ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ; ಕೃತ್ಯ ಎಸಗಿದ್ದ ಹಂತಕರ ಹೆಡೆಮುರಿ ಕಟ್ಟಿದ ಪೊಲೀಸರು 

11-08-22 11:06 am       Mangalore Correspondent   ಕರಾವಳಿ

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕಡೆಗೂ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 15 ದಿನಗಳಿಂದ ಪೊಲೀಸರನ್ನು ಯಾಮಾರಿಸಿ ಅಡಗಿಕೊಂಡಿದ್ದ ಮೂವರನ್ನು ಪೊಲೀಸರು ನಿಗೂಢ ತಾಣದಿಂದ ಬಂಧಿಸಿ ಕರೆತಂದಿದ್ದಾರೆ. 

ಮಂಗಳೂರು, ಆಗಸ್ಟ್ 11: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕಡೆಗೂ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 15 ದಿನಗಳಿಂದ ಪೊಲೀಸರನ್ನು ಯಾಮಾರಿಸಿ ಅಡಗಿಕೊಂಡಿದ್ದ ಮೂವರನ್ನು ಪೊಲೀಸರು ನಿಗೂಢ ತಾಣದಿಂದ ಬಂಧಿಸಿ ಕರೆತಂದಿದ್ದಾರೆ. 

ಶಿಹಾಬ್ ಸುಳ್ಯ, ಬಶೀರ್ ಎಲಿಮಲೆ, ರಿಯಾಸ್ ಅಂಕತ್ತಡ್ಕ ಬಂಧಿತ ಆರೋಪಿಗಳು.‌ ಈ ಪೈಕಿ ಶಿಹಾಬ್ ಪ್ರಮುಖ ಆರೋಪಿ ಎನ್ನಲಾಗುತ್ತಿದ್ದು ಸುಳ್ಯದಲ್ಲಿಯೇ ಪ್ರವೀಣ್ ಕೊಲೆಗೆ ಇತರರೊಂದಿಗೆ ಸೇರಿ ಸಂಚು ರೂಪಿಸಿದ್ದ. ಮಹತ್ವದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ ಸುಳ್ಯಕ್ಕೆ ಕರೆತಂದಿದ್ದಾರೆ. 

B'luru city police commissioner Alok Kumar transferred | Deccan Herald

ನಿನ್ನೆಯಷ್ಟೇ ಮಂಗಳೂರಿಗೆ ಬಂದಿದ್ದ ಎಡಿಜಿಪಿ ಅಲೋಕ್ ಕುಮಾರ್, ಹಂತಕರ ವಿಳಾಸ, ಫೋಟೊ ಎಲ್ಲ ಗೊತ್ತಿದೆ, ಆಗಾಗ ತಮ್ಮ ಅಡಗು ತಾಣಗಳನ್ನು ಬದಲಿಸುತ್ತಿದ್ದಾರೆ. ಕೆಲವರು ಸೇರಿ ಬಚ್ಚಿಡುವ ಕೆಲಸ ಮಾಡುತ್ತಿದ್ದಾರೆ. ಏಳೆಂಟು ಜಿಲ್ಲೆಗಳ ಪೊಲೀಸ್ ಪ್ರಮುಖರ ಜೊತೆಗೆ ಈ ಸಂಬಂಧ ಸಭೆ ನಡೆಸಿ, ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡುತ್ತೇನೆ ಎಂದಿದ್ದರು. ಅಲ್ಲದೆ, ಆರೋಪಿಗಳು ಸಿಗದೇ ಇದ್ದರೆ ಅವರ ವಿರುದ್ಧ ಕೋರ್ಟ್ ವಾರೆಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕುವುದಕ್ಕೂ ಮುಂದಾಗುತ್ತೇವೆ ಎನ್ನುವ ಮೂಲಕ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಸೆರೆಹಿಡಿದಿದ್ದಾರೆ.

Three prime accused arrested from Sullia in Praveen Bellare case by Dk police. The arrested have been identified as Shiyab Sullia, Basheer and Riyaz. ADGP Alok Kumar confirmed on Wednesday that the process of attaching properties of the accused persons is on. The police along with the National Intelligence Agency (NIA) will attach the properties of the accused persons, he added.