಿಯೋರ್ವರ ಮೃತದೇಹ ಇಂದು ಮಧ್ಯಾಹ್ನ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. 

ಉಳ್ಳಾಲ, ಆ.12: ಬೆಳಗ್ಗಿನಿಂದ ಮನೆಯಿಂದ ನಾಪತ್ತೆಯಾಗಿದ್ದ ಉಳ್ಳಾಲದ ಶಿಕ್ಷಕಿಯೋರ್ವರ ಮೃತದೇಹ ಇಂದು ಮಧ್ಯಾಹ್ನ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. 

ಉಳ್ಳಾಲದ ಅಬ್ಬಕ್ಕ ಸರ್ಕಲ್ ನಲ್ಲಿ ಲಿಟಲ್ ಹಾರ್ಟ್ ಕಿಂಡರ್ ಗಾರ್ಟನ್ ಸಂಸ್ಥೆಯ ಮಾಲಕಿ ಮತ್ತು ಶಿಕ್ಷಕಿಯೂ ಆಗಿರುವ ಹರಿಣಾಕ್ಷಿ ಬಸವರಾಜ್ (51)ಮೃತ ದುರ್ದೈವಿ. ಹರಿಣಾಕ್ಷಿ ಅವರ ಪತಿ ಬಸವರಾಜ್ ಅವರು ನ್ಯಾಯವಾದಿಯಾಗಿದ್ದು ಶಿವಮೊಗ್ಗದಲ್ಲಿದ್ದಾರೆ. ಹರಿಣಾಕ್ಷಿ ಅವರು ತನ್ನ ಇಬ್ಬರು ಪುತ್ರರೊಂದಿಗೆ ಅಬ್ಬಕ್ಕ ಸರ್ಕಲ್ ನಲ್ಲಿ ನೆಲೆಸಿದ್ದರು. ಮನೆಯ ಕಟ್ಟಡದಲ್ಲೇ ನರ್ಸರಿ, ಎಲ್ ಕೆಜಿ, ಯುಕೆಜಿ ಮಕ್ಕಳಿಗೆ ಇತರೇ ಸಿಬ್ಬಂದಿಗಳ ಜೊತೆ ಶಿಕ್ಷಣ, ಟ್ಯೂಷನ್ ನೀಡುತ್ತಿದ್ದರು. ಹರಿಣಾಕ್ಷಿ ಅವರ ಹಿರಿಯ ಪುತ್ರ ನಿತಿನ್ ರಾಜ್ ಇನ್ಫೋಸಿಸ್ ಸಂಸ್ಥೆಯಲ್ಲಿ ಇಂಜಿನಿಯರ್ ಆಗಿದ್ದು ಕಿರಿಯ ಪುತ್ರ ಅಮಿತ್ ರಾಜ್ ಎಲೋಶಿಯಸ್ ಕಾಲೇಜಲ್ಲಿ ಬಿಬಿಎ ದ್ವಿತೀಯ ವರ್ಷ ವ್ಯಾಸಂಗ ನಡೆಸುತ್ತಿದ್ದಾನೆ. 

ಹರಿಣಾಕ್ಷಿ ಅವರ ಪುತ್ರರು ಇಂದು ಬೆಳಗ್ಗೆ ಎದ್ದಾಗ ತಾಯಿ ಮನೆಯಲ್ಲಿ ಇರಲಿಲ್ಲವಂತೆ. ಗಾಬರಿಗೊಂಡ ಮಕ್ಕಳು ತಾಯಿಗಾಗಿ ಹುಡುಕಾಟ ನಡೆಸಿದ್ದು ಕೊನೆಗೆ ಉಳ್ಳಾಲ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ಮಧ್ಯಾಹ್ನದ ವೇಳೆ ಸಮುದಾಯ ಆರೋಗ್ಯ ಕೇಂದ್ರದ ಬಾವಿ ಬಳಿ ಹರಿಣಾಕ್ಷಿ ಅವರು ಧರಿಸುತ್ತಿದ್ದ ಚಪ್ಪಲಿ ದೊರಕಿದೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯ ಈಜು ರಕ್ಷಕರು ಸೇರಿ ಬಾವಿಯೊಳಗಿದ್ದ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ಹರಿಣಾಕ್ಷಿ ಅವರು ಹಣಕಾಸಿನ ವಿಚಾರದಲ್ಲಿ ಸದೃಢರಾಗಿದ್ದು ಕೊರೊನಾ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಜಾತಿ, ಮತ ನೋಡದೆ ಆಹಾರ ಸಾಮಾಗ್ರಿಗಳನ್ನ ನೀಡಿದ್ದರಂತೆ. ದಿನ ನಿತ್ಯವೂ ನಸುಕಿನ ವೇಳೆ ಅವರು ವಾಕಿಂಗ್ ನಡೆಸುತ್ತಿದ್ದು ನಿನ್ನೆ ಬೆಳಗ್ಗೆಯೂ ವಾಕಿಂಗ್ ಹೋಗಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ನಿನ್ನೆ ಸಂಜೆ ತಲೆನೋವು ಕಾರಣದಿಂದ ಸುಸ್ತಾಗಿದ್ದರೆಂದು ಪರಿಚಯಸ್ಥರು ತಿಳಿಸಿದ್ದಾರೆ.

Kinder garden school owners  Body found in Health department well at Ullal in Mangalore, suicide suspected. The deceased woman has been identified as Harinakshi (51). The reason for her extreme step is still unknown. Her husband is said to be a lawyer by profession. She was the owner of a kinder garden school in Ullal.